About Us Advertise with us Be a Reporter E-Paper

ಸೂರ್ಯೋದಯ : 6.15

ಸೂರ್ಯಾಸ್ತ : 6.33

ರಾಹು ಕಾಲ : 3.00-4.30
ಗುಳಿಕ ಕಾಲ : 12.00-1.30
ಯಮಗಂಡ ಕಾಲ : 9.00-10.30

ಶ್ರೀ ವಿಲಂಬಿ, ದಕ್ಷಿಣಾಯನ, ವರ್ಷಾ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಿತೀಯಾ, ಮಂಗಳವಾರ, ನಿತ್ಯ ನಕ್ಷತ್ರಹಸ್ತಾ, ಯೋಗಶುಭ ಕರಣಬಾಲವ.

ಮನಸ್ಸನ್ನು ಸಮಾಧಾನದಲ್ಲಿ ಇಟ್ಟು ಕೊಳ್ಳಿ. ಆತ್ಮೀಯರಲ್ಲಿ ವಿಶೇಷವಾಗಿ ವ್ಯವಹಾರ ಬೇಡ. ಹಣಕಾಸಿನ ವಿಚಾರದಲ್ಲೂ ಎಚ್ಚರ ಒಳಿತು. ದೂರದ ಪ್ರಯಾಣ ಬೇಡ. ದೇವತಾ ಆರಾಧನೆ ಬಲಗೊಳಿಸಿಕೊಳ್ಳಿ.
ಧನಲಾಭದಿಂದ ನಿಮ್ಮ ಉತ್ಸಾಹ ಇಮ್ಮಡಿಯಾಗಲಿದೆ. ಕಠಿಣವಾದ ಕಾರ್ಯದಲ್ಲಿ ನಿಮ್ಮನ್ನು ಇಂದು ತೊಡಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಲಾಭ ಕಾಣಲಿದ್ದೀರಿ. ಕುಟುಂಬದ ವಿಚಾರದಲ್ಲಿ ಸ್ವಲ್ಪ ಹಿನ್ನಡೆ ಉಂಟಾಗಬಹುದು.
ಅನಾವಶ್ಯಕವಾದ ಸಲಹೆಯನ್ನು ಗೆಳೆಯರಿಗೆ ಕೊಡುವುದು ಬೇಡ. ಇಲ್ಲವಾದರೆ ನಿಷ್ಠುರತೆಗೆ ಒಳಗಾಗುವ ಸಂದರ್ಭ ಹೆಚ್ಚಾಗಲಿದೆ. ರಾಜಕೀಯ ವ್ಯಕ್ತಿಗಳ ವ್ಯವಹಾರಿಕ ಕಾರ್ಯ ತೀವ್ರ ಶುಭತೆಯು ಕಾಣಲಿದೆ.
ಮನೋ ಉಲ್ಲಾಸಕ್ಕೆ ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಲೇಬೇಕು. ಬೇರೆಯವರ ತಪ್ಪನ್ನು ಕಂಡು ಹಿಡಿಯುವ ಗೋಜಿಗೆ ಹೋಗಬೇಡಿ. ತಪ್ಪು ನಿರ್ಧಾರದಿಂದ ವ್ಯವಹಾರಿಕ ನಷ್ಟವನ್ನು ಅನುಭವಿಸುವ ಸಂದರ್ಭ ಬರಬಹುದು.
ಉದ್ಯೋಗ ಸ್ಥಾನದಲ್ಲಿ ಆಗುವ ಗೊಂದಲಗಳಿಗೆ ನಿಧಾನವಾಗಿ ಪರಿಹಾರ ದೊರಕಲಿದೆ. ತಕ್ಷಣದ ನಿರ್ಧಾರಕ್ಕೆ ಬರುವುದು ಇಂದು ಒಳಿತಲ್ಲ. ಕೌಟುಂಬಿಕವಾಗಿ ಇಂದು ಸಮಾಧಾನ ದೊರಕಲಿದೆ.
