About Us Advertise with us Be a Reporter E-Paper

ಸೂರ್ಯೋದಯ : 6.13

ಸೂರ್ಯಾಸ್ತ : 6.42

ರಾಹು ಕಾಲ : 1.30-3.00
ಗುಳಿಕ ಕಾಲ : 9.00-10.30
ಯಮಗಂಡ ಕಾಲ : 6.00-7.30

ಶ್ರೀವಿಲಂಬಿ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಚತುರ್ಥಿ, ಗುರುವಾರ, ನಿತ್ಯ ನಕ್ಷತ್ರ-ರೇವತಿ,  ಅತಿಗಂಡ, ಕರಣ-ಬವ.

ದೂರ ಪ್ರದೇಶ ಸಂದರ್ಶಿಸುವ ಭಾಗ್ಯ ಇಂದು ವೃದ್ಧಿಯಾಗಲಿದೆ. ಮೋಜು ಮಸ್ತಿಗಳಲ್ಲಿ ಇಂದು ಕಳೆಯುವ ಸಂದರ್ಭ ಉಂಟಾದರೂ ಆರೋಗ್ಯ ಕಿರಿಕಿರಿಯನ್ನು ಉಂಟು ಮಾಡಲಿದೆ.
ಸರಕಾರಿ ಕಾರ್ಯದಲ್ಲಿ ತೊಡಕು ಇಂದು ಕಾಣುವ ಸಾಧ್ಯತೆ ಹೆಚ್ಚು. ಇದಕ್ಕೆ ವಾಮ ಮಾರ್ಗವನ್ನು ಹುಡುಕುವುದು ಬೇಡ. ದೇವರಲ್ಲಿ ಭಾರ ಹಾಕಿ ಈ ಕಾರ್ಯವನ್ನು ನಿಧಾನಗೊಳಿಸಿ. ಮುಂದೆ ಶುಭವಿದೆ.
ವ್ಯವಹಾರದಲ್ಲಿ ದ್ರವ್ಯಾನುಕೂಲವಾಗಿ ಖುಷಿಯನ್ನು ಹೊಂದುವ ದಿನ. ಆಚಾರ-ವಿಚಾರದ ಬಗ್ಗೆ ನಿಮ್ಮ ಇಂದು ಇರಲೇಬೇಕು. ನೀತಿಯನ್ನು ಮುರಿಯುವ ಮನಸ್ಸು ಹೆಚ್ಚಾಗಲಿದೆ.
ವೃತ್ತಿಯಲ್ಲಿ ಉನ್ನತಿಯ ಯೋಗವಿದ್ದು ಅನುಭವಿಸಿದರೂ ನಿಮ್ಮ ಮನಸ್ಸು ಸಂತೋಷದ ವಿರುದ್ಧವಾಗಿ ಪ್ರವಹಿಸಲಿದೆ. ಎಚ್ಚರದಿಂದ ಇದನ್ನು ಪರಿವರ್ತಿಸಿಕೊಳ್ಳಿ. ಸಂಶಯ ಸ್ವಭಾವ ಬಿಡಿ.
ಉತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಸಂತೋಷವನ್ನು ಹೊಂದುವ ದಿನವಿದು. ಮನೆಯ ಕೆಲಸದಲ್ಲಿ ಚುರುಕುತನವನ್ನು ಹೊಂದಿ ಖುಷಿಯಿಂದ ಇರಲು ಸಾಧ್ಯತೆ ಇದೆ.
