19 June 2017

ಸೂರ್ಯೋದಯ : 06.36

ಸೂರ್ಯಾಸ್ತ : 06.28

ರಾಹು ಕಾಲ : 07.30-09.00
ಗುಳಿಕ ಕಾಲ : 01.30-03.00
ಯಮಗಂಡ ಕಾಲ : 10.30-12.00

ಹೇಮಲಂಬಿನಾಮ ಸಂವತ್ಸರ ಉತ್ತರಾಯಣ. ಋತು-ಗ್ರೀಷ್ಮ, ಮಾಸ-ಜೇಷ್ಠ, ಪಕ್ಷ-ಕೃಷ್ಣ, ದಶಮಿ, ಸೋಮವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಶೋಭನ, ಕರಣ-ವಣಿಜೆ

ಹೊಸ ಕಾರ್ಯ ಕೈಗೆತ್ತಿಕೊಳ್ಳುವುದು ಬೇಡ. ಇದ್ದ ಕಾರ್ಯಕ್ರಮ ಅಚ್ಚುಕಟ್ಟಾಗಿ ಮುಗಿಸಿಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಹಾಸಿಗೆ ಇದ್ದಷ್ಟ ಕಾಲು ಚಾಚುವುದು ಒಳಿತು.
ಧಾರ್ಮಿಕ ಕ್ಷೇತ್ರದಲ್ಲಿ ನಿಮ್ಮ ವರ್ತನೆಯು ಇನ್ನೂ ಪಕ್ವತೆಯನ್ನು ಹೊಂದಿದೆ. ಹಿರಿಯರಿಂದ ಅಪಮಾನಕ್ಕೆ ಒಳಗಾಗುವ ಸಾಧ್ಯತೆ ಇದೆ ಎಚ್ಚರ. ನಿಧಾನತೆಗೆ ಪ್ರಾಧಾನ್ಯತೆ ನೀಡಿ.
ಸಾಕು ಪ್ರಾಣಿಗಳಿಂದ ನಷ್ಟವನ್ನು ಹೊಂದುವ ಸಂದರ್ಭ. ಅದಕ್ಕಾಗಿ ವ್ಯಾಪಾರ ವ್ಯವಹಾರ ಬೇಡ. ದೂರದ ಪ್ರವಾಸ ಯೋಗ ಕೂಡಿ ಬರಲಿದೆ. ಇದಕ್ಕೆ ಸಿದ್ಧರಾಗಿ.
ಕವಿಯಾಗುವ ಹಂಬಲ ಹೆಚ್ಚಲಿದೆ. ಇದರಿಂದ ಕಾವ್ಯ ಕಥೆ, ಬರವಣಿಗೆ ಪ್ರಯತ್ನ ಹೆಚ್ಚಾಗಲಿದೆ. ಜತೆಗೆ ಇದರಿಂದ ಮಾನಸಿಕ ನೆಮ್ಮದಿಯನ್ನು ಹೊಂದಲಿದ್ದೀರಿ.
ನಿಮ್ಮ ಮಾತಿಗೆ ಪ್ರಭಾವವಾಗಿ ನಿಮ್ಮ ಅಭಿಮಾನಿಗಳಾಗುವ ವರ್ಗ ಇಂದು ಹೆಚ್ಚಾಗಲಿದೆ. ಭಾಷೆ ಮೇಲಿನ ಹಿಡಿತ ಹೆಚ್ಚಲಿದೆ. ಆರೋಗ್ಯದ ವಿಚಾರದಲ್ಲಿ ಉಷ್ಣತೆ ಬಗ್ಗೆ ನಿಗಾ ಇರಲಿ.
ಉಗುರಿನಿಂದ ಆಗುವ ಕೆಲಸಕ್ಕೆ ನೀವು ಕೊಡಲಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಉಪಾಯದಿಂದ ಕಾರ್ಯವನ್ನ ಸಾಧಿಸಿಕೊಳ್ಳಿ. ಉಗ್ರತೆಯನ್ನು ಬಿಟ್ಟು ಬಿಡಿ.
ವಸ್ತು ಖರೀದಿಯಲ್ಲಿ ಗಡಿಬಿಡಿ ಬೇಡ. ಸಾಧಕ ಬಾಧಕದ ಬಗ್ಗೆ ವಿಚಾರಿಸಿಕೊಂಡು ಖರೀದಿ ಬಗ್ಗೆ ನಿರ್ಧಾರಕ್ಕೆ ಬನ್ನಿ. ಮನಶಾಂತಿಗೆ ದೇವರ ಧ್ಯಾನ ಮಾಡಿ.
ವಸ್ತುಗಳನ್ನು ಕೊಡುವುದರಲ್ಲಿ ಇಂದು ಲಾಭ ನಿಮಗಿದೆ. ನಿಮ್ಮ ಹಣಕಾಸಿನ ಲಾಭ ನಿಮ್ಮ ಕುಟುಂಬದವರ ಕಣ್ಣು ಕೆಂಪಾಗಿಸಲಿದೆ. ಎಚ್ಚರವಾಗಿ ರುವುದು ಒಳಿತು.
ಮನೆಯ ಗೋಡೆಯಲ್ಲಾ ಕಿವಿಯಾಗಿ ಜಾಗ್ರತಾವಸ್ಥೆಯಲ್ಲಿ ಇಂದು ಇರಲಿದೆ. ಅಕ್ಕ-ಪಕ್ಕದ ಮನೆಯವರ ಬಗ್ಗೆ ನಿಮ್ಮ ಭದ್ರತೆಯ ದೃಷ್ಟಯಿಂದ ಎಚ್ಚರವಾಗಿರುವುದು ಒಳಿತು.
ಮನಸ್ಸಿನಲ್ಲಿ ಇದ್ದ ಸಂಘರ್ಷವನ್ನು ಮಾತಿನಲ್ಲಿ ತೋರಿಸಬೇಡಿ. ನೀವು ಕೆಟ್ಟವರು ಎಂದು ಹೇಳಿಸಿಕೊಳ್ಳಲು ಈ ದಿನ ಕಾಯುತ್ತಿದೆ. ಕಡಿಮೆ ಪ್ರತಿ ಕ್ರಿಯೆ. ಹೆಚ್ಚು ಕೆಲಸ ಈ ದಿನ ಸೂತ್ರವಾಗಿರಲಿ.
ಮಾನವೀಯತೆಯಿಂದ ವರ್ತಿಸಿದರೂ ಮಾನಕ್ಕೆ ಸ್ವಲ್ಪ ಚ್ಯುತಿ ಉಂಟಾಗಲಿದೆ. ಇದನ್ನು ಲಕ್ಷಿಸುವುದು ಬೇಡ. ವ್ಯಕ್ತಿಗಳ ಪರೀಕ್ಷೆಯಿಂದ ಎಚ್ಚೆತ್ತು ವರ್ತಿಸುವುದು ಉತ್ತಮ.
ಘನ ಗಂಭೀರತೆಯಿಂದ ಜೀವನದಲ್ಲಿ ಯಾವುದು ಸೊಗಸಾಗಿ ಹುಟ್ಟುಕೊಳ್ಳದು ಖುಷಿಯಿಂದಲೇ ಕಾರ್ಯ ಪ್ರಾರಂಭಿಸಿ. ಎಲ್ಲವೂ ಸರಿ ಹೊಂದಿ ಶ್ರೇಯಸ್ಸು ದೊರಕಲಿದೆ.

By :

Contact No :

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top