About Us Advertise with us Be a Reporter E-Paper

ಈ ದಿನ ನಿಮಗೆ ಹೇಗೆ?

ಸೂರ್ಯೋದಯ : 6.13

ಸೂರ್ಯಾಸ್ತ : 6.43

ರಾಹು ಕಾಲ : 12.00-1.30
ಗುಳಿಕ ಕಾಲ : 10.30-12.00
ಯಮಗಂಡ ಕಾಲ : 7.30-9.00

ಶ್ರೀವಿಲಂಬಿ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ತೃತೀಯಾ,ಬುಧವಾರ, ನಿತ್ಯ ನಕ್ಷತ್ರ-ಉ.ಭಾದ್ರಪದ, ಯೋಗ-ಶೂಲ , ಕರಣ-ವಣಿಜ.

ಹಿರಿಯರ ಆಶೀರ್ವಾದ ದೊರಕಿ ದಿವ್ಯತೆಯ ಅನುಭವ ಇಂದು ಉಂಟಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಉನ್ನತಿ ಲಾಭವು ಇಂದು ದೊರಕಲಿದೆ. ಆರೋಗ್ಯದಲ್ಲಿ ಉಷ್ಣ ಬಾಧೆಯೋದ ಜಾಗ್ರತಾರಾಗಿರಿ.
ಕಿರಿಯರಿಂದ ಜತೆಗೆ ಕರುಣೆ-ಅನುಭೂತಿಯ ನಡೆಯು ಇಂದು ನಿಮ್ಮದಾಗಿರಲಿ. ಇಲ್ಲವಾದರೆ ಹಲವರಿಂದ ವಿರೋಧಿಗಳನ್ನು ಎದುರಿಸುವ ಸಂದರ್ಭ ಬರಬಹುದು. ದೊಡ್ಡ ವ್ಯವಹಾರ ಬೇಡ.
ಜೀವನದ ಅತೀ ಗಂಭೀರ ವಿಚಾರಗಳನ್ನು ಮಾಡುತ್ತ ಇಂದಿನ ನೆಮ್ಮದಿಯನ್ನು ಕಳೆದುಕೊಳ್ಳುವ ಗೋಜಿಗೆ ಹೋಗುವುದು ಬೇಡ. ಕೆಲಸವನ್ನು ತೀವ್ರಗೊಳಿಸಿ ಚಿಂತೆಯನ್ನು ಬಿಟ್ಟು ಬಿಡಿ.
ಬೇರೆಯವರ ಮಾತಿಗೆ ಹೆಚ್ಚು ಗಮನ ನೀಡಲಿದ್ದೀರಿ. ಇದರಿಂದ ವ್ಯವಹಾರಿಕ ನಷ್ಟಗಳು ಬರುವ ಸಾಧ್ಯತೆ ಹೆಚ್ಚಿದೆ. ಎಚ್ಚರದಿಂದ ಇದನ್ನು ನಿವಾರಿಸಿಕೊಳ್ಳಿ. ಸ್ವಂತಿಕೆ ಬೆಳೆಸಿಕೊಳ್ಳಿ.
ಪರೋಪಕಾರದ ಪುಣ್ಯ ಇಂದು ನಿಮ್ಮನ್ನು ಆಪತ್ತಿನಿಂದ ಪಾರು ಮಾಡಲಿದೆ. ಮಾನ-ಮರ್ಯಾದೆಯು ಸ್ವಲ್ಪದರಲ್ಲಿ ಉಳಿದು ಪಾರಾಗಲಿದ್ದೀರಿ. ಹೊಸ ಕಾರ್ಯವನ್ನು ಕೈಗೆತ್ತಿಕೊಳ್ಳುವುದು ಬೇಡ.
