Sri Ganesh Tel

23 November 2017

ಸೂರ್ಯೋದಯ : 06.19

ಸೂರ್ಯಾಸ್ತ : 05.50

ರಾಹು ಕಾಲ : 01.30-03.00
ಗುಳಿಕ ಕಾಲ : 09.00-10.30
ಯಮಗಂಡ ಕಾಲ : 06.00-07.30

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ , ಪಂಚಮಿ, ಗುರುವಾರ, ನಿತ್ಯ ನಕ್ಷತ್ರ-ಪೂರ್ವಾ ಷಾಢ, ಯೋಗ-ಗಂಡ, ಕರಣ-ಬವ.

ಚಿಂತೆಯಲ್ಲೇ ಕೊರಗುತ್ತಿರುವುದು ಬೇಡ. ಒಳ್ಳೆಯದನ್ನು ಯೋಚಿಸಿ. ಸರಿ ನಿರ್ಧಾರಕ್ಕೆ ಬನ್ನಿ, ಶುಭ ಉಂಟಾಗಲಿದೆ. ಮಾಡಬೇಕಾದ ಕೆಲಸವನ್ನು ಬೇಗನೆ ಮುಗಿಸಿ ಗೊಂದಲಕ್ಕೆ ಅವಕಾಶ ನೀಡಬೇಡಿ. ಆರೋಗ್ಯದ ಬಗ್ಗೆ ಗಮನ ಇರಲಿ.
-
ಕಾರ್ಯ ದಕ್ಷತೆ ಹೆಚ್ಚಲಿದೆ. ಇದರಿಂದ ಗೌರವವನ್ನು ಎಲ್ಲರಿಂದ ಗಳಿಸಲಿದ್ದೀರಿ. ಮಾತು ದರ್ಪದಿಂದ ಕೂಡಿರಲಿದೆ. ಇದಕ್ಕೆ ಲಕ್ಷವಿರಲಿ. ಪರರಿಗೆ ನೋವಾಗದಂತೆ ವರ್ತಿಸಿ. ದೇವತಾ ಆರಾಧನೆಯನ್ನು ಹೆಚ್ಚಿಸಿಕೊಳ್ಳಿ ಕುಟುಂಬದಲ್ಲಿ ಸುಖವನ್ನು ಕಾಣಲಿದ್ದೀರಿ.
ವ್ಯಸನಾದಿಗಳಿಂದ ದೂರ ಉಳಿಯಬೇಕಾದ ಅಗತ್ಯ-ಅನಿವಾರ್ಯತೆ ಇಂದು ಒದಗಿ ಬರಲಿದೆ. ಹವ್ಯಾಸವು ಅತಿಯಾದರೂ ನಿಮ್ಮ ಕರ್ತವ್ಯವನ್ನು ಹಿಮ್ಮುಖಗೊಳಿಸಲಿದೆ. ಮಾಡಬೇಕಾದ ಕಾರ್ಯ ನಿರ್ದಿಷ್ಟಪಡಿಸಿಕೊಳ್ಳಿ. ಆದ್ಯತೆ ಮೇಲೆ ನಿರ್ವಹಿಸಿ. ಆಗ ಶುಭವನ್ನು ಕಾಣಬಹುದು.
ನಿಂದಕರಿಗೆ ನೀವು ಉತ್ತರಿಸಬೇಕಾದ ಗೋಜಿಗೆ ಹೋಗುವುದು ಬೇಡ. ಎಷ್ಟೇ ಟೀಕೆಗಳು ಬಂದರು ಸ್ಥಿತಪ್ರಜ್ಞೆರಾಗಿ ಇಂದು ಇರಿ. ಇದರಿಂದ ಮನೋ ಉದ್ವೇಗವನ್ನು ನಿವಾರಿಸಿಕೊಳ್ಳಬಹುದು. ವಾದ-ವಿವಾದಗಳಿಗೆ ನಿರ್ಬಂಧವನ್ನು ನೀವೇ ಹಾಕಿಕೊಳ್ಳಿ.
ಬ್ಯಾಂಕು-ಹಣಕಾಸಿನ ಸಂಸ್ಥೆಗಳಿಂದ ತೊಡಕು ಕಾಣಿಸಲಿದೆ. ಇದನ್ನು ಕಾನೂನು ರೀತ್ಯ ಬಗೆಹರಿಸಿಕೊಳ್ಳಲು ತಜ್ಞರ ಸಲಹೆ ಸ್ವೀಕರಿಸಿ. ನಿಮ್ಮ ಬುದ್ಧಿವಂತಿಕೆಯು ಇಂದು ನಡೆಯಲಾರದು. ಇದನ್ನು ಮನಗಂಡು ವರ್ತಿಸಬೇಕಾದದ್ದು ಇಂದಿನ ಜಾಣತನವಾಗಲಿದೆ.
ವ್ಯವಹಾರದಲ್ಲಿ ಕರುಣೆಗಿಂತಲೂ ಕಾನೂನು ಮುಖ್ಯ ಎಂಬುದು ತಿಳಿದಿರಲೇಬೇಕು. ಸಂಬಂಧವೇ ಬೇರೆ-ವ್ಯವಹಾರವೇ ಬೇರೆ ಎಂಬ ಸತ್ಯವನ್ನು ತಿಳಿದು ವರ್ತಿಸಿ. ಹತ್ತಿರದವರಿಂದಲೇ ವ್ಯವಹಾರಿಕ ಮೋಸ ಉಂಟಾಗಬಹುದು ಎಚ್ಚರ.
