About Us Advertise with us Be a Reporter E-Paper

ಸೂರ್ಯೋದಯ : 6.14

ಸೂರ್ಯಾಸ್ತ : 6.41

ರಾಹು ಕಾಲ : 9.00-10.30
ಗುಳಿಕ ಕಾಲ : 6.00-7.30
ಯಮಗಂಡ ಕಾಲ : 1.30-3.00

ಶ್ರೀ ವಿಲಂಬಿ , ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ , ಷಷ್ಟಿ ತಿಥಿ , ಶನಿವಾರ, ನಿತ್ಯ ನಕ್ಷತ್ರಭರಣಿ, ಯೋಗಧ್ರುವ , ಕರಣಗರಜ

ಆರ್ಥಿಕ ರಂಗದಲ್ಲಿ ಸಮಾಧಾನ ಮೂಡಲಿದೆ. ಬರಬೇಕಾದ ಬಾಕಿ ಹಣವು ಬರಲಿದೆ. ರಾಜಕೀಯ ವ್ಯಕ್ತಿಗಳ ಸಂಪರ್ಕ ಉಂಟಾಗಲಿದ್ದು, ಸಾಮಾಜಿಕ ಕಾರ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲಿದ್ದೀರಿ.
ಯಾತ್ರೆಯ ಬಗೆಗೆ ಚಿಂತಿಸಿ ಆ ಮೂಲಕ ಕಾರ್ಯ ಪ್ರವೃತ್ತರಾಗಿ, ಯಶಸ್ಸನ್ನು ಕಾಣುವ ದಿನ. ಆರೋಗ್ಯದ ವಿಚಾರದಲ್ಲಿ ಅದರಲ್ಲೂ ಉದರ ಸಂಬಂಧಿ ತೊಂದರೆ ಕಾಣಿಸಲಿದೆ ಎಚ್ಚರ.
ಕಿರಿಯರ ಸಹಕಾರದಿಂದಾಗಿ ವ್ಯವಹಾರದಲ್ಲಿ ಲಾಭವನ್ನು ಮಾಡಿಕೊಳ್ಳುವ ಸಂದರ್ಭ ಉಂಟಾಗಲಿದೆ. ನಿಯಮ ಬದ್ಧರಾಗಿ ಈ ದಿನ ವರ್ತಿಸಿ. ಇಲ್ಲವಾದರೆ ನಿಯಮ ತ್ಯಜಿಸುವ ಬುದ್ಧಿಯು ವ್ಯಾಪಕವಾಗಿ ಬೆಳೆಯಲಿದೆ.
ಉದ್ಯೋಗ ವಿಷಯದಲ್ಲಿ ಆತ್ಮೀಯರಿಂದ ಸೂಕ್ತ-ಸಲಹೆಯನ್ನು ಪಡೆದು ಶುಭತೆಯನ್ನು ಕಾಣುವಿರಿ. ಭೂ ಸಂಬಂಧ ವಿವಾದದಲ್ಲಿ ಜಯ ಉಂಟಾಗಲಿದೆ. ಒಟ್ಟಿನಲ್ಲಿ ಶುಭತೆಯು ಕೂಡಿಕೊಂಡು ನಿಮ್ಮಲ್ಲಿಗೆ ಬಂದಿದೆ.
ರಾಜಕೀಯವಾಗಿ ತೊಡಗಿಕೊಳ್ಳಲು ಸಂದರ್ಭಗಳು ಒದಗಿ ಬಂದಿದೆ. ಸಂಘಟನೆಯನ್ನು ಮಾಡಲು ಪ್ರಯತ್ನ ನಿಮ್ಮಿಂದ ಪ್ರಾರಂಭಿಸಿದರೆ ಫಲವು ಸುಲಭವಾಗಿ ಲಭಿಸಲಿದೆ. ಆರ್ಥಿಕ ಪಾವಿತ್ರ್ಯತೆಯು ಮುಖ್ಯ ಎಂಬುದು ನೆನಪಿರಲಿ.
