ಸೂರ್ಯೋದಯ : 6.15
ಸೂರ್ಯಾಸ್ತ : 6.34
ರಾಹು ಕಾಲ : 4.30-6.00
ಗುಳಿಕ ಕಾಲ : 3.00-4.30
ಯಮಗಂಡ ಕಾಲ : 12.00-1.30
ಶ್ರೀ ವಿಲಂಬಿ, ದಕ್ಷಿಣಾಯನ, ವರ್ಷಾಋತು, ಶ್ರಾವಣ ಮಾಸ, ಕೃಷ್ಣಪಕ್ಷ, ಅಮವಾಸ್ಯೆ, ಭಾನುವಾರ, ನಿತ್ಯ ನಕ್ಷತ್ರ– ಮಘಾ, ಯೋಗ–ಸಿದ್ಧ, ಕರಣ–ಚತುಷ್ಪಾತ.
![]() |
ಗೃಹ ಸಂಬಂಧಿ ಕಾರ್ಯ ಎಲ್ಲವೂ ಇಂದೇ ಮುಗಿಯಬೇಕು ಎಂಬ ಹಠ ಬೇಡ. ನಿಧಾನವಾಗಿ ಕಾರ್ಯವನ್ನು ಕೈಗೆತ್ತಿಕೊಳ್ಳಿ. ವ್ಯವಧಾನವನ್ನ ಬಿಟ್ಟು ವರ್ತಿಸಬೇಡಿ. ಉದ್ಯೋಗದಲ್ಲಿ ಭರವಸೆಯು ಮೂಡಿ ಉತ್ಸಾಹ ಹೊಂದಲಿದ್ದೀರಿ. |
![]() |
ಭಾವಾವೇಶಕ್ಕೆ ಒಳಗಾಗುವುದು ಬೇಡ. ಅದರಲ್ಲೂ ಕುಟುಂಬ ವರ್ಗದವರ ಜತೆ ನಿಮ್ಮ ವರ್ತನೆಯು ಸಹಜವಾಗಿಯೇ ಇರಲಿ. ನಿಮ್ಮನ್ನು ಹುಡುಕಿಕೊಂಡು ಬಂದು, ಶುಭ ಕಾರ್ಯವು ನಿಮ್ಮಿಂದ ಮಾಡಿಸಿಕೊಳ್ಳುವ ಯೋಗ ಈ ದಿನಕ್ಕಿದೆ. |
![]() |
ಪ್ರೀತಿ ಪಾತ್ರರೊಂದಿಗಿನ ಭಿನ್ನಾಭಿಪ್ರಾಯವು ಇಂದು ಕೊನೆಗೊಳ್ಳಲಿದೆ. ಈ ಖುಷಿಯಲ್ಲೇ ಹೊಸ ಕಾರ್ಯವನ್ನು ಕೈಗೆತ್ತಿಕೊಳ್ಳಿ. ಜಯವು ಉಂಟಾಗಲಿದೆ. ಬಂಧು-ಮಿತ್ರರ ಆಗಮನದಿಂದಾಗಿ ದಿನವಿಡಿ ಸಂತೋಷವನ್ನು ಹೊಂದಲು ಸಾಧ್ಯವಿದೆ. |
![]() |
ನೇರ ಮಾತುಗಳಿಂದ ಬೇರೆಯವರಿಗೆ ಬೇಸರವಾಗದಂತೆ ನಡೆದುಕೊಳ್ಳಿ. ಮಾತಿಗಿಂತ ಮೌನ ಹೆಚ್ಚು ಶುಭತೆಯನ್ನು ತಂದುಕೊಡಲಿದೆ. ದೇವತಾ ಉಪಾಸನೆಯು ಅತೀ ಮುಖ್ಯ. ವಾಹನ ಖರೀದಿಯ ಗೋಜಿಗೆ ಹೋಗುವುದು ಬೇಡ. |
![]() |
ಕ್ಷುಲ್ಲಕ ಸಂಗತಿಗಳನ್ನು ತೆಗೆದುಕೊಳ್ಳುವ ಅಗತ್ಯವೇ ಇಲ್ಲಾ. ಎಲ್ಲವನ್ನೂ ನಾನೇ ನಿಭಾಯಿಸಬೇಕಲ್ಲ ಎಂಬ ಭಾವನೆಯನ್ನು ಮೊದಲು ಇಂದು ತೆಗೆದು ಹಾಕಿ. ಸಹಜ ವರ್ತನೆಯಿಂದ ಸಮೃದ್ಧಿ ಕಡೆಗೆ ಹೆಜ್ಜೆ ಹಾಕಬಹುದು. |
![]() |
ಅನಾವಶ್ಯಕವಾಗಿ ಬೇರೆಯವರ ಪ್ರಶಂಸೆಯಲ್ಲಿ ಪಾಲ್ಗೊಳ್ಳುತ್ತಾ ಕಾಲ ಕಳೆಯುವುದು ಬೇಡ. ಬೇರೆಯವರನ್ನು ಹೊಗಳುವುದರಿಂದ ನಿಮ್ಮ ವ್ಯಕ್ತಿತ್ವಕ್ಕೆ ಕುಂದು ಉಂಟಾಗುವ ಸಂಭವವಿದೆ. ಕುಟುಂಬದಲ್ಲಿ ನೆಮ್ಮದಿ ಇದೆ. ಇದನ್ನು ಆಸ್ವಾದಿಸಿ ದಿನ ಕಳೆಯಿರಿ. |
