About Us Advertise with us Be a Reporter E-Paper

ಸೂರ್ಯೋದಯ : 6.15

ಸೂರ್ಯಾಸ್ತ : 6.33

ರಾಹು ಕಾಲ : 7.30-9.00
ಗುಳಿಕ ಕಾಲ : 3.00-4.30
ಯಮಗಂಡ ಕಾಲ : 12.00-1.30

ಶ್ರೀವಿಲಂಬಿ, ದಕ್ಷಿಣಾಯನ, ವರ್ಷಾ ಋತು, ಭಾದ್ರಮಾಸ, ಶುಕ್ಲಪಕ್ಷ, ಪ್ರತಿಪದ,  ಸೋಮವಾರ, ನಿತ್ಯ ನಕ್ಷತ-ಪೂ.ಫಾಲ್ಗುಣ-ಉ.ಫಾಲ್ಗುಣ, ಯೋಗ-ಸಾಧ್ಯ, ಕರಣ-ಕಿಸ್ತುಘ್ನ

ಉದ್ಯೋಗದಲ್ಲಿ ಬಿಡುವಿಲ್ಲದ ಕೆಲಸ. ದಣಿವಾರಿಸಿಕೊಳ್ಳಲು ಸಾಧ್ಯವಾದಷ್ಟು ವೇಳೆಯ ಅಭಾವ ಸಂಭವವಿದೆ. ಮನ ರಂಜನಾ ಕಾರ್ಯ ಕ್ರಮದಲ್ಲಿ ಭಾಗವಹಿಸಿ ನಿಮ್ಮ ಆಯಾಸ ಪರಿಹರಿಸಿಕೊಳ್ಳಿ.ಮಿತ್ರರ ಬಾಂಧವ್ಯ ವೃದ್ಧಿಯಾಗಲಿದೆ.
ಸಾಮಾಜಿಕ ಗೌರವ ಸ್ಥಾನಮಾನಗಳು ಲಭಿಸಿ ಮನಸ್ಸಿಗೆ ಖುಷಿ ನೀಡುವ ದಿನವಿದು. ಧನ್ಯತಾಭಾವದಲ್ಲಿ ಈ ದಿನವನ್ನು ಕಳೆಯುವ ಯೋಗವಿದೆ. ಕೌಂಟುಬಿಕ ವಿಚಾರದಲ್ಲೂ ಸಂತೋಷ ಹೊಂದುವ ಘಟನೆಗಳು ಉಂಟಾಗಲಿವೆ.
ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡು ಅದರಲ್ಲಿ ಜಯ ಹೊಂದುವ ದಿನ ಇದಾಗಿದೆ. ಯೋಚಿಸಿ ನಿರ್ಧಾರಕ್ಕೆ ಬರುವ ವಿವೇಕ ಇಂದು ಜಾಗೃತವಾಗಲಿದೆ. ಶರೀರ ಗುಣಧರ್ಮವು ಶಕ್ತಿ ಹೀನತೆ ಪಡೆಯಲಿದೆ. ಇದನ್ನು ಜಾಗ್ರತಿಯಿಂದ ನಿವಾರಿಸಿಕೊಳ್ಳಿ.
ಕುಟುಂಬದ ಏಳಿಗೆಗೆ ಕೈಗೊಳ್ಳುವ ನಿರ್ಧಾರವು ಹೆಚ್ಚು ಶುಭ ಫಲವನ್ನು ಕೆಲಸವನ್ನು ನಾಳೆ ಮಾಡಬೇಕಾದದ್ದು ಇಂದೇ ಮಾಡಿ ಶುಭ ಲಾಭ ಫಲವನ್ನು ತೆಗೆದುಕೊಳ್ಳುತ್ತೀರಿ. ವಸ್ತು-ವಾಹನಗಳ ಬಗ್ಗೆ ಇಂದು ವ್ಯವಹರಿಸುವುದು ಬೇಡ.
ಹೆಚ್ಚಿನ ಪರಿಶ್ರಮದಿಂದ ಶುಭ ಫಲಗಳನ್ನು ಇಂದು ತೆಗೆದುಕೊಳ್ಳಲಿದ್ದೀರಿ. ಹಣ ಕಾಸಿನ ವಿಚಾರದಲ್ಲಿ ಸನ್‌ಮಾರ್ಗದಲ್ಲಿ ಹೋಗಬೇಕಾದ ಅವಶ್ಯಕತೆ ಇದೆ. ಮೋಜು-ಮಸ್ತಿ ಮೀತವಾಗಿಯೇ ಇರ ಲಿ. ಅತಿರೇಕಕ್ಕೆ ಹೋಗುವುದು ಬೇಡ.