ಸಾಂಸಾರಿಕವಾಗಿ ಶಾಂತಿಯುತ ವಾತಾವರಣದಿಂದಾಗಿ ದಿನದ ಉತ್ಸಾಹ ಇಮ್ಮಡಿಯಾಗಲಿದೆ. ಮುಂದೆ ಮಾಡಬೇಕಾದ ಕಾರ್ಯಕ್ಕೆ ಇಂದೇ ರೂಪುರೇಷಗಳನ್ನು ಸಿದ್ಧಗೊಳಿಸಿ ಕಾರ್ಯ ಪ್ರವೃತ್ತರಾಗಿ ಜಯ ಸಿಗಲಿದೆ.
ಸಂತೋಷದ ಸುದ್ದಿಯನ್ನು ಕೇಳಲಿದ್ದೀರಿ. ಕರ್ಮಕ್ಕೆ ತಕ್ಕದಾದ ಫಲವನ್ನು ಸ್ವೀಕರಿಸುವ ದಿನ. ಆರೋಗ್ಯದ ವಿಚಾರದಲ್ಲಿ ಕಿರಿ-ಕಿರಿ ಎಲುಬಿನ ಸಂಬಂಧಿ ನೋವು ಕಾಣಿಸಲಿದೆ. ಉಪಶಮನಕ್ಕೆ ಮನೆ ಮದ್ದು ಅಗತ್ಯ.
ಮೇಲಾಧಿಕಾರಿಗಳಿಂದ ಕಿರುಕುಳವನ್ನು ಆದಷ್ಟು ಸಹಿಸಿಕೊಳ್ಳಿ. ಕಠಿಣವಾದ ಕಾರ್ಯದಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಿ. ಎದುರುತ್ತರ ಈ ದಿನ ಉದ್ದಕ್ಕೂ ನಿಯಂತ್ರಿಸಿಕೊಳ್ಳಿ. ಆಗ ಸಾಮಾನ್ಯ ದಿನವಾಗಿ ಆಚರಿಸಬಹುದು.
ಮತ್ತೊಬ್ಬರ ಬದುಕಿಗೆ ದಾರಿದೀಪವಾಗುವ ಅವಕಾಶ ಕೂಡಿ ಬರಲಿದೆ. ಇದನ್ನು ಸಮರ್ಥವಾಗಿ ನಿಭಾಯಿಸಿ ಧನ್ಯತೆಯ ಭಾವದಲ್ಲಿ ದಿನವನ್ನು ಕಳೆಯಿರಿ. ಹಿರಿ-ಕಿರಿಯರ ವಿಶ್ವಾಸವನ್ನು ಗಳಿಸಿಕೊಳ್ಳಿ.
ಯಾರಿಗಿಲ್ಲ ಸಮಸ್ಯೆ? ಎಂದುದಕ್ಕೆ ಉತ್ತರ. ಎಲ್ಲರಿಗೂ ಇದೆ ಸಮಸ್ಯೆ ಎಂಬುದನ್ನು ನಿಮ್ಮ ಸಮಸ್ಯೆಗಳನ್ನು ನೀವೇ ಪರಿಹರಿಸುತ್ತ ಬನ್ನಿ. ಆಗ ದಿನ ಶುಭ ಉಂಟಾಗಲಿದೆ. ಅತಿ ಯೋಚನೆ ಶುಭವಲ್ಲ.
ಉದ್ಯೋಗದಲ್ಲಿ ಧನ್ಯತೆಯ ಭಾವ ಮೂಡಲಿದೆ. ಹಿರಿ ವರ್ಗದ ಅಧಿಕಾರಿಗಳಿಂದ ಪ್ರಶಂಸೆ. ಕಿರಿ ವರ್ಗದ ಅಧಿಕಾರಿಗಳಿಂದ ಪೂಜ್ಯತೆಯನ್ನು ಸ್ವೀಕರಿಸಲಿದ್ದೀರಿ. ದಿನಚರಿಯಲ್ಲಿ ದೇವತಾ ಆರಾಧನೆಯನ್ನು ಬಲಗೊಳಿಸಿಕೊಳ್ಳಿ.
ಸಲಹೆಯನ್ನು ಪಡೆದು ಶುಭತೆಯನ್ನು ಕಾಣುವಿರಿ. ಭೂ ಸಂಬಂಧ ವಿವಾದದಲ್ಲಿ ಜಯ ಉಂಟಾಗಲಿದೆ. ಉದ್ಯೋಗ ವಿಷಯದಲ್ಲಿ ಆತ್ಮೀಯರಿಂದ ಸೂಕ್ತ-ಅತಿ ಯೋಚನೆ ಶುಭವಲ್ಲ.

By : ವಿ.ಡಿ.ಭಟ್ ಕರಸುಳ್ಳಿ (ಶಿರಸಿ)

Contact No : 9449360806

Language
Close