About Us Advertise with us Be a Reporter E-Paper

ಸೂರ್ಯೋದಯ : 6.38

ಸೂರ್ಯಾಸ್ತ : 6.01

ರಾಹು ಕಾಲ : 10.30-6.00
ಗುಳಿಕ ಕಾಲ : 7.30-9.00
ಯಮಗಂಡ ಕಾಲ : 3.00-4.30

ಶ್ರೀ ವಿಲಂಬಿ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಪಂಚಮಿ, ಶುಕ್ರವಾರ, ನಿತ್ಯ ನಕ್ಷತ್ರಅಶ್ವಿನಿ, ಯೋಗವೃದ್ಧಿ, ಕರಣಕೌಲವ.

ಆರೋಗ್ಯದಲ್ಲಿ ಸುಧಾರಣೆ. ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣ. ನೆರೆಯವರಿಂದಲೂ ಹೆಚ್ಚಿನ ಸಹಕಾರ ದೊರಕಿ ಲಾಭ ಉಂಟಾಗಲಿದೆ. ಸಾರ್ವಜನಿಕ ಕಾರ್ಯದಿಂದ ಲಾಭ ಇದೆ.
ಧರ್ಮ ಕಾರ್ಯದಲ್ಲಿ ನಿಮ್ಮ ಮನಸ್ಸು ತೀವ್ರವಾಗಲಿದೆ. ದಾನ-ಧರ್ಮದ ವಿಚಾರದಲ್ಲಿ ಇಂದು ನಿಮ್ಮದು ಎತ್ತಿದ ಕೈ. ಮನಸ್ಸಿಗೆ ಸಮಾಧಾನವನ್ನು ಹೊಂದುವ ದಿನ.
ಸಿಗಬೇಕಾದ ಹಣಕ್ಕೆ ಇಂದು ಮೋಸವಿಲ್ಲ. ಸಾಮಾಜಿಕವಾಗಿಯೂ ಗೌರವಕ್ಕೂ ಇಂದು ಚ್ಯುತಿ ಬರಲಾರದು. ಅಂದುಕೊಂಡು ಕಾರ್ಯವನ್ನು ನೆರವೇರಿಸಿ, ಯಶಸ್ಸು ನಿಶ್ಚಿತ.
ಕಾರಣವಿಲ್ಲದೆ ಉದ್ವೇಗಗೊಳ್ಳುವ ಸ್ವಭಾವ ಇಂದು ಇದನ್ನು ನಿಯಂತ್ರಿಸಿಕೊಳ್ಳಿ. ಈ ಉದ್ವೇಗದಿಂದ ಮಿತ್ರರನ್ನು ದೂರ ಮಾಡಿಕೊಳ್ಳುವ ಸಾಧ್ಯತೆ ಇದೆ, ಎಚ್ಚರದಿಂದ ವರ್ತಿಸಿ.
ಹಣಕಾಸಿನ ವಿಚಾರದಲ್ಲಿ ಬಲು ಎಚ್ಚರದಿಂದ ಹೆಜ್ಜೆ ಹಾಕಲೇಬೇಕು. ಇಲ್ಲವಾದರೇ ಅನಾಯಾಸವಾದ ಖರ್ಚು ಹೆಚ್ಚಾಗುವ ಸಂಭವ ಹೆಚ್ಚಿದೆ. ಆರೋಗ್ಯದ ಬಗ್ಗೆಯು ನಿಗಾ ಇರಲಿ.
ಕೀಳರಿಮೆಯು ಬಹುವಾಗಿ ಕಾಡಲಿದೆ. ಇದನ್ನು ನಿವಾರಿಸಿಕೊಳ್ಳಿ. ಕೆಲಸದಲ್ಲಿ ಬೇರೆಯವರ ಜತೆ ಹೋಲಿಕೆಗೆ ಹೋಗದೆ ನಿಮ್ಮ ಕೆಲಸವೊಂದಕ್ಕೆ ಲಕ್ಷ ಹೆಚ್ಚಿರಲಿ. ದೊಡ್ಡ ವ್ಯವಹಾರ ಬೇಡ.
ದೈನಂದಿನ ಕೆಲಸ ಕಾರ್ಯವು ಅತಿ ಚುರುಕುತನದಲ್ಲಿ ಕೌಟುಂಬಿಕ ಕಾರ್ಯಕ್ಕೂ ಯಾವುದೇ ತಡೆ ಎಂಬುದು ಬರಲಾರದು. ಹಣಕಾಸಿನ ವ್ಯವಹಾರ ದೊಡ್ಡ ಪ್ರಮಾಣದಲ್ಲಿ ನೆರವೇರಿ ಲಾಭ ಉಂಟಾಗಲಿದೆ.
ಒತ್ತಡ ಮತ್ತು ಗೊಂದಲದ ಈ ದಿನಕ್ಕೆ ನೀವೇ ಪರಿಹಾವನ್ನು ಕಂಡುಕೊಳ್ಳಬೇಕು. ಇಷ್ಟದೇವರ ಭಜನೆ, ಧ್ಯಾನ ಅತಿ ಮುಖ್ಯವಾಗಿ ಮಾಡಿ. ಇದರಿಂದ ಆರೋಗ್ಯವು ಸುಧಾರಿಸಲಿದೆ.
ಏಕಾಂತವನ್ನು ಬಯಸುವ ನೀವು ಇಂದು ಮನೋ ಶಾಂತಿಯನ್ನು ಹೊಂದಿ ದಿನವನ್ನು ಸಮೃದ್ಧವಾಗಿ ಕಳೆಯಲಿದ್ದೀರಿ. ಸಾಮಾಜಿಕ ಕೆಲಸದಲ್ಲಿ ನಿಮ್ಮ ಸಂಘಟನೆಗೆ ಹೆಚ್ಚು ಬೆಲೆ ಬರಲಿದೆ.
ಮಕ್ಕಳ ವಿದ್ಯಾಭ್ಯಾಸವು ಹೊಂದಲಿದೆ. ಕೌಟುಂಬಿಕ ಕ್ಷೇತ್ರದಲ್ಲಿ ನೆಮ್ಮದಿಯನ್ನು ಹೊಂದಲಿದ್ದೀರಿ. ವ್ಯವಹಾರದಲ್ಲಿ ಬ್ಯಾಂಕು ಸಂಬಂಧಿ ಕಾರ್ಯದಲ್ಲಿ ಸ್ವಲ್ಪ ಹಿನ್ನಡೆ ಇದೆ.
ವಿಧೇಯರಾಗಿ ವರ್ತಿಸಿ, ಇಲ್ಲವಾದರೆ ಇದನ್ನೇ ನಿಮ್ಮ ವಿರೋಧಿಗಳು ಅಪಪ್ರಚಾರವನ್ನು ಮಾಡಲಿದ್ದಾರೆ. ನಿಮ್ಮ ಕಾರ್ಯ ಶೈಲಿಯ ವಿಧಾನದಿಂದ ಹಿರಿಯರ ಅನುಗ್ರಹಕ್ಕೆ ಪಾತ್ರರಾಗುವ ಯೋಗವಿದೆ.
ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಲಿದೆ. ಆರೋಗ್ಯದ ಬಲದಿಂದ ಎಲ್ಲವನ್ನೂ ಸಾಧಿಸುವ ಹುಮ್ಮಸ್ಸು ಇಂದು ನಿಮಗೆ ಬರಲಿದೆ. ಶುಭದಿನ.

By : ವಿ.ಡಿ.ಭಟ್ ಕರಸುಳ್ಳಿ (ಶಿರಸಿ)

Contact No : 9449360806

Language
Close