About Us Advertise with us Be a Reporter E-Paper

ಸೂರ್ಯೋದಯ : 6.14

ಸೂರ್ಯಾಸ್ತ : 6.35

ರಾಹು ಕಾಲ : 9.00-10.30
ಗುಳಿಕ ಕಾಲ : 6.00-7.30
ಯಮಗಂಡ ಕಾಲ : 1.00-2.30

ಶ್ರೀ ವಿಲಂಬಿ, ದಕ್ಷಿಣಾಯನ, ವರ್ಷಾಋತು, ಶ್ರಾವಣಮಾಸ, ಕೃಷ್ಣಪಕ್ಷ, ತೃಯೋದಶಿ , ಶನಿವಾರ, ನಿತ್ಯ ನಕ್ಷತ್ರಆಶ್ಲೇಷಾ , ಯೋಗಶಿವ, ಕರಣಭದ್ರಾ.

ನೀವು ಬಯಸೇ ಇರುವ ಭಾಗ್ಯವು ಇಂದು ನಿಮಗೆ ಬಂದು ಒದಗಲಿದೆ. ಸ್ವೀಕರಿಸಿ ದಿನವನ್ನು ಸಮೃದ್ಧಗೊಳಿಸಿ. ಅತಿಥಿಗಳ ಆಗಮನದಿಂದ ಮನಸ್ಸಿನ ಒತ್ತಡಕ್ಕೆ ಒಳಗಾಗಬೇಡಿ. ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಶುಭವಾಗಲಿದೆ.
ಆಯ್ಕೆಯಲ್ಲಿ ಗೊಂದಲ ಮಾಡಿಕೊಳ್ಳುವ ಸ್ವಭಾವ ಇಂದು ಹೆಚ್ಚಾಗಲಿದೆ. ಇದನ್ನು ನಿಯಂತ್ರಿಸಿಕೊಂಡು ನಿಧಾನವಾಗಿ ಮಾಡುತ್ತಾ ಬನ್ನಿ. ಆಗ ಕಾರ್ಯದಲ್ಲಿ ಇದ್ದ ತೊಡಕು ನಿವಾರಣೆಯಾಲಿದೆ. ಮಾತು ಕಡಿಮೆ ಕೆಲಸ ಹೆಚ್ಚು ಎಂಬ ಸಿದ್ಧಾಂತಕ್ಕೆ ಬದ್ಧರಾಗಿ.
ಆರೋಗ್ಯದ ಬಲ ಇಂದು ಬಲಿಷ್ಠತೆಯನ್ನು ಹೊಂದಲಿದೆ. ಉತ್ಸಾಹವು ಇಮ್ಮಡಿಯಾಗಿ ತಡೆ ಹಿಡಿದ ಕಾರ್ಯಕ್ಕೆ ಚಾಲನೆಯನ್ನು ನೀಡಿ ಯಶಸ್ಸಿಗೆ ಕಾರಣವಾಗಲಿದ್ದೀರಿ. ಶತ್ರುಗಳ ಬಗ್ಗೆ ಎಚ್ಚರದಿಂದ ಇರಿ. ನಿಮ್ಮ ಕಾರ್ಯ ಗುಟ್ಟನ್ನು ಬಿಟ್ಟುಕೊಡುವುದು ಬೇಡ.
ಪಂಚಮ ಶನಿಯ ಬಿಡುಗಡೆಗೆ ಕಾಲ ಕೂಡಿ ಬಂದಿದೆ. ಎಲ್ಲವೂ ನಿಧಾನ, ಶುಭ ಫಲವನ್ನು ಕಾಣಲಿದ್ದೀರಿ. ಆತುರವು ಅಷ್ಟೊಂದು ಶುಭವಲ್ಲ. ನಿಮ್ಮ ಮಿತ್ರರ ಸಹಾಯ-ಸಹಕಾರವು ಇಂದು ಹೆಚ್ಚು ದೊರಕಿ ಸುಖಿಗಳಾಗಿ ದಿನವನ್ನು ಕಳೆಯಲಿದ್ದೀರಿ.
ರಾಜಕೀಯವಾಗಿ ನಿಮ್ಮ ಆಕಾಂಕ್ಷೆಯು ಇಂದು ಪ್ರಬಲವಾಗಿ ಬೆಳೆದು ನಿಲ್ಲಲಿದೆ. ಇದನ್ನು ನಿಧಾನಗೊಳಿಸಿ. ವಿವೇಕಯುತವಾಗಿ ನಿರ್ಧಾರ ಕೈಗೊಳ್ಳುವ ಗುಣವನ್ನು ಬೆಳೆಸಿಕೊಳ್ಳಿ. ಆಗ ನಿಮಗೆ ಇಂದು ಕ್ಷೇಮ ದೊರಕಲಿದೆ.
