15 December 2017

ಸೂರ್ಯೋದಯ : 06.30

ಸೂರ್ಯಾಸ್ತ : 05.54

ರಾಹು ಕಾಲ : 10.30-12.00
ಗುಳಿಕ ಕಾಲ : 07.30-09.00
ಯಮಗಂಡ ಕಾಲ : 03.00-04.30

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ವ್ಯವಹಾರದಲ್ಲಿ ಜಾಗ್ರತೆ ವಹಿಸುವುದು ಇಂದು ಉತ್ತಮ. ವಾಹನ ಖರೀದಿ ಇತ್ಯಾದಿ ವ್ಯವಹಾರವು ಅಷ್ಟೊಂದು ಲಾಭದಾಯಕವಲ್ಲ. ವೈಯಕ್ತಿಕ
ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಯೋಗ ಇಂದಿಗಿದೆ. ಓಡಾಟವು ಹೆಚ್ಚಾಗಲಿದೆ.
ಋಣ ಭಾರ ಹೆಚ್ಚಲಿದೆ. ಇದಕ್ಕೆ ನಿಮ್ಮ ಖರ್ಚು-ವೆಚ್ಚದ ಬಗ್ಗೆ ನಿಗಾವಹಿಸಿಕೊಳ್ಳಿ. ವ್ಯವಹಾರಿಕವಾಗಿ ಗೊಂದಲಗಳು ನಿರ್ಮಾಣವಾಗಲಿದೆ. ಕೌಟುಂಬಿಕ ಕ್ಷೇತ್ರದಲ್ಲಿ ಸಂತೋಷವನ್ನು ಹೊಂದಲಿದ್ದೀರಿ. ಸಂಗಾತಿಯೊಂದಿಗೆ ನಿಮ್ಮ ಪ್ರೀತಿಯು ಹೆಚ್ಚಲಿದೆ.
ದಾಯಾದಿಗಳೊಂದಿಗೆ ಆಸ್ತಿ ವಿಚಾರವಾಗಿ ಚರ್ಚೆಯು ಸ್ವಲ್ಪ ವಿರಸಕ್ಕೆ ಕಾರಣವಾಗಬಹುದು. ಆದ್ದರಿಂದ ಇಂದು ಈ ಬಗ್ಗೆ ವ್ಯವಹರಿಸುವಾಗ
ಬಹು ಎಚ್ಚರವನ್ನು ವಹಿಸಿ. ಮಿತ್ರರ ಸಲಹೆ -ಸೂಚನೆಯನ್ನು ತೆಗೆದುಕೊಂಡು ನಿರ್ಧಾರವನ್ನು ಕೈಗೊಂಡರೆ ಶುಭ.
ದಿನದ ಮಟ್ಟಿಗೆ ಮಿತ್ರರ ಸಲಹೆ-ಸೂಚನೆಯನ್ನು ತೆಗೆದುಕೊಳ್ಳದಿರುವುದೇ ಲೇಸು. ನಿಮ್ಮ ನಿರ್ಧಾರವನ್ನು ಮಾತ್ರ ಕಾರ್ಯರೂಪಕ್ಕೆ ತನ್ನಿ.
ಧಾರ್ಮಿಕ ಕಾರ್ಯವು ಶುಭಾರಂಭವಾಗಲಿದೆ. ಶರೀರ ಗುಣಧರ್ಮದಲ್ಲಿ ಆಗುವ ವ್ಯತ್ಯಾಸಗಳನ್ನು ಅಲಕ್ಷಿಸುವುದು ಬೇಡ.
ರಾಜಕೀಯವಾಗಿ ಯಾವುದೇ ನಿರ್ಧಾರವನ್ನು ಕೈಗೊಳ್ಳುವುದು ಬೇಡ. ಕೌಟುಂಬಿಕ ಕಾರ್ಯದಲ್ಲಿ ಪ್ರಗತಿಯನ್ನು ಕಂಡು ಮನಸ್ಸಿಗೆ ಸಮಾಧಾನ ವನ್ನು ಹೊಂದುವ ಯೋಗವಿದೆ. ಹಣಕಾಸಿನ ವ್ಯವಹಾರದಲ್ಲಿ ಕೊಂಚ ಲಾಭಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ.
ಸ್ಥಿರಾಸ್ತಿ ಖರೀದಿಯ ಯೋಗವಿದೆ. ಇದಕ್ಕೆ ನಿಮ್ಮ ಬುದ್ದಿವಂತಿಕೆಯನ್ನು ತೊಡಗಿಸಿ ಸರಿಯಾದ ನಿರ್ಧಾರಕ್ಕೆ ಬನ್ನಿ. ಖರೀದಿ ವಿಚಾರದಲ್ಲಿ
