About Us Advertise with us Be a Reporter E-Paper

ಸೂರ್ಯೋದಯ : 6.14

ಸೂರ್ಯಾಸ್ತ : 6.37

ರಾಹು ಕಾಲ : 1.30- 3.00
ಗುಳಿಕ ಕಾಲ : 9.00-10.30
ಯಮಗಂಡ ಕಾಲ : 6.00-7.30

ಶ್ರೀ ವಿಲಂಬಿ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಕೃಷ್ಣಪಕ್ಷ, ಏಕಾದಶಿ, ಗುರುವಾರ, ನಿತ್ಯ ನಕ್ಷತ್ರ-ಪುನರ್ವಸು , ಯೋಗ- ವರೀಯಾನ, ಕರಣ-ಬಾಲವ.

ಆರ್ಥಿಕ ಸಂಪನ್ಮೂಲಗಳು ಅಭಿವೃದ್ಧಿ ಯಾಗಲಿದೆ. ಅಲಂಕಾರಿಕ ವಸ್ತುಗಳ ಖರೀದಿಯಲ್ಲೂ ಆಸಕ್ತಿ ಮೂಡಲಿದೆ. ಮಕ್ಕಳಿಗೆ ವಿದ್ಯಾಭ್ಯಾಸದ ಪ್ರಗತಿಯೂ ಕಂಡುಬರಲಿದೆ. ಒಟ್ಟಿನಲ್ಲಿ ವಿಶೇಷ ಗೌರವಕ್ಕೆ ದಿನ.
ಕುಟುಂಬದ ಜತೆಗೂಡಿ ಧಾರ್ಮಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಭಾಗ್ಯ. ವಿಶೇಷ ಸಮಾಧಾನದಿಂದ ಕೂಡಿ ಬಾಳುವ ದಿನ. ಗೃಹ ನಿರ್ಮಾಣದ ಕಾರ್ಯಕ್ಕೆ ಚಾಲನೆಯು ದೊರಕಲಿದೆ. ಶೀತಬಾಧೆ ಉಂಟಾಗಲಿದೆ.
ಪ್ರಯಾಣದಲ್ಲಿ ಜಾಗೃತರಾಗಿ. ವಾಹನ ಚಾಲನೆಯಲ್ಲಿ ಅತೀ ವೇಗವು ಒಳ್ಳೆಯದಲ್ಲ. ಮಾತಿನಲ್ಲಿ ಹಿತ-ಮಿತವನ್ನು ಕಾಪಾಡಿಕೊಂಡು ಬನ್ನಿ. ಇಲ್ಲವಾದರೇ ಆತ್ಮೀಯರನ್ನು ದೂರ ಮಾಡಿಕೊಳ್ಳುವ ಯೋಗ ಹೆಚ್ಚಿದೆ.
ಮಾನಸಿಕ ಖಿನ್ನತೆಯಿಂದ ಹೊರ ಬಂದು, ಎಲ್ಲರ ಜತೆಯಲ್ಲೂ ಉತ್ಸಾಹದಿಂದ ಇರಿ. ಒಂದೇ ವಿಚಾರವನ್ನು ತೀವ್ರವಾಗಿ ಯೋಚಿಸುತ್ತಾ ಕೂರುವುದು ಮನೆಮಂದಿಯ ಬೆಂಬಲ ಈ ದಿನ ಇದೆ. ಹೆದರಬೇಡಿ.
ದುಸ್ಸಾಹಸಕ್ಕಿಳಿದು ಕಷ್ಟಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತೀರಿ, ಎಚ್ಚರ. ಮಾಡಬೇಕಾದ ಸಹಜ ಕಾರ್ಯಗಳೇ ಇವೆ. ಇದಕ್ಕೆ ಲಕ್ಷವಹಿಸಿ. ಯಾವ ತೊಡಕು ಬರಲಾರದು. ಅನಾವಶ್ಯಕ ವೆಚ್ಚವು ಈ ದಿನ ಬೇಡ.
