Breaking Newsರಾಜ್ಯ
ಇಂದು ರಾಜ್ಯಕ್ಕೆ ಬರಲಿದೆ ಅಟಲ್ ಚಿತಾಭಸ್ಮ
ಬೆಂಗಳೂರು: ದೆಹಲಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರು ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಅಟಲ್ ಜೀ ಕುಟುಂಬದ ಸದಸ್ಯರಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿಕಲಶವನ್ನು ಸ್ವೀಕರಿಸಿದರು. ಇಂದು ಸಂಜೆ ಅಸ್ಥಿಕಲಶವನ್ನು ಬೆಂಗಳೂರಿಗೆ ತರಲಾಗುತ್ತಿದ್ದು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪಕ್ಷದ ಮುಖಂಡರು ಸ್ವಾಗತಿಸಲಿದ್ದಾರೆ.

ಬಳಿಕ ರಾಜ್ಯ ಬಿಜೆಪಿ ಕಾರ್ಯಾಲಯದವರೆಗೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಅಸ್ಥಿಕಲಶವನ್ನು ಮೆರವಣಿಗೆಯಲ್ಲಿ ತರಲಿದ್ದಾರೆ. ಇಂದು ರಾತ್ರಿಯ ವರೆಗೆ ಪಕ್ಷದ ಕಾರ್ಯಾಲಯದಲ್ಲಿ ಪುಷ್ಪಾರ್ಚನೆ ಮಾಡಲಾಗುವುದು.