ಮಕ್ಕಳಲ್ಲಿ-ಹಿರಿಯರಲ್ಲಿ ನಿಮ್ಮ ಮಾತು ಮಧುರವಾಗಿ ಇರಲೇಬೇಕು. ಇಲ್ಲವಾದರೆ ನಿಮ್ಮ ವ್ಯಕ್ತಿತ್ವಕ್ಕೆ ಅವರೆಲ್ಲಾ ಬೆಲೆಕೊಡಲಾರರು. ಮಾತು ಮುಂಗೋಪ ತನಕ್ಕೆ ಹೋಗದಂತೆ ಎಚ್ಚರವಹಿಸಿ. ವ್ಯವಹಾರವು ಲಾಭದಿಂದ ಕೂಡಿರಲಿದೆ.
ಅಧ್ಯಯನದಲ್ಲಿ ನಿಮ್ಮ ಮನಸ್ಸು ಹೆಚ್ಚು ಪ್ರವ್ಯಸಲಿದೆ. ಇದರಿಂದ ಚಿತ್ತಶುದ್ಧಿಯ ಜತೆಗೆ ಹೊಸ ಹುಮ್ಮಸ್ಸನ್ನು ಹೊಂದುವ ಸಾಧ್ಯತೆ ಇದೆ. ದೇವತಾ ಆರಾಧನೆಯನ್ನು ತಪ್ಪಿಸಬೇಡಿ. ಆರಾಧನೆಯ ಬಲದಿಂದ ನಿಮಗೆ ಶತ್ರುವಿನಿಂದ ರಕ್ಷಣೆ ಇದೆ.
ಪರರ ನಿಂದನೆಯು ತಪ್ಪು ಎಂಬುದು ತಿಳಿದೂ ಇಂದು ನಿಮ್ಮ ಮೈಮನವು ಇದಕ್ಕೆ ಹೆಚ್ಚು ಪ್ರೇರಣೆಯನ್ನು ಮೂಡಿಸಲಿದೆ. ಬಲು ಎಚ್ಚರದಿಂದ ನಿಭಾಯಿಸಿಕೊಳ್ಳಿ. ಆಧ್ಯಾತ್ಮಿಕವಾದ ವಿಚಾರಗಳನ್ನು ಇಂದು ಹೆಚ್ಚು ಮೈಗೂಡಿಸಿಕೊಳ್ಳಿ.
ದಾರ್ಶನಿಕರ ದರ್ಶನದ ಭಾಗ್ಯ ಇಂದು ಲಭಿಸಲಿದೆ. ಇದರಿಂದ ನಿಮ್ಮ ಉತ್ಸಾಹವು ಇಂದು ಒಳ್ಳೆಯ ಕಾರ್ಯಕ್ಕೆ ಸರಿಯಾದ ಸಂದರ್ಭವೂ ಕೂಡಿ ಬರಲಿದೆ. ಎಲ್ಲವನ್ನು ನಿಭಾಯಿಸಿ. ಜಯವನ್ನು ಹೊಂದಲಿದ್ದೀರಿ.
ದೇಹದಲ್ಲಿ ಸ್ವಲ್ಪ ಅಸೌಖ್ಯ ಉಂಟಾಗಲಿದೆ. ಇದು ದೊಡ್ಡ ಸಂಗತಿಯಾಗಲಾರದು. ದೇವಸ್ತುತಿಯನ್ನು ಬಿಡಬೇಡಿ. ಇಂದಿನ ಒತ್ತಡಕ್ಕೆ ನೈಜತೆಯನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಎಚ್ಚರದಿಂದ ನಿಧಾನವಾಗಿ ನಿಮ್ಮ ವರ್ತನೆ ಇರಲಿ.
ವಸ್ತ್ರ-ವಿನ್ಯಾಸಗಳ ಬಗ್ಗೆ ಆಸಕ್ತಿಯು ಮೂಡಿ ಆ ಮೂಲಕ ಒಂದಿಷ್ಟು ವೇಳೆಯನ್ನು ವ್ಯಯಿಸಲಿದ್ದೀರಿ. ಖರ್ಚಿನ ವಿಚಾರದಲ್ಲಿ ಇಂದು ತುಸು ಹೆಚ್ಚು ವ್ಯಯವಾಗಲಿದೆ. ಬಂಧು-ಮಿತ್ರರಲ್ಲಿ ಸ್ನೇಹ ಸಂಬಂಧಗಳು
ದಣಿವಾರಿಸಿಕೊಳ್ಳುವ ದೇಹ ಸೌಖ್ಯವನ್ನು ಹೊಂದುವ ದಿನ. ದೇಹ - ಮನಸ್ಸನ್ನು ವಿಶ್ರಾಂತಿಗೆ ಒಳಪಡಿಸಿಕೊಳ್ಳಲಿದ್ದೀರಿ. ಹೊಸ ಶುಭ ಕನಸನ್ನು ಹೊಂದುವ ಯೋಗವಿದೆ. ಕನಸು ನನಸಾಗುವ ಯೋಗ ಇದೆ. ಸೌಖ್ಯದ ದಿನ.

By : ವಿ.ಡಿ.ಭಟ್ ಕರಸುಳ್ಳಿ (ಶಿರಸಿ)

Contact No : 9449360806

Language
Close