About Us Advertise with us Be a Reporter E-Paper

ಸೂರ್ಯೋದಯ : 6.13

ಸೂರ್ಯಾಸ್ತ : 6.43

ರಾಹು ಕಾಲ : 3.00-4.30
ಗುಳಿಕ ಕಾಲ : 12.00-1.30
ಯಮಗಂಡ ಕಾಲ : 9.00-10.30

ಶ್ರೀ ವಿಲಂಬಿ , ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ,  ಕೃಷ್ಣ ಪಕ್ಷ, ದ್ವಿತೀಯಾ ,  ನಿತ್ಯ ನಕ್ಷತ್ರ-ಫೂ.ಭಾದ್ರಪದ , ಯೋಗ-ಧೃತಿ , ಕರಣ-ಗರಜ.ಗುರುಸಾರ್ವಭೌಮರ ಆರಾಧನೆ.

ಮಾಡಬೇಕಾದ ಕಾರ್ಯವನ್ನು ಇಂದೇ ಮಾಡಿಬಿಡಿ. ಆಲಸ್ಯದಿಂದ ಹೊರಬರಬೇಕಾದ ಅವಶ್ಯಕತೆ ಇದೆ. ಮಿತ್ರರ ಆಗಮನದಿಂದ ಸಂತಸವನ್ನು ಹೊಂದುವ ಯೋಗವಿದೆ. ಹಣಕಾಸಿನ ವಿಚಾರದಲ್ಲಿ ಬಲು ಎಚ್ಚರದಿಂದ ಇರಿ.
ಕುಟುಂಬದಲ್ಲಿ ಸಂತಸವನ್ನು ಹೊಂದುವ ದಿನವಿದು. ನಿಮ್ಮ ಹಾಗೂ ಹಿರಿಯರ ಆರೋಗ್ಯದಲ್ಲಿ ಸುಧಾರಣೆಯು ಕಂಡು ಬರಲಿದೆ. ಉದ್ಯೋಗದಲ್ಲಿ ಮೊದಲು ಇದ್ದ ಕಿರಿ-ಕಿರಿಯು ನಿವಾರಣೆ ಹೊಂದಲಿದೆ.
ನಿಮ್ಮ ಎದುರಾಳಿಗಳನ್ನು ಸಮರ್ಥ ಎದುರಿಸಿ. ಅಂಜುವ ಗುಣ ಸ್ವಭಾವವನ್ನು ಬಿಟ್ಟು ಬಿಡಿ. ನ್ಯಾಯ ಹಾಗೂ ಧೈರ್ಯ ನಿಮ್ಮ ಆಭರಣವಾಗಿರಲಿ. ಮಿತ್ರರ ಸಹಕಾರವು ಇಂದು ದೊರಕಲಿದೆ.
ಶೀತ ಬಾಧೆಯ ಬಗ್ಗೆ ನಿಗಾವಹಿಸಿ. ಶಾಶ್ವತ ಪರಿಹಾರವನ್ನು ಕಂಡುಕೊಳ್ಳಿ. ಮನಸ್ಸನ್ನು ನಿಗ್ರಹಿಸಿಕೊಂಡು ಕೆಲಸದಲ್ಲಿ ಶ್ರೇಯಸ್ಸನ್ನು ಹೊಂದಿ. ಚಾಂಚಲ್ಯತೆಯು ಇಂದು ನಿಮ್ಮನ್ನು ಬಲವಾಗಿ ಕಾಡಲಿದೆ.
ಸಮಸ್ಯೆಗಳನ್ನು ನಿವಾರಿಸಿಕೊಂಡು ಖುಷಿಯಿಂದ ಕಳೆಯುವ ದಿನವಿದು. ಕೌಟುಂಬಿಕ ಕಾರ್ಯದಲ್ಲಿ ವಿಶೇಷವಾದ ಸಾಧನೆಗೆ ಇಂದು ಚಾಲನೆ ದೊರಕಲಿದೆ. ಧೈರ್ಯದಿಂದ ಮುನ್ನುಗ್ಗಿ. ಜಯ ಸುಲಭವಾಗಿ ಸಿಗಲಿದೆ.
ಪ್ರಚಾರಗಳ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿ ಈ ಮುಖದ ಕೆಲಸವನ್ನು ಹೆಚ್ಚು ಮಾಡುವ ಪ್ರವೃತ್ತಿ ಇಂದು ಹೆಚ್ಚಲಿದೆ. ನಾಯಕನಾಗುವ ಹಂಬಲವು ಇಂದು ಹೆಚ್ಚಾಗಲಿದೆ. ನಿಮ್ಮ ಇತಿ-ಮಿತಿಯಲ್ಲಿ ಇದನ್ನು ಸ್ವೀಕರಿಸಿದರೆ ಶುಭವಾಗಲಿದೆ.
