About Us Advertise with us Be a Reporter E-Paper

Breaking NewsUncategorizedದೇಶಪ್ರಚಲಿತ
Trending

ಅಗಸ್ಟಾ ಕಾಂಡ: ವಾಯುಪಡೆ ಮಾಜಿ ಮುಖ್ಯಸ್ಥನಿಗೆ ಜಾಮೀನು

ದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್ ಪ್ರಕರಣದಲ್ಲಿ ವಾಯುಪಡೆ ಮಾಜಿ ಮುಖ್ಯಸ್ಥ ಎಸ್‌ ಪಿ ತ್ಯಾಗಿ ಹಾಗು ಆತನ ಸಹೋದರರಿಗೆ ಜಾಮೀನು ಮಂಜೂರು ಮಾಡಿದೆ.

ಜಾಮೀನು ನೀಡಲಾದ ಪ್ರತಿಯೊಬ್ಬರಿಗೂ ಒಂದು ಲಕ್ಷ ರು ವೈಯಕ್ತಿಕ ಬಾಂಡ್‌ಅನ್ನು ಪ್ರಸ್ತುತಪಡಿಸುವಂತೆ ನ್ಯಾಯಾಲಯ ಕೋರಿದ್ದು ಇದೇ ಮೊತ್ತವನ್ನು ಖಾತ್ರಿಯಾಗಿ ನೀಡಲು ದೆಹಲಿ ಹೈಕೋರ್ಟ್‌ ಕೋರಿದೆ.

ಅತಿ ಗಣ್ಯರ ಹಾರಾಟಕ್ಕೆಂದು ಖರೀದಿ ಮಾಡಲು ತೀರ್ಮಾನಿಸಲಾಗಿದ್ದ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ಗಳ ಖರೀದಿ ಮಾಡುವ ಸಂದರ್ಭ 3,600 ಕೋಟಿ ರುಗಳಷ್ಟು ಕಿಕ್‌ ಬ್ಯಾಕ್‌ ನಡೆದಿದ್ದು, ಈ ಸಂಬಂಧ 34 