ಸಮಾಧಾನವು ಇಂದು ಬರಿದಾಗಿ ಉಗ್ರತೆಯೇ ತಾಂಡವಾಡಲಿದೆ. ಇದನ್ನು ನಿಗ್ರಹಿಸಿಕೊಳ್ಳಿ. ಬಂಧುಗಳ ಜತೆ ವ್ಯವಹಾರ ಅನಿವಾರ್ಯವಾಗಿ ಮಾಡಬೇಕಾದ ಪ್ರಸಂಗ ಬರಬಹುದು. ಎಚ್ಚರದಿಂದ ವ್ಯವಹರಿಸಿ.
ನಿದ್ರೆಯಲ್ಲಿ ಈ ದಿನ ನಿಮಗೆ ಉಂಟಾಗಿ ಇಡೀ ದಿನ ಕಿರಿ-ಕಿರಿಯು ಉಂಟಾಗುವ ಸಾಧ್ಯತೆ ಹೆಚ್ಚು. ಪಿತ್ತ ಪ್ರಕೃತಿಯು ಜಾಗ್ರತವಾಗಿ ಬಿಡಲಿದೆ. ಇದನ್ನು ನಿವಾರಿಸಿಕೊಳ್ಳಿ.
ವ್ಯವಹಾರದಲ್ಲಿ ಭಾವನೆಯು ಪ್ರಧಾನವಾಗಿ ಬಿಡುವ ಇದರಿಂದ ಲಾಭ ಕೊಂಚ ಹಿನ್ನಡೆಯು ಉಂಟಾಗಿ ಬಿಡಲಿದೆ. ವಸ್ತುನಿಷ್ಠ ನಿರ್ಧಾರಕ್ಕೆ ಬಂದು ವ್ಯವಹಾರವನ್ನು ಕೈಗೊಳ್ಳಿ ಶುಭವಿದೆ.
ಬಾಯಿ - ಬಡಾಯಿತನವನ್ನು ಇಂದು ನಿಯಂತ್ರಿಸಿಕೊಳ್ಳಿ. ಮಾತಿನ ಬರದಲ್ಲಿ ಸುಳ್ಳನಾಡುವ ಸಾಧ್ಯತೆ ಹೆಚ್ಚಾಗಲಿದೆ. ಇದರಿಂದ ನಿಮ್ಮ ಗೌರವವು ಕಡಿಮೆ ಆಗಲಿದೆ. ಎಚ್ಚರದಿಂದ ವರ್ತಿಸಿ.
ಕಾರ್ಯ ವಿಧಾನದಲ್ಲಿ ವಿಳಂಬ ಶುಭವಲ್ಲ. ನಿಖರ ಹಾಗೂ ತೀವ್ರತೆಯನ್ನು ಕೆಲಸದಲ್ಲಿ ಹೊಂದಿ ಆಗ ಮಾತ್ರ ಶುಭ ಫಲವನ್ನು ಹೊಂದಲು ಸಾಧ್ಯವಿದೆ.
ಸಮಯ ಸಾಧಕರಿಂದ ಎಚ್ಚರದಿಂದ ಇರಿ. ಬೆಳ್ಳಗಿರುವುದೆಲ್ಲಾ ಹಾಲೆಂಬುದು ನಿಜವಲ್ಲ. ವ್ಯಕ್ತಿಗಳನ್ನ ಇಂದು ಪರೀಕ್ಷಿಸಿಕೊಂಡೇ ಅವರ ಜತೆ ವ್ಯವಹಾರವಿರಲಿ.
ಮಿಶ್ರ ಫಲದ ದಿನವಿದು. ಸುಖ-ದುಃಖಗಳು ಸಮನಾಗಿ ಪಡೆಯಲಿದ್ದೀರಿ. ಕುಟುಂಬದಲ್ಲಿ ಸುಖ ಪ್ರಾಪ್ತವಾದರೆ. ವ್ಯವಹಾರದಲ್ಲಿ ಕೊಂಚ ನಷ್ಟವು ದುಃಖವನ್ನ ತರಲಿದೆ.

By : ವಿ.ಡಿ.ಭಟ್ ಕರಸುಳ್ಳಿ (ಶಿರಸಿ)

Contact No : 9449360806

Language
Close