23 January 2018

ಸೂರ್ಯೋದಯ : 06.46

ಸೂರ್ಯಾಸ್ತ : ೦6.16

ರಾಹು ಕಾಲ : 3.00-4.30
ಗುಳಿಕ ಕಾಲ : 12.00-1.30
ಯಮಗಂಡ ಕಾಲ : 9.00-10.30

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಷಷ್ಠಿ, ಮಂಗಳವಾರ, ನಿತ್ಯ ನಕ್ಷತ್ರ-ಉತ್ತರಾಭದ್ರ, ಯೋಗ-ಶಿವ, ಕರಣ-ತೈತಲೆ.

ಉದ್ಯೋಗ ಕ್ಷೇತ್ರದಲ್ಲಿ ಸಾಮರಸ್ಯದಿಂದಾಗಿ ನೆಮ್ಮದಿಯನ್ನು ಹೊಂದಲಿದ್ದೀರಿ. ದೇಹಾರೋಗ್ಯದ ಬಗ್ಗೆ ಹೆಚ್ಚು ಲಕ್ಷ್ಯ ವಹಿಸಬೇಕಾದದ್ದು ಈ ದಿನ ಅತೀ ಅಗತ್ಯ. ದೂರದ ಪ್ರಯಾಣ ಬೇಡ. ವಸ್ತು ಖರೀದಿಯಿಂದ ಲಾಭವಿಲ್ಲ.
ನ್ಯಾಯಾಲಯದಲ್ಲಿ ಇದ್ದ ವಿವಾದ ಬಗೆ ಹರಿಯುವ ಲಕ್ಷಣವಿದೆ. ಹಿರಿಯರ ಅನುಗ್ರಹದಿಂದ ಕೌಟುಂಬಿಕ ಕಾರ್ಯದಲ್ಲಿ ಪ್ರಗತಿಯನ್ನು ಕಾಣಲಿದ್ದೀರಿ. ಹಣಕಾಸಿನ ಅದರಲ್ಲೂ ಷೇರು ವಹಿವಾಟು ಕಾರ್ಯಕ್ಕೆ ಇಂದು ಹಾಕುವುದು ಬೇಕು.
ಪ್ರಯಾಣದಿಂದ ಇಂದಿನ ದಿನ ಪ್ರಾರಂಭವಾಗಲಿದ್ದು, ಇದರಿಂದ ವ್ಯವಹಾರಿಕ ಕಾರ್ಯ ಸಾಧುತ್ವವು ಉಂಟಾಗಿ ವಿಶೇಷ ಲಾಭ ಉಂಟಾಗಲಿದೆ. ಶರೀರದಲ್ಲಿ ಫಿತ್ತ ವ್ಯಾದಿಯು ಕಾಣಿಸಿಕೊಳ್ಳಲಿದೆ. ಆಹಾರ ಮಿತವಾಗಿರಲಿ.
ಹಮ್ಮಿಕೊಂಡ ಕಾರ್ಯ ನಿರ್ದಿಷ್ಟವಾಗಿ ನೆರವೇರಿ ಮನಸ್ಸಿಗೆ ಉತ್ಸಾಹವನ್ನು ತಂದುಕೊಡಲಿದೆ. ತಾನೆಂಬ ಅಹಂಕಾರವು ಈ ದಿನ ಮೂಡಿದಲ್ಲಿ ಆಶ್ಚರ್ಯವಿಲ್ಲ. ಕುಟುಂಬದಲ್ಲಿ ಸಾಮರಸ್ಯದಿಂದ ವರ್ತಿಸಿ. ಆಗ ಎಲ್ಲರ ವಿಶ್ವಾಸ ನಿಮಗೆ ದೊರಕಲಿದೆ
ಎದುರಾಳಿಗಳ ತಂತ್ರವನ್ನು ಅರಿತು ನೀವು ಇಂದು ಹೆಜ್ಜೆ ಹಾಕಿ. ಎಲ್ಲ ಗುಪ್ತವಾಗಿರಲಿ. ದೇವ ಬಲ ನಿಮಗೆ ಇಂದು ಪೂರ್ಣವಾಗಿದೆ. ನಿಮ್ಮಿಚ್ಛೆಯಂತೆ ದಿನವನ್ನು ಕಳೆಯಿರಿ. ಶುಭವಾಗಲಿದೆ.
ವ್ಯವಹಾರಿಕ ಮುಗ್ಗಟ್ಟು ಬಹುದೊಡ್ಡ ಸಮಸ್ಯೆ ಎಂದು ಭಾವಿಸಿಕೊಳ್ಳ ಬೇಕಾದ ಅಗತ್ಯವಿಲ್ಲ. ಸಮಾಜದಲ್ಲಿ, ಕುಟುಂಬದಲ್ಲಿ ಗೌರವ-ನೆಮ್ಮದಿಯನ್ನು ಈ ದಿನ ಹೊಂದಲಿದ್ದೀರಿ. ಇಂದಲ್ಲಾ ನಾಳೆ ವ್ಯವಹಾರ ಸರಿ ಹೋಗಲಿದೆ.
ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಹೋರಾಟದ ಫಲ ಇಂದು ಕಾಣಲಿದ್ದೀರಿ. ಬರಬೇಕಾದ ಸ್ಥಾನಮಾನವು ಈ ದಿನ ದೊರಕಲಿದೆ. ಇದರಿಂದ ನೆಮ್ಮದಿಯನ್ನು ಕಾಣಲಿದ್ದೀರಿ. ಸಂಘಟನೆಯ ಕೌಶಲವು ಈ ದಿನ ವೃದ್ಧಿಯಾಗಲಿದೆ.