ಎದುರಾಳಿಗಳನ್ನ ಸಮರ್ಥವಾಗಿ ಎದುರಿಸುವ ಜತೆಗೆ ಅವರನ್ನು ತಮ್ಮ ಅಧೀನದಲ್ಲಿ ಇಟ್ಟು ಕೊಳ್ಳುವ ಯೋಗ ಈ ದಿನ ನಿಮಗಿದೆ. ವಿಶ್ರಾಂತಿ ರಹಿತವಾಗಿ ಪ್ರವೃ ತ್ತಿಯು ಇಂದು ನಿಮಗೆ ಬರಲಿದೆ. ಕುಟುಂಬ ವರ್ಗದವರೊಡನೆ ಸ್ನೇಹದಿಂದ ಇರಿ.
ಸ್ಥಿರಾಸ್ತಿ ಖರೀದಿಯಲ್ಲಿ ಇಂದು ನಿಮಗೆ ಶುಭ ವಿಲ್ಲದಿದ್ದರೂ ದೀರ್ಘಕಾಲದ ಯೋಜನೆಯನ್ನ ಪ್ರಾರಂಭಿಸಲು ಇಂದು ಸಕಾಲ. ಇಂದಿನ ಯೋಚನೆಯು ಸಕಾರಾತ್ಮಕವಾಗಿರುತ್ತಿದ್ದು ಎಲ್ಲರ ಮೆಚ್ಚುಗೆಗೆ ಒಳಗಾಗಲಿದೆ. ಆಹಾರದಲ್ಲಿ ಎಚ್ಚರಿಕೆ ಇರಲಿ.
ಆರೋಗ್ಯವು ಸುಧಾರಿಸಿ ಹೆಚ್ಚು ಕ್ರಿಯಾ ಶೀಲರಾಗಿ ಇರಲು ಬಯಸುತ್ತೀರಿ. ಕೆಲಸ ದಲ್ಲೂ ಬಲಿಷ್ಠತೆಯನ್ನು ಹೊಂದಿ. ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಭಾಜ ನರಾಗುತ್ತೀರಿ. ಮಿತ್ರಕೂಟದಿಂದ ನೆರವೇರಿಸುವ ಸಮಾರಂಭದಿಂದ ಜಾಗೃತರಾಗಿರಿ.
ನೆಮ್ಮದಿಯ ಹೊಂದುವ ದಿನ. ವ್ಯಾಪಾರಿಗಳಿಗೆ ಇಂದು ಶುಭ ದಿನ. ಲಾಭ ದ್ವಿಗುಣಗೊಳಿಸಲು ಅವ ಕಾಶವದೆ. ಕಾರ್ಯ ಒತ್ತಡದಿಂದ ಹೆದ ರಬೇಕಿಲ್ಲ. ಎಲ್ಲವೂ ಸುಗಮವಾಗಿ ನೆರ ವೇರಲಿದೆ. ದೇವತಾ ಉಪಾಸನೆ ಅಗತ್ಯ.
ರೈತರಿಗೆ ಸಂತಸದ ದಿನ. ಶುಭ ಸಮಾ ಚಾರದಿಂದ ಲಾಭದಿಂದ ಕೃಷಿಯಲ್ಲಿ ಮುನ್ನುಗ್ಗುವ ಪ್ರವೃತ್ತಿ ಹೆಚ್ಚಲಿದೆ. ರಾಜಕೀಯ ನಾಯಕರಿಂದ ಅಭಯ ಹೊಂದಲಿದ್ದೀರಿ. ಹೈನುಗಾರಿಕೆಯ ಲ್ಲೂ ಶುಭ ಫಲ ಹೊಂದಲಿದ್ದೀರಿ.
ಕಲೆಯ ಬಗ್ಗೆ ಆಸಕ್ತಿ. ಕಲಾವಿದರಿಗೆ ಹೆಚ್ಚಿನ ಗೌರವವು ಹೆಚ್ಚಲಿದೆ. ಬುದ್ಧಿಯಿಂದಾಗಿ ಅಂತರ್ಮುಖಿಗಳಾ ಗಿರುವಷ್ಟೇ ಈ ದಿನ ಹೆಚ್ಚು. ಉದ್ಯೋಗ ಕ್ಕಿಂತ ಕುಟುಂಬ ವಿಭಾಗದಲ್ಲಿ ಹೆಚ್ಚು ನೆಮ್ಮದಿಯನ್ನು ಕಾಣಲಿದ್ದೀರಿ.
ಹೊಸ ವಿದ್ಯೆಯ ಬಗ್ಗೆ ನಿಮ್ಮ ದೃಷ್ಟಿ. ಇದರಲ್ಲಿ ಯಶವನ್ನು ಕಾಣುವ ಯೋಗ ಇಂದು ಇದೆ. ಉಲ್ಲಾಸದಾಯಕವಾದ ನಡೆ- ನುಡಿಯು ಇಂದು ನಿಮ್ಮ ವಿಶೇಷ. ಮನೆ ಮಂದಿಯ ಜತೆ ವಿನೋದ ಗೋಷ್ಠಿಗಳಲ್ಲಿ ಪಾಲ್ಗೊಳ್ಳುವಿಕೆ. ಒಟ್ಟಿನಲ್ಲಿ ಶುಭದಿನ.

By : ವಿ.ಡಿ.ಭಟ್ ಕರಸುಳ್ಳಿ (ಶಿರಸಿ)

Contact No : 9449360806

Language
Close