About Us Advertise with us Be a Reporter E-Paper

Breaking Newsರಾಜ್ಯ

ಮೆರವಣಿಗೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಮೇಲೆ ರಾಸಾಯನಿಕ ದಾಳಿ

ತುಮಕೂರು: ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಯ ಮೆರವಣಿಗೆಯ ವೇಳೆ ದುಷ್ಕರ್ಮಿಗಳು ರಾಸಾಯನಿಕ ದಾಳಿ ನಡೆಸಿರುವ ಘಟನೆ ತುಮಕೂರಿನ ವಾರ್ಡ್ ನಂಬರ್ 16 ರ ಬಾರ್ ಲೈನ್ ರಸ್ತೆಯಲ್ಲಿ ನಡೆದಿದೆ.

ಕಾಂಗ್ರೆಸ್ ಸದಸ್ಯ ಇನಾಯತುಲ್ಲಾ ಖಾನ್ ಮೆರವಣಿಗೆ ವೇಳೆ ಆ್ಯಸಿಡ್ ರೂಪದ ರಾಸಾಯನಿಕ ದಾಳಿ ನಡೆದಿದೆ. ಘಟನೆಯಿಂದ ಅನೇಕ ಮಂದಿಗೆ ಗಾಯಗಳಾಗಿವೆ. ‘ಸುಮಾರು 30 ವರ್ಷದಿಂದ ಕಾಂಗ್ರೆಸ್  ಇಲ್ಲಿ ಗೆದ್ದಿರಲಿಲ್ಲ. ಈ ಬಾರಿ ಗೆದ್ದಿರುವುದರಿಂದ ನಮ್ಮ ಪಕ್ಷದ ಮಾಜಿ ಶಾಸಕರನ್ನು ಭೇಟಿಯಾಗಲು ಅವರ ಮನೆ ಬಳಿ ಹೋಗಿದ್ದೆ. ಈ ವೇಳೆ ನಮ್ಮ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು.

ಈ ವೇಳೆ ದುಷ್ಕರ್ಮಿಗಳು ರಾಸಾಯನಿಕ ದಾಳಿ ನಡೆಸಿದ್ದಾರೆ. ಸುಮಾರು 30-35 ಜನರ ಮೇಲೆ ಆ್ಯಸಿಡ್ ದಾಳಿಯಾಗಿದೆ.  ತಪ್ಪಿತಸ್ಥರನ್ನು ಹಿಡಿದು ಅವರಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಬೇಕು’ ಎಂದು ಇನಾಯತುಲ್ಲಾ ಅವರು ಆಗ್ರಹಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close