22 January 2018

ಸೂರ್ಯೋದಯ : 06.46

ಸೂರ್ಯಾಸ್ತ : 6.16

ರಾಹು ಕಾಲ : 7.30-9.00
ಗುಳಿಕ ಕಾಲ : 1.30-3.00
ಯಮಗಂಡ ಕಾಲ : 10.30-12.00

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.


ಸಾಂಸ್ಕೃತಿಕ ಕಾರ್ಯದಲ್ಲಿ ಪಾಲ್ಗೊಂಡು ಮನಸ್ಸನ್ನು ಹಗುರಾಗಿಸಿಕೊಳ್ಳಲಿದ್ದೀರಿ. ಸರಕಾರಿ ಕೆಲಸ ಕಾರ್ಯದಲ್ಲೂ ಪ್ರಗತಿಯನ್ನು ಇಂದು ಕಾಣಲಿದ್ದೀರಿ. ಹಿರಿಯರ ಜತೆಗೆ ವಿನಮ್ರವಾಗಿ ಇರುವುದನ್ನು ಮರೆಯಬೇಡಿ.


ಮೂಢನಂಬಿಕೆಯ ಆಚರಣೆಯು ಇಂದು ನಿಮ್ಮಿಂದ ಹೆಚ್ಚಾಗಲಿದೆ. ಜಾಗ್ರತೆಯಿಂದ ಇದನ್ನು ನಿಯಂತ್ರಿಸಿಕೊಳ್ಳಿ. ಕಷ್ಟಗಳ ನಿವಾರಣೆಗೆ ಮಿತ್ರರಲ್ಲಿ ಹೇಳಿಕೊಳ್ಳುವುದಕ್ಕಿಂತ ಕಠಿಣ ಪರಿಶ್ರಮಕ್ಕೆ ಹೆಚ್ಚು ಒತ್ತು ನೀಡಿ. ಆಗ ಸಾಮಾನ್ಯ ಶುಭಫಲ
ಉದ್ಯೋಗ ರಂಗದಲ್ಲಿ ನೆಮ್ಮದಿಯನ್ನು ಪಡೆಯಲಿದ್ದೀರಿ. ಹಿರಿ-ಕಿರಿಯ ಅಧಿಕಾರಿಗಳ ಜತೆ ಮಧುರವಾದ ಸಂಬಂಧವನ್ನು ಹೊಂದುವಿರಿ. ಆರೋಗ್ಯ ವಿಚಾರದಲ್ಲಿ ನೀವು ಇಂದು ಎಚ್ಚರದಿಂದ ಇರಬೇಕು. ಪಿತ್ತ ಸಂಬಂಧ ತೊಂದರೆ ಕಾಣಿಸಿಕೊಳ್ಳಲಿದೆ.


ವ್ಯವಹಾರದಲ್ಲಿ ಕ್ಷಿಪ್ರ ನಿರ್ಧಾರವು ಬೇಡವೇ ಬೇಡ. ಇದು ನಷ್ಟಕ್ಕೆ ಕಾರಣವಾಗಲಿದೆ. ಹೊಸ ವ್ಯಕ್ತಿಗಳ ಜತೆಯಲ್ಲೂ ವ್ಯವಹಾರ ಅಷ್ಟೊಂದು ಶುಭವಲ್ಲ. ವಾಸ್ತವದ ವಿಚಾರಗಳಿಗೆ ಹೆಚ್ಚು ಗಮನ ನೀಡಿ. ಮನಸ್ಸಿನ ಶುದ್ಧಿಗೆ ಧ್ಯಾನ ಅತೀ ಅಗತ್ಯ.


ಗೃಹೋಪಯೋಗಿ ವಸ್ತುಗಳ ಖರೀದಿಯ ಯೋಗ. ಮನೆಮಂದಿಯ ಪ್ರಗತಿಯನ್ನು ಸಾಧಿಸುವ ದಿನವಿದು. ಲೆಕ್ಕ-ಪತ್ರಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಂಡು ವಿಶ್ವಾಸದಿಂದ ಹೆಜ್ಜೆ ಹಾಕುವ ಸಂದರ್ಭ ಇಂದು ಬರಲಿದೆ.


ಹೆಚ್ಚಿನ ಶ್ರಮದಿಂದ ಕಾರ್ಯವನ್ನು ನೆರವೇರಿಸುವ ಯೋಗವಿದೆ. ಈ ಶ್ರಮಕ್ಕೆ ಇಂದು ಪ್ರತಿಫಲದ ಜತೆ ಅದೃಷ್ಟವು ನಿಮಗಿದೆ. ವಸ್ತು-ವಾಹನದ ಖರೀದಿಯ ಬಗ್ಗೆ ಯೋಚನೆ ಪ್ರಾರಂಭವಾಗಲಿದೆ. ಇದು ಶುಭ ಸೂಚನೆಯು ಹೌದು.