ಆಪ್ತರಿಂದ ಟೀಕೆಗಳು ಬರಬಹುದು. ಎಲ್ಲವನ್ನೂ ಸಮಾಧಾನದಿಂದ ನಿಭಾಯಿಸಿ. ಸಹಜ ವರ್ತನೆಗೆ ಹೆಚ್ಚು ಒತ್ತನ್ನು ನೀಡಿ. ವ್ಯವಹಾರದಲ್ಲಿ ವಿಶೇಷ ಲಾಭವನ್ನು ಹೊಂದಲಿದ್ದೀರಿ. ದೇವರಲ್ಲಿ ಮನಸ್ಸು ಸ್ಥಿರವಾಗಿರಲಿ.
ಸಮೂಹದ ಜತೆ ನಿಮ್ಮ ಒಡನಾಟ ಹಿತವಾಗಿದ್ದು ತರಲಿದೆ. ಇಚ್ಛಾಶಕ್ತಿ ಬಲವರ್ಧನೆಗೊಂಡು ಕಾರ್ಯ ಸಿದ್ಧಿಯ ಯೋಗವು ಉಂಟಾಗಲಿದೆ. ಹಿರಿಯ ಅಧಿಕಾರಿಗಳ ಸಹಕಾರದಿಂದ ಹೆಚ್ಚು ನೆಮ್ಮದಿಯನ್ನು ಕಾಣಲಿದ್ದೀರಿ.
ಸಾಮಾಜಿಕ ಚಟುವಟಿಕೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡು ಸಮಾಧಾನಗೊಳ್ಳಲು ಈ ದಿನ ಸ್ವಲ್ಪ ತೊಡಕುಗಳಿವೆ. ಹಿತಶತ್ರುಗಳು ನಿಮ್ಮನ್ನು ನೇರವಾಗಿ ನಿಂದಿಸಲಿದ್ದಾರೆ, ಎಚ್ಚರ. ಏನೇ ಇರಲಿ ದೇವ ಬಲಕ್ಕೆ ಪ್ರಾರ್ಥಿಸಿಕೊಳ್ಳಿ.
ಭೂಮಿ ಸಂಬಂಧ ವಿವಾದವು ಬಗೆಹರಿಯುವ ದಾರಿ ಕಾಣ ಲಿದೆ. ವ್ಯಕ್ತಿಗಳ ಜತೆ ಸಮನ್ವಯ, ಮಾನಸಿಕವಾಗಿ ಸಮಚಿತ್ತದಿಂದ ಇರುವುದು ಇಂದಿನ ಅಗತ್ಯ. ದೇಹಾ ಕೂಡಿರಲಿದ್ದೀರಿ.
ದೇವತಾ ಆರಾಧನೆಯ ಬಲ ಈ ದಿನ ಹೆಚ್ಚು ಬೇಕೇ ಬೇಕು. ಪರಕೀಯರ ಉಪಟಳವನ್ನು ನಿಗ್ರಹಿಸಿಕೊಂಡು ಈ ದಿನವನ್ನು ಎಚ್ಚರಿಕೆಯಲ್ಲಿ ಕಳೆಯಿರಿ. ವಿಶೇಷವಾದ ವ್ಯವಹಾರ ಬೇಡ. ಕೌಟುಂಬಿಕ ಕಾರ್ಯದಲ್ಲಿ ನೆಮ್ಮದಿ ಇದೆ.
ಮಾತಿನ ಪ್ರಬುದ್ಧತೆಯಿಂದ ಇತರ ರನ್ನು ಮೆಚ್ಚಿಸಿಕೊಂಡು ಕಾರ್ಯ ಸುಗಮಗೊಳ್ಳುವಂತೆ ಮಾಡಿಕೊಳ್ಳುತ್ತೀರಿ. ಸಕಾರಾತ್ಮಕ ಮನೋ ಬುದ್ಧಿಯಿಂದ ಹಿತಾನುಭವವನ್ನು ಪಡೆಯಲಿದ್ದೀರಿ. ದಿವ್ಯತೆ ಜಾಗ್ರತವಾಗುವ ದಿನ.
ಒಂಟಿತನ ಖಿನ್ನತೆಯನ್ನು ತರಲಿದೆ. ಸಾಹಿತ್ಯ-ಸಂಗೀತದಿಂದ ಇದನ್ನು ನಿವಾರಿಸಿಕೊಳ್ಳಿ. ಸಪ್ಪೆತನದ ಮನಸ್ಸು ನಿಮ್ಮನ್ನು ಆಳಲಿದೆ. ಪ್ರಮುಖ ನಿರ್ಧಾರ ಮುಂದೂಡಿ. ಗುರುವನ್ನು ಧ್ಯಾನಿಸಿಕೊಳ್ಳಿ.

By : ವಿ.ಡಿ.ಭಟ್ ಕರಸುಳ್ಳಿ (ಶಿರಸಿ)

Contact No : 9449360806

Language
Close