ಕಾರ್ಯ ಕ್ಷೇತ್ರವನ್ನು ವಿಸ್ತಾರ ಮಾಡಿಕೊಳ್ಳಲು ಇಂದು ಸಕಾಲ. ಇದಕ್ಕೆ ಪೂರಕವಾಗಿ ವರ್ತಿಸುವ ಗುಣಧರ್ಮವು ಇಂದು ನಿಮ್ಮದಿರಲಿದೆ. ಮಿತ್ರರ ಜತೆ ಇರಲಿ. ಶುಭವಾಗಲಿದೆ.
ಮಕ್ಕಳಿಂದ ಶುಭವಾರ್ತೆಗಳು ಬರಲಿದೆ. ನಿಮ್ಮ ಗೌರವವು ಈ ದಿನ ಹೆಚ್ಚಲಿದೆ. ಉತ್ಸಾಹದಿಂದ ಕೆಲಸ ಮಾಡುವ ಪ್ರವೃತ್ತಿಯು ಹೆಚ್ಚಾಗಲಿದೆ. ವಸ್ತು ಖರೀದಿಯು ಲಾಭದಾಯಕ.
ಧರ್ಮ ಶ್ರದ್ಧೆಯು ಹೆಚ್ಚಾಗಿ ನಿಮ್ಮ ಆಚರಣೆಯಲ್ಲಿ ಸ್ಪುಟತೆಯು ಕಾಣಲಿದೆ. ಮಾತು ಮೃದು ತನವನ್ನು ಹೊಂದಲಿದೆ. ಶತ್ರುಗಳನ್ನು ಪರಿವರ್ತಿಸುವ ಶಕ್ತಿ ಈ ದಿನದಲ್ಲಿದೆ.
ನೆಂಟರ ಆಗಮನದಿಂದ ಸಂತಸಕ್ಕಿಂತ ಕೊಂಚ ಆತಂಕವು ಹೆಚ್ಚಲಿದೆ. ಅವರಾಡುವ ಚುಚ್ಚು ಮಾತಿಗೆ ಹೆಚ್ಚು ಬೆಲೆ ಕೊಡುವುದು ಬೇಡ. ದೇವತಾ ಆರಾಧನೆಯಲ್ಲಿ ಬಲಗೊಳಿಸಿ.
ಸಟ್ಟಾ ವ್ಯಾಪಾರದಲ್ಲಿ ನಷ್ಟವನ್ನು ಹೊಂದುವ ಸಾಧ್ಯತೆ ಇದೆ. ಅದಕ್ಕಾಗಿ ವ್ಯಾಪಾರಿಗಳು ಯೋಚಿಸಿ ಹೆಜ್ಜೆ ಇಡಿ. ವಿದ್ಯಾರ್ಥಿಗಳಿಗೆ ನೆನಪಿನ ಶಕ್ತಿ ಸ್ವಲ್ಪ ಮಂಕಾಗಲಿದೆ. ಧ್ಯಾನದಲ್ಲಿ ಆಸಕ್ತರಾಗಿ ಶುಭವಾಗಲಿದೆ.
ಕುಟುಂಬದಲ್ಲಿ ಸಣ್ಣ ಮನಸ್ತಾಪವೇ ದೊಡ್ಡ ವಿಷಯಗಳಾಗಿ ಮಾಡುವ ಬುದ್ಧಿ ಇಂದು ನಿಮ್ಮದು. ಇದನ್ನು ಬಿಟ್ಟು ಸಕರಾತ್ಮಕವಾಗಿ ಯೋಚಿಸಿ. ವೃತ್ತಿಯಲ್ಲಿ ಸಾಧನೆ ಮಾಡುವ ಶಕ್ತಿ ಈ ದಿನ ನಿಮಗಿದೆ.
ರಾಜಕೀಯ ಜೀವನದಲ್ಲಿ ಸ್ವಲ್ಪ ಇರಸು-ಮುರಿಸಾಗುವ ಸಂದರ್ಭ ಬರಲಿದೆ. ಪ್ರಜ್ಞಾವಂತರ ಸಂಪರ್ಕದಿಂದ ನಿಮ್ಮ ಕಾಯ್ದು ಕೊಳ್ಳಿ. ಅಧೋಮುಖದ ಪ್ರವೃತ್ತಿಗೆ ಅವಕಾಶ ನೀಡಬೇಡಿ.

By : ವಿ.ಡಿ.ಭಟ್ ಕರಸುಳ್ಳಿ (ಶಿರಸಿ)

Contact No : 9449360806

Language
Close