ಕಷ್ಟವನ್ನು ಎದುರಿಸುವ ಜತೆಗೆ ಧೈರ್ಯವನ್ನು ಸಂದರ್ಭಕ್ಕೆ ಸರಿಯಾಗಿ ಪ್ರದರ್ಶಿಸುವ ಯೋಗ ಈ ದಿನದಲ್ಲಿದೆ. ವ್ಯವಹಾರಿಕವಾಗಿ ನಷ್ಟಕ್ಕೆ ನೀವೇ ಉಪಾಯವನ್ನು ಹುಡುಕಿಕೊಳ್ಳಲಿದ್ದೀರಿ. ರಾಜಕೀಯ ಜತೆಗಿನ ಸ್ನೇಹವು ಲಾಭವನ್ನು ತಂದು ಕೊಡಲಿದೆ.


ದೂರದ ಪ್ರಯಾಣದ ಯೋಗ. ಕೆಲಸದ ಒತ್ತಡ ಕಡಿಮೆಯಾಗಲಿದೆ. ಮನಸ್ಸಿಗೆ ಶಾಂತಿ-ಸಮಾಧಾನವನ್ನು ತಂದುಕೊಳ್ಳಲಿಕ್ಕೆ ಇಂದು ಹೇಳಿ ಮಾಡಿಸಿದ ದಿನ. ಆಹಾರ ಮಿತವಾಗಿರಲಿ. ಅಜೀರ್ಣದಿಂದ ದೇಹಾರೋಗ್ಯ ವ್ಯತ್ಯಾಸ ಕಾಣಲಿದೆ.


ಬಂಧು-ಬಾಂಧವರಲ್ಲಿ ಉಭಯ ಕುಶಲೋಪರಿ ಮಾತ್ರ ಇಟ್ಟುಕೊಳ್ಳಿ. ವ್ಯವಹಾರ ಬೇಡ. ವ್ಯವಹರಿಸಿದಲ್ಲಿ ನಷ್ಟ ನಿಶ್ಚಿತ. ಬ್ಯಾಂಕು- ವ್ಯವಹಾರದಲ್ಲಿ ತೊಡಕುಗಳು ಕಾಣಬಹುದು. ಇದನ್ನು ನಿಯಮದ ಪ್ರಕಾರವೇ ಬಗೆಹರಿಸಿಕೊಳ್ಳಿ.


ಕೆಲಸ ಕಾರ್ಯದಲ್ಲಿ ಸುಲಭ ಜಯ ಪ್ರಾಪ್ತಿ. ಶ್ರಮವಹಿಸಿದಲ್ಲಿ ಮಹತ್ ಸಾಧನೆಗೆ ಇಂದು ಉತ್ತಮ. ಮನೆಯಲ್ಲಿ ಗೌರವ. ಉದ್ಯೋಗ ರಂಗದಲ್ಲಿಯೂ ಗೌರವಕ್ಕೆ ಪಾತ್ರರಾಗುವ ಸಂದರ್ಭ ಬಂದೋದಗಲಿದೆ. ಶುಭ ದಿನಕ್ಕೆ ಎಲ್ಲವೂ ಸೇರಿಕೊಂಡಿದೆ.

ಅನಾರೋಗ್ಯಕ್ಕೆ ಅಲಕ್ಷ ಬೇಡ. ಸರಿಯಾದ ಔಷಧೋಪಚಾರ ಮಾಡಿಕೊಳ್ಳಿ. ಇದರಿಂದ ಬಹುದಿನದ ಜಾಢ್ಯ ನಿವೃತ್ತಿಗೆ ಅವಕಾಶವಿದೆ. ಬೆಳ್ಳಿ-ಬಂಗಾರ ಖರೀದಿಗೆ ಹೋಗುವುದು ಬೇಡ. ಆತ್ಮೀಯರಲ್ಲಿ ಹಣಕಾಸಿನ ವ್ಯವಹಾರವು ಬೇಡ.

ಹಳೆಯ ನೆನಪು ಅಲೆ ಅಲೆಯಾಗಿ ಬಂದು ನಿಮಗೆ ಇಂದು ಅಪ್ಪಳಿಸಲಿದೆ. ಇದೊಂದು ದಿವ್ಯ ಅನುಭವ. ಇದನ್ನೇ ಬರವಣಿಗೆಗೆ ಇಳಿಸಿದಲ್ಲಿ ಶುಭ. ಹಿರಿಯ ಅಧಿಕಾರಿಗಳಿಂದ ಪೂರಕವಾದ ಬೆಂಬಲ, ಕಾರ್ಯ ಸಿದ್ಧಿಯ ಯೋಗ.

By : ವಿ.ಡಿ.ಭಟ್ ಕರಸುಳ್ಳಿ (ಶಿರಸಿ)

Contact No : 9449360806

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top