19 Aug 2017

ಸೂರ್ಯೋದಯ : 06.06

ಸೂರ್ಯಾಸ್ತ : 06.39

ರಾಹು ಕಾಲ : 09.00-10.30
ಗುಳಿಕ ಕಾಲ : 06.00-07.30
ಯಮಗಂಡ ಕಾಲ : 01.30-03.00

ಹೇಮಲಂಭಿನಾಮ ಸಂವತ್ಸರ ದಕ್ಷಿಣಾಯನ ಋತು-ವರ್ಷ, ಮಾಸ-ಶ್ರಾವಣ, ಪಕ್ಷ-ಕೃಷ್ಣ, ಶನಿವಾರ, ದ್ವಾದಶಿ, ನಿತ್ಯ ನಕ್ಷತ್ರ-ಪುನ ರ್ವಸು, ಯೋಗ-ಸಿದ್ಧಿ, ಕರಣ-ತ್ರಿಪತಿ.

ಉದ್ಯೋಗ ಕ್ಷೇತ್ರದಲ್ಲಿ ಸಾಮರಸ್ಯದಿಂದಾಗಿ ನೆಮ್ಮದಿ ಹೊಂದಲಿದ್ದೀರಿ. ದೇಹಾರೋಗ್ಯದ ಬಗ್ಗೆ ಹೆಚ್ಚು ಲಕ್ಷ ವಹಿಸಬೇಕಾದದ್ದು ಈ ದಿನ ಅತೀ ಅಗತ್ಯ.ದೂರದ ಪ್ರಯಾಣ ಬೇಡ. ವಸ್ತುಖರೀದಿಯಿಂದ ಲಾಭವಿಲ್ಲ.
ನ್ಯಾಯಾಲಯದಲ್ಲಿ ಇದ್ದ ವಿವಾದ ಬಗೆಹರಿಯುವ ಲಕ್ಷಣವಿದೆ. ಹಿರಿಯರ ಅನುಗ್ರಹದಿಂದ ಕೌಟುಂಬಿಕ ಕಾರ್ಯದಲ್ಲಿ ಪ್ರಗತಿ. ಹಣಕಾಸು, ಶೇರು ವಹಿವಾಟು ಕಾರ್ಯಕ್ಕೆ ಇಂದು ಕೈಹಾಕುವುದು ಬೇಡ.
ಪ್ರಯಾಣದಿಂದ ಇಂದಿನ ದಿನ ಪ್ರಾರಂಭವಾಗಲಿದ್ದು,,ಇದರಿಂದ ವ್ಯಾವಹಾರಿಕ ಕಾರ್ಯದಲ್ಲಿ ವಿಶೇಷ ಲಾಭ ಉಂಟಾಗಲಿದೆ. ಶರೀರದಲ್ಲಿ ಪಿತ್ತವ್ಯಾದಿ ಕಾಣಿಸಿಕೊಳ್ಳಲಿದೆ.
ಹಮ್ಮಿಕೊಂಡ ಕಾರ್ಯ ನಿರ್ವಿಘ್ನವಾಗಿ ನೆರವೇರಿ ಮನಸ್ಸಿಗೆ ಉತ್ಸಾಹ ತಂದು ಕೊಡಲಿದೆ. ತಾನೆಂಬ ಅಹಂಕಾರವೂ ಈದಿನ ಮೂಡಿದಲ್ಲಿ ಆಶ್ಚ ರ್ಯವೇನೂ ಇಲ್ಲ.
ಎದುರಾಳಿಗಳ ತಂತ್ರವನ್ನು ಅರಿತು ನೀವು ಇಂದು ಹೆಜ್ಜೆ ಹಾಕಿ. ಎಲ್ಲ ತಂತ್ರಗಳೆಲ್ಲಾ ಗುಪ್ತವಾಗಿರಲಿ. ದೇವ ಬಲ ನಿಮಗೆ ಇಂದು ಪೂರ್ಣವಿದೆ. ನಿಮ್ಮಿಚ್ಚೆಯಂತೆ ದಿನವನ್ನು ಕಳೆಯಿರಿ. ಶುಭವಾಗಲಿದೆ.
