About Us Advertise with us Be a Reporter E-Paper

ಪ್ರಚಲಿತವಿದೇಶ

ಸಾಯುವ ಕೊನೆ ಕ್ಷಣದಲ್ಲಿದ್ದ ಪ್ರಿಯತಮನಿಗೆ ಅಪ್ಪುಗೆ..!

ಲಂಡನ್: ಸಾಯುವ ಕೊನೆ ಕ್ಷಣದಲ್ಲಿದ್ದ ಪ್ರಿಯತಮನನ್ನು ಪ್ರೇಮಿ ಅಪ್ಪುಗೆ ನೀಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಪ್ರಿಯತಮ ಬ್ಲೇಕ್ ವಾರ್ಡ್ ಸಾಯಲು ಇನ್ನೇನು 16 ನಿಮಿಷ ಇರುವಾಗ ಪ್ರಿಯತಮೆ ಸ್ಟಿಫೇನಿ ರೇ ಪ್ರೀತಿಯ ಅಪ್ಪುಗೆ ನೀಡಿದ್ದಾರೆ. ವೇಲ್ಸ್ ನಲ್ಲಿರುವ ಬೀಚ್‍ನಲ್ಲಿ ಸ್ವಿಮ್ಮಿಂಗ್ ಮಾಡುತ್ತಿದ್ದ ವೇಳೆ ಸಮುದ್ರದ ಅಲೆಗೆ ಬ್ಲೇಕ್ ವಾರ್ಡ್ ಕೊಚ್ಚಿ ಹೋಗಿದ್ದರು. ಈ ವೇಳೆ ಕರಾವಳಿ ರಕ್ಷಣಾ ಸಿಬ್ಬಂದಿ ಈತನನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು.

ಈ ವೇಳೆ ಸ್ಟಿಫೇನಿ ರೇ ಪ್ರೇಮಿಯನ್ನು ನೋಡಲು ಆಸ್ಪತ್ರೆಗೆ ಹೋಗಿದ್ದು, ಆತನನ್ನು ಮಲಗಿಕೊಂಡು ಗಟ್ಟಿಯಾಗಿ ಅಪ್ಪಿಕೊಂಡಿದ್ದಾಳೆ. ಬಳಿಕ ತನ್ನ ಅಪ್ಪುಗೆ ಫೋಟೋವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾಳೆ. ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಪ್ರಿಯತಮ ಬ್ಲೇಕ್ ವಾರ್ಡ್ ಮೃತಪಟ್ಟಿದ್ದಾನೆ.

Tags

Related Articles

Leave a Reply

Your email address will not be published. Required fields are marked *

Language
Close