ಗೊಂದಲಗಳು ಮೂಡಬಹುದು. ಇದನ್ನು ನಿವಾರಿಸಿ ನಿರ್ಧಾರಕ್ಕೆ ಬನ್ನಿ. ವಾತ ಸಂಬಂಧಿ ತೊಡಕು ಶರೀರದಲ್ಲಿ ಕಾಣಿಸಿಕೊಳ್ಳಲಿದೆ.
ಸಕಾರಾತ್ಮಕವಾಗಿ ವಿಚಾರ ಮಾಡುವುದನ್ನು ರೂಢಿಸಿಕೊಳ್ಳಿ. ಪರರ ಅಭ್ಯುದಯದಿಂದ ಮರುಗುವುದು ಬೇಡ. ನಿಮ್ಮ ಶಕ್ತಿ- ಸಾಮರ್ಥ್ಯದಿಂದ ಉದ್ಯೋಗರಂಗದಲ್ಲಿ ಗೌರವ- ಲಾಭವನ್ನು ಇಂದು ನೀವು ಹೊಂದಬಹುದಾಗಿದೆ. ಕೌಟುಂಬಿಕ ವಿಚಾರದಲ್ಲಿ ಶಾಂತಿ ದೊರಕಲಿದೆ.
ಉದ್ಯೋಗದಲ್ಲಿ ಸ್ಥಿರತೆ-ನೆಮ್ಮದಿಯನ್ನು ಕಾಣುವ ಯೋಗ ಇಂದಿಗಿದೆ. ಲಾಭವನ್ನು ಮಾಡಿಕೊಳ್ಳುವುದರ ಜತೆಗೆ ಖರ್ಚನ್ನು ಸರಿದೂಗಿಸಿ ಕೊಳ್ಳುವ ಕೌಶಲ ನಿಮಗೆ ಇಂದು ಬರಲಿದೆ. ಮಾತು ಮಿತವಾಗಿರಲಿ. ಮಾತಿನಿಂದ ಆಗುವ ಕಲಹ ಇಂದು ಹೆಚ್ಚು.
ದ್ರವ್ಯ ಪದಾರ್ಥಗಳ ವ್ಯಾಪಾರ- ವ್ಯವಹಾರಗಳು ಲಾಭವನ್ನು ತಂದುಕೊಡಲಿದೆ. ಹವ್ಯಾಸಗಳ ಬಗ್ಗೆ ಹೆಚ್ಚು ಲಕ್ಷ ನೀಡುವ ಅದರಿಂದ ಮನಸ್ಸು ಸಮಾಧಾನ ಹೊಂದುವ ಅವಕಾಶವಿದೆ. ಗುರು ಸ್ಮರಣೆ ಮಾಡುವುದರಿಂದ ಅಭ್ಯುದಯವಿದೆ.
ವೃತ್ತಿಯಲ್ಲಿ ಬದಲಾವಣೆಯನ್ನು ಕಾಣುವ ಯೋಗ. ಹೊಸ ಕೆಲಸ ಕಾರ್ಯವನ್ನು ಕೈಗೆತ್ತಿಕೊಳ್ಳಿ. ಶುಭ ಫಲಗಳು ಉಂಟಾಗಲಿದೆ. ಸಹವರ್ತಿಗಳ ಜತೆ ಸ್ನೇಹ, ಸಂಬಂಧ ಇಂದು ಬಲಗೊಳ್ಳಲಿದೆ. ಉಷ್ಣ ಶರೀರ ಹೊಂದುವ ಸಾಧ್ಯತೆ ಇದೆ. ಇದನ್ನು ನಿವಾರಿಸಿಕೊಳ್ಳಿ.
ಬಂಧು-ಮಿತ್ರರ ಸಹಾಯ-ಸಹಕಾರವು ಇಂದು ಒದಗಿ ಬರಲಿದೆ. ಮನೆಯಲ್ಲಿ ಸಂತೋಷದ ವಾತಾವರಣವನ್ನು ಹೊಂದಲಿದ್ದೀರಿ. ಕೌಶಲ
ಪೂರ್ಣ ಕಾರ್ಯದಿಂದ ಎಲ್ಲರನ್ನು ಆಕರ್ಷಿಸುವ ಸಾಮರ್ಥ್ಯ ನಿಮಗೆ ಇಂದು ಬರಲಿದೆ. ಆಹಾರದಲ್ಲಿ ಎಚ್ಚರದಿಂದ ಇರಿ.
ಧನ್ಯತಾ ಭಾವ ಉಂಟಾಗಿ, ಒಳ್ಳೆಯ ಕಾರ್ಯದಲ್ಲಿ ತೊಡಗಿಕೊಳ್ಳಲು ಪ್ರವೃತ್ತರಾಗುತ್ತೀರಿ. ಸಾಮಾಜಿಕ ಕಾರ್ಯದಲ್ಲಿ ನಿಮ್ಮನ್ನು ನೀವು ತೊಡಗಿಸಿ ಕೊಳ್ಳುವ ಸಂದರ್ಭ ಬರಲಿದೆ. ಕುಟುಂಬದ ಕೆಲಸ ಕಾರ್ಯವು ನಿಧಾನವಾಗಿ ಪ್ರಾರಂಭವಾಗಲಿದೆ. ಗೊಂದಲ ರಹಿತ ದಿನ.

By : ವಿ.ಡಿ.ಭಟ್ ಕರಸುಳ್ಳಿ (ಶಿರಸಿ)

Contact No : 9449360806

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top