ವ್ಯಾವಹಾರಕ ಮುಗ್ಗಟ್ಟು ಬಹುದೊಡ್ಡ ಸಮಸ್ಯೆ ಎಂದು ಭಾವಿಸಿಕೊಳ್ಳಬೇಡಿ. ಸಮಾಜದಲ್ಲಿ, ಕುಟುಂಬದಲ್ಲೂ ಗೌರವ-ನೆಮ್ಮದಿಯನ್ನು ಈದಿನ ಹೊಂದಲಿದ್ದೀರಿ.
ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಹೋರಾಟದ ಫಲ ಇಂದು ಕಾಣಲಿದ್ದೀರಿ. ಬರಬೇಕಾದ ಸ್ಥಾನಮಾನವು ಈ ದಿನ ದೊರಕಲಿದೆ. ಇದರಿಂದ ನೆಮ್ಮದಿ ಕಾಣಲಿದ್ದೀರಿ.
ವಾಹನ ಖರೀದಿಯನ್ನು ದಿನ ಮಟ್ಟಿಗಾದರೂ ಮುಂದೂಡುವುದು ಒಳಿತು. ಕಬ್ಬಿಣ, ತೈಲ ವ್ಯಾಪಾರಿಗಳಿಗೆ ಈ ದಿನ ಲಾಭ ತರಲಾರದು.ಕಿರಿಯರ ಸಹಾಯದಿಂದ ನಿಮ್ಮ ಕೆಲಸ ಸುಲಭ.
ಸಲಹೆ-ಸೂಚನೆಯನ್ನು ಮಿತ್ರರಿಗೆ ನೀಡಿ ಕೆಲಸ ಯಶಸ್ವಿಯಾಗುವಂತೆ ಮಾಡುವ ಸಂದರ್ಭ ಈ ದಿನಕ್ಕಿದೆ. ಪರೋಪಕಾರದಿಂದ ನಿಮ್ಮ ಗೌರವ ಹೆಚ್ಚಲಿದೆ.
ಉದ್ಯೋಗ ವಿಭಾಗದಲ್ಲಿ ಬದಲಾವಣೆ ಸಂದರ್ಭ ಬರಲಿದೆ. ಇದು ಶುಭಕ್ಕಾಗಿ ಎಂಬುದು ತಿಳಿದು ಸ್ವೀಕರಿಸಿ. ಇದರಿಂದ ನೆಮ್ಮದಿ ದೊರಕಲಿದೆ. ಬ್ಯಾಂಕ್ ವ್ಯವಹಾರದಿಂದ ಆರ್ಥಿಕ ಬಲಿಷ್ಠತೆ ಲಭ್ಯ.
ಸಜ್ಜನ ಸಹವಾಸದಿಂದ ಉತ್ಸಾಹ ಇಮ್ಮಡಿಯಾಗುವ ದಿನ. ಹೊಸದೊಂದು ಯೋಜನೆಯು ಈ ದಿನ ಹುಟ್ಟಿಕೊಂಡು ಶುಭ ಮುಖದ ಪ್ರಯತ್ನಕ್ಕೆ ಕಾರಣರಾಗುತ್ತೀರಿ.
ಸ್ವಂತ ವಾಹನವು ಕಿರಿಕಿರಿ ಉಂಟುಮಾಡಬಹುದು. ಉದ್ಯೋಗದಲ್ಲಿ ಹೊಸ ವ್ಯಕ್ತಿಗಳ ಪರಿಚಯ ಆಗಲಿದೆ. ಬೆಳ್ಳಿ- ಬಂಗಾರ ವ್ಯವಹಾರದಿಂದ ತುಸು ಲಾಭ.ಗುರುವಿನ ಅನುಗ್ರಹ ಅಗತ್ಯ.

By :

Contact No :

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top