![]() |
ರೋಗ ಬಾಧೆಯ ಭಯ ನಿಮ್ಮನ್ನು ಆವರಿಸಿದರೂ ಏನೂ ಆಗಲಾರದು ಇಂದು. ಇದನ್ನು ಮನದಟ್ಟು ಆಗ ನಿರ್ಭಯವಾಗಿ ನಿಮ್ಮ ನಡೆ-ನುಡಿಗಳು ಇರುತ್ತದೆ. ಪ್ರಯಾಣ ಬೇಡ. ಶೀತ ಸಂಬಂಧಿ ಆಹಾರವೂ ಅತಿ ಸೇವನೆ ಬೇಡ. |
![]() |
ಸಕಾರಾತ್ಮಕವಾಗಿ ನಿಮ್ಮನ್ನು ಕಾಣುವ ವರ್ಗಕ್ಕಿಂತ ನಕಾರಾತ್ಮಕವಾಗಿ ನೋಡುವ ಜನರ ವರ್ಗ ಹೆಚ್ಚಾಗಲಿದ್ದಾರೆ. ಹೆದರದೇ ಹೆಜ್ಜೆ ಹಾಕಿ. ಗುರುವಿನ ಅನುಗ್ರಹವಿದೆ. ದೈವ ಬಲವನ್ನು ಹೆಚ್ಚಿಸಿಕೊಳ್ಳಿ. ವ್ಯವಹಾರದಲ್ಲಿ ಎಚ್ಚರದಿಂದ ಇರಬೇಕು. |
![]() |
ಹಿತವಾದ ಸುದ್ದಿಯಿಂದ ಸಂತೋಷದ ಜತೆ ಆತ್ಮವಿಶ್ವಾಸವು ವೃದ್ಧಿಯಾಗಲಿದೆ. ಅಗತ್ಯಕ್ಕೆ ತಕ್ಕಷ್ಟೇ ಹಣದ ವೆಚ್ಚವನ್ನು ಮಾಡಿ. ಹಣ ಕೈಯಲ್ಲಿದ್ದರೆ ಖರ್ಚಿಗೆ ದಾರಿ ಮಾಡುವ ಅದಕ್ಕಿದೆ. ಎಚ್ಚರವಹಿಸಿ ಇಂದು ವ್ಯವಹರಿಸಿ. |
![]() |
ಕೆಟ್ಟ ವದಂತಿಗಳನ್ನು ಹರಡುವ ಮನಸ್ಸು ಉತ್ಪನ್ನವಾಗಲಿದೆ. ಎಚ್ಚರದಿಂದ ಅದನ್ನು ನಿಗ್ರಹಿಸಿಕೊಳ್ಳಿ. ಕುಚೋದ್ಯದ ಮನಸ್ಸು ಯಾರನ್ನು ಕೇಳಿ ಬರುವುದಿಲ್ಲ. ಇದನ್ನು ನಿಧಾನವಾಗಿ ಹೊರ ದೂಡಿ. |
![]() |
ಧನ ಮೂಲದ ಬಗ್ಗೆ ಬೇರೆಯವರಿಗೆ ನಿಮ್ಮ ಬಗ್ಗೆ ಶಂಕೆ ಮೂಡಬಹುದು. ಎಚ್ಚರದಿಂದ ನಿಮ್ಮ ಹಣಕಾಸು ನೀತಿಯನ್ನು ಇಟ್ಟುಕೊಳ್ಳಿ. ಕಾನೂನು ಬಾಹಿರ ಚಟುವಟಿಕೆಯು ಇಂದು ಸುತರಾಂ ಶುಭವಲ್ಲ. ಸ್ನೇಹಿತರ ಸಲಹೆ ಶುಭ. |
![]() |
ಮನರಂಜನೆಗೆ ಒಲಿಯುವ ಮನಸ್ಸು. ಇದರಿಂದ ಹಣ ವ್ಯಯವಾದರೂ ಉಲ್ಲಾಸವನ್ನು ಹೊಂದಲಿದ್ದೀರಿ. ಮನೆಮಂದಿಯನ್ನು ಇದರಲ್ಲಿ ಒಳಗೊಳಿಸುವ ಸಂದರ್ಭವು ಇಂದು ಬರಲಿದೆ. ಕೆಲಸ- ಕಾರ್ಯದಲ್ಲಿ ಲಕ್ಷಬೇಕು. ಇಲ್ಲವಾದರೆ ನಷ್ಟ ಅನುಭವಿಸಬೇಕಾದಿತು ಎಚ್ಚರ. |
By : ವಿ.ಡಿ.ಭಟ್ ಕರಸುಳ್ಳಿ (ಶಿರಸಿ)
Contact No : 9449360806