ಬಂಧುಗಳ ಜತೆಗಿನ ಅಭಿಮಾನ, ಕುಟುಂಬದಲ್ಲಿನ ನೆಮ್ಮದಿಯು ಇಂದು ಹೆಚ್ಚಲಿದೆ. ಆರ್ಥಿಕ ವಿಚಾರದಲ್ಲಿ ತಪ್ಪು ಹೆಜ್ಜೆಯನ್ನು ಇಡುವ ಸಂದರ್ಭ ಬರಬಹುದು. ಇದನ್ನು ಎಚ್ಚರದಿಂದ ನಿಭಾ ಯಿಸಿಕೊಳ್ಳಿ. ಆರೋಗ್ಯ ವೃದ್ಧಿಯಾಗಲಿದೆ.
ನಿಮ್ಮ ಆಲಸ್ಯದಿಂದ ಈ ದಿನ ಉತ್ತಮ ಅವಕಾಶಗಳನ್ನು ತಪ್ಪಿಸಿಕೊಳ್ಳಲಿದ್ದೀರಿ. ದಕ್ಷತೆಯನ್ನು ತಂದುಕೊಳ್ಳ ಲೇಬೇಕು. ನಕರಾತ್ಮಕ ವಿಚಾರಗಳನ್ನು ಬೆಳೆಸುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂಬುದು ಮನದಟ್ಟು ಮಾಡಿಕೊಳ್ಳಿ.
ಯಂತ್ರೋಪಕರಣದಿಂದ ನಷ್ಟವು ದೊರಕಬಹುದು. ಇದರ ಕ್ರಯ-ವಿಕ್ರಯ ಇಂದಿನ ಮಟ್ಟಿಗೆ ಬೇಡ. ದೇವಿಯ ಆರಾಧನೆಯ ಬಲದಿಂದ ನಿಮ್ಮ ಈ ನಷ್ಟವನ್ನು ನಿಯಂತ್ರಿಸಿಕೊಳ್ಳಬಹುದು. ಉದ್ಯೋಗದಲ್ಲಿ ಸಹವರ್ತಿಗಳ ಅಸಹಕಾರ ಹೆಚ್ಚಬಹುದು.
ಕಲ್ಪನೆಗೆ ಹೆಚ್ಚು ಅವಕಾಶ ನೀಡಿ. ವಾಸ್ತವದ ವಿಚಾರದಲ್ಲಿ ನಿಮ್ಮ ವರ್ತನೆ ಸರಿ ಇರಲಾರದು. ಮಾತು ಹಿಡಿತದಲ್ಲಿ ಇಟ್ಟುಕೊಳ್ಳಿ. ವೃತ್ತಿಯಲ್ಲಿ ನಿಮ್ಮ ಮಾತೆ ಹೆಚ್ಚು ಕಲಹಕ್ಕೆ ಬಿಡಲಿದೆ. ಕುಟುಂಬ ವರ್ಗದ ಜತೆಯಲ್ಲಿ ನೆಮ್ಮದಿ ದೊರಕಲಿದೆ.
ಆಧ್ಯಾತ್ಮಕವಾದ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂಬ ಹಂಬಲ ಇಂದು ಹೆಚ್ಚಾ ಗಲಿದೆ. ಇದಕ್ಕೆ ಪೂರಕವಾದ ಗುರುವಿನ ಅನುಗ್ರಹವನ್ನು ದೊರಕಿಸಿಕೊಳ್ಳಿ. ನವೀನ ಜೀವನಕ್ಕೆ ಇಂದು ನಾಂದಿಯಾಗಲಿದೆ. ಆರೋಗ್ಯದ ವಿಚಾರದಲ್ಲಿ ನಿಗಾ ಇರಲಿ.
ವೈರಿಗಳನ್ನು ಮಿತ್ರರಂತೆ ಕಾಣಲು ಸಾಧ್ಯ ವಾಗದಿದ್ದರೂ ಅವರ ಜತೆ ಅಂತರವನ್ನು ಕಾಯ್ದುಕೊಳ್ಳಿ. ದೊಡ್ಡ ಪ್ರಮಾಣದ ಹಣಕಾಸಿನ ವ್ಯವಹಾರ ಇಂದು ಬೇಡ. ಸ್ಥಾನಮಾನ-ಗೌರವದ ಬಗ್ಗೆಯು ಇಂದು ಅಪೇಕ್ಷಿಸುವುದು ಬೇಡ. ದೇವಿ ಆರಾಧನೆ ಇರಲಿ.

By : ವಿ.ಡಿ.ಭಟ್ ಕರಸುಳ್ಳಿ (ಶಿರಸಿ)

Contact No : 9449360806

Language
Close