ಕಷ್ಟದ ಕರಿಮೋಡ ನಿಧಾನವಾಗಿ ಇಂದು ನಿವಾರಣೆಯಾಗಲು ಪ್ರಾರಂಭವಾಗಲಿದೆ. ಇದನ್ನು ಮನಗಂಡು ಸಕಾರಾತ್ಮಕವಾಗಿ ವರ್ತಿಸಬೇಕಾದ ಜವಾಬ್ಧಾರಿ ನಿಮ್ಮದು. ಯೋಜನೆಗಳನ್ನು ಪ್ರಾರಂಭಿಸಿ ಲಾಭ ಇಂದೇ ಉಂಟಾಗದಿದ್ದರೂ ಮುಂದೊಂದು ದಿನಕ್ಕೆ ಶುಭವಾಗಲಿದೆ.
ರಾಜಕೀಯವಾಗಿ ಸಂಘಟನೆಯ ಯೋಚನೆ ಇಂದು ಅಷ್ಟೊಂದು ಶುಭವಲ್ಲ. ಕಾರ್ಯಕ್ಷೇತ್ರದಲ್ಲೂ ಎಲ್ಲರನ್ನೂ ಸಂಘಟಿಸುತ್ತೇನೆಂದು ಅಂದು ಕೊಳ್ಳುವುದು ಕ್ಷೇಮವಲ್ಲ. ನಿತ್ಯ ಕರ್ಮಕ್ಕೆ ಪ್ರಾಧಾನ್ಯತೆ ನೀಡಿ. ಕುಟುಂಬ ವರ್ಗದ ಜತೆಯಲ್ಲಿ ದಿನ ಕಳೆದರೆ ಕ್ಷೇಮ.
ಅನಿವಾರ್ಯವಾಗಿ ಮಾಡಬಾರದ ಕಾರ್ಯಕ್ಕೆ ಕೈ ಹಾಕುವ ಸಂದರ್ಭ ಬಂದರೂ ಇದನ್ನು ಪುನಃ ಪುನಃ ಜ್ಞಾಪಿಸಿಕೊಳ್ಳದೇ ಒಳ್ಳೆಯದನ್ನು ವಿಚಾ ರಿಸಿ. ಆಗ ಶುಭ ಮನಸ್ಸು ಉಂಟಾಗಲಿದೆ. ಧಾರ್ಮಿಕ ಪ್ರವೃತ್ತಿಯನ್ನು ಹೆಚ್ಚಿಸಿಕೊಂಡಲ್ಲಿ ಇದಕ್ಕೆಲ್ಲಾ ಪರಿಹಾರವನ್ನು ಕಂಡುಕೊಳ್ಳಬಹುದು.
ಲಾಭ-ನಷ್ಟಕ್ಕಿಂತ ಶರೀರ ಗುಣ ಧರ್ಮದ ಬಗ್ಗೆ ಇಂದು ಹೆಚ್ಚು ಲಕ್ಷವಹಿಸಿಕೊಳ್ಳಬೇಕು. ಪಿತ್ತ ಪ್ರಕೃತಿಯಿಂದ ವಿಕಾರವು ಜಾಗೃತವಾಗಬಹುದು. ಇದನ್ನ ಮನೆ ಮದ್ದಿನಿಂದ ನಿವಾರಿಸಿಕೊಳ್ಳಿ. ದೊಡ್ಡ ಪ್ರಮಾಣದ ವ್ಯವಹಾರವು ಇಂದು ಬೇಡ.
ಆರೋಪ-ಪ್ರತ್ಯಾರೋಪಗಳು ಸಹದ್ಯೋಗಿಗಳ ಜತೆ ಹೆಚ್ಚಬಹುದು. ನಿಮ್ಮದು ಜಾಣ ಮೌನಕ್ಕೆ ಶರಣಾಗುವುದು ಉತ್ತಮ. ಆಗಬಾರದದ್ದು ಏನೂ ಆಗಲಾದರು. ಯಾವುದೇ ವಿಚಾರಕ್ಕೂ ವಿವೇಕ ನಿಮ್ಮ ಜತೆಯಲ್ಲೆ ಇಟ್ಟುಕೊಳ್ಳಿ. ಉದ್ಯೋಗ ರಂಗದಲ್ಲಿ ರಾಜಕಾರಣ ಹೆಚ್ಚಲಿದೆ.
ಗುರುದರ್ಶನವು ಉಂಟಾಗಿ ಧನ್ಯತಾ ಭಾವ ಜಾಗ್ರತವಾಗಲಿದೆ. ಆದರೆ ವ್ಯವಹಾರದಲ್ಲಿ ಇಂದು ಬಲು ಎಚ್ಚರದಿಂದ ಇರಬೇಕು. ಪರಕೀಯರಿಂದ ನಷ್ಟದ ಯೋಗವಿದೆ. ಜಾಗ್ರತೆಯಿಂದ ವ್ಯವಹರಿಸಿ. ನಿಮಗಿದ್ದ ಸ್ಥಾನಮಾನಕ್ಕೂ ಚ್ಯುತಿ ಉಂಟಾಗಬಹುದು. ದಿನವಿಡಿ ಎಚ್ಚರ ಅಗತ್ಯ.

By : ವಿ.ಡಿ.ಭಟ್ ಕರಸುಳ್ಳಿ (ಶಿರಸಿ)

Contact No : 9449360806

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top