ಕಿರಿಯರ ವಿಚಾರದಲ್ಲಿ ನಿಮ್ಮ ಒಡನಾಟ ಅಷ್ಟೊಂದು ಸರಿ ಬರಲಾರದು. ವಿಶಾಲವಾಗಿ ವಿಚಾರಿಸುವ ದೂರವಿರುವ ಯೋಗ ಇಂದು ಹೆಚ್ಚಾಗಲಿದೆ. ಸಹಬಾಳ್ವೆಗೆ ಹೆಚ್ಚು ಲಕ್ಷ ನೀಡಿ.
ಮಾಡಬೇಕಾದ ಕಾರ್ಯದಲ್ಲಿ ವಿಳಂಬ. ಬರಬಹುದಾದ ಲಾಭದಲ್ಲೂ ತಡೆ ಉಂಟಾಗಲಿದೆ. ಕೆಲಸ ಕಾರ್ಯದಲ್ಲಿ ನಿಮ್ಮನ್ನು ನೀವು ಹೆಚ್ಚು ತೊಡಗಿಸಿಕೊಳ್ಳಿ. ಮುಂದೊಂದು ದಿನದಲ್ಲಿ ಲಾಭ ಇದೆ ಎಂಬ ಆಶಾಭಾವದಲ್ಲಿ ದಿನ ಕಳೆಯಿರಿ.
ಎಲ್ಲ ವಿಚಾರಕ್ಕೂ ಪ್ರಶ್ನಿಸುವ ಕಾರ್ಯಕ್ಕೆ ಹೋಗಬೇಡಿ. ವಿರೋಧಿಸುವ-ಪ್ರತಿಭಟಿಸುವ ವರ್ತನೆ ಹೆಚ್ಚಾಗಲಿದೆ. ಇದನ್ನು ನಿಯಂತ್ರಿಸಿ ಕೊಳ್ಳಿ. ಲಾಭದ ವಿಚಾರದಲ್ಲಿ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರಲಿದೆ.
ನಿಮ್ಮ ಶ್ರಮಕ್ಕೆ ಇಂದು ದೊರಕಲಿದೆ. ನಿಮ್ಮ ಕಾರ್ಯ ಶೈಲಿಯನ್ನು ಮೇಲಧಿಕಾರಿಗಳು ಮೆಚ್ಚಲಿದ್ದಾರೆ. ಸ್ವಲ್ಪ ಅಹಂ ಭಾವವು ಜಾಗ್ರತವಾಗಲಿದೆ. ಬಲು ಎಚ್ಚರದಿಂದ ನಿಗ್ರಹಿಸಿಕೊಳ್ಳಿ.
ಮಾತಿನಿಂದಲೇ ಜಗಳ. ಇದಕ್ಕೆ ನೀವು ಇಂದು ಮದ್ದನ್ನು ಕಂಡುಕೊಳ್ಳಲೇ ಬೇಕು. ದರ್ಪದ ಮಾತನ್ನು ಕಡಿಮೆ ಮಾಡಿ. ಆಗ ನಿಮ್ಮ ಆತ್ಮೀಯರು ದೂರ ಆಗಲಾರರು. ಕೌಟುಂಬಿಕವಾಗಿ ಕಾರ್ಯದಲ್ಲಿ ಪ್ರಗತಿ ಕಾಣುವುದು.
ಕಷ್ಟಗಳು ನಿವೃತ್ತಿಯಾಗಿ ಸುಖ- ಸಮೃದ್ಧಿಯನ್ನು ಕಾಣುವ ಯೋಗ ಇಂದು ನಿಮಗಿದೆ. ಇದನ್ನು ಬಳಸಿಕೊಂಡು ಮುನ್ನುಗ್ಗಿ ಶುಭ ದಿನವಾಗಿ ಆಚರಿಸಿಕೊಳ್ಳಿ. ಮನೆಯಲ್ಲಿ ನೆಲೆಸಲಿದೆ.
ಆಗು-ಹೋಗುಗಳಿಗೆ ತಲೆಕೆಡಿಸಿ ಕೊಳ್ಳುವುದು ಬೇಡ. ದೇವರ ಮೇಲೆ ಭಾರ ಹಾಕಿ. ಸಮಾಧಾನದಲ್ಲಿ ಈ ದಿನವನ್ನು ಕಳೆಯಿರಿ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ಶೀತಬಾಧೆ ಕಾಣಿಸಲಿದೆ.

By : ವಿ.ಡಿ.ಭಟ್ ಕರಸುಳ್ಳಿ (ಶಿರಸಿ)

Contact No : 9449360806

Language
Close