ಖರೀದಿಯನ್ನು ದಿನದ ಮಟ್ಟಿಗಾದರೂ ಮುಂದೂಡುವುದು ಒಳಿತು. ಕಬ್ಬಿಣ-ತೈಲ ವ್ಯಾಪಾರಗಳು ಈ ದಿನ ಲಾಭವನ್ನು ತರಲಾರದು. ಕಿರಿಯರ ಸಹಾಯದಿಂದ ನಿಮ್ಮ ಕೆಲಸ ಸುಲಭವಾಗಿ ನೆರವೇರಿ ಲಾಭ ಉಂಟಾಗಲಿದೆ.
ಸಲಹೆ-ಸೂಚನೆಯನ್ನು ಮಿತ್ರರಿಗೆ ನೀಡಿ ಕೆಲಸ ಯಶಸ್ವಿಯಾಗುವಂತೆ ಮಾಡುವ ಸಂದರ್ಭ ಈ ದಿನಕ್ಕಿದೆ. ಈ ಪರೋಪಕಾರದಿಂದ ನಿಮ್ಮ ಗೌರವವು ಹೆಚ್ಚಲಿದೆ. ಮಕ್ಕಳ ಆರೋಗ್ಯ ಸ್ವಲ್ಪ ಏರುಪೇರು ಕಾಣಬಹುದು ನಿಗಾವಹಿಸಿ.
ಉದ್ಯೋಗ ವಿಭಾಗದಲ್ಲಿ ಬದಲಾವಣೆಯ ಸಂದರ್ಭವು ಬರಲಿದೆ. ಇದು ಶುಭಕ್ಕಾಗಿ ಎಂಬುದು ತಿಳಿದು ಸ್ವೀಕರಿಸಿ. ನೆಮ್ಮದಿ ದೊರಕಲಿದೆ. ಬ್ಯಾಂಕಿನ ವ್ಯವಹಾರದಿಂದ ಪ್ರೋತ್ಸಾಹವು ದೊರಕಿ ಆರ್ಥಿಕ ಬಲಿಷ್ಠತೆ ಉಂಟಾಗಲಿದೆ.
ಸಜ್ಜನ ಸಹವಾಸದಿಂದ ಉತ್ಸಾಹ ಇಮ್ಮಡಿಯಾಗುವ ದಿನ. ಹೊಸದೊಂದು ಯೋಜನೆಯು ಈ ದಿನ ಹುಟ್ಟಿಕೊಂಡು ಶುಭ ಮುಖದ ಪ್ರಯತ್ನಕ್ಕೆ ಕಾರಣರಾಗುತ್ತೀರಿ. ಆರೋಗ್ಯ, ಕುಟುಂಬವು ಈ ದಿನ ನಿಮಗೆ ಪೂರಕವಾಗಿ ವರ್ತಿಸಲಿದೆ.
ಸ್ವಂತ ವಾಹನವು ಕಿರಿ-ಕಿರಿಯನ್ನು ಉಂಟು ಮಾಡಬಹುದು. ಉದ್ಯೋಗದಲ್ಲಿ ಹೊಸ ವ್ಯಕ್ತಿಗಳ ಪರಿಚಯವು ಆಗಲಿದೆ. ಬೆಳ್ಳಿ-ಬಂಗಾರ ವ್ಯವಹಾರದಿಂದ ತುಸು ಲಾಭವನ್ನು ಹೊಂದಲಿದ್ದೀರಿ. ಗುರುವಿನ ಅನುಗ್ರಹ ಅಗತ್ಯ.

By : ವಿ.ಡಿ.ಭಟ್ ಕರಸುಳ್ಳಿ (ಶಿರಸಿ)

Contact No : 9449360806

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Friday, 23.02.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಪಾಲ್ಗುಣ ಮಾಸ, ಶುಕ್ಲಪಕ್ಷ, ಅಷ್ಟಮಿ, ಶುಕ್ರವಾರ, ನಿತ್ಯ ನಕ್ಷತ್ರ-ಕೃತ್ತಿಕಾ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 7.30-9.00 3.00-4.30

Read More

 

Friday, 23.02.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಪಾಲ್ಗುಣ ಮಾಸ, ಶುಕ್ಲಪಕ್ಷ, ಅಷ್ಟಮಿ, ಶುಕ್ರವಾರ, ನಿತ್ಯ ನಕ್ಷತ್ರ-ಕೃತ್ತಿಕಾ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 7.30-9.00 3.00-4.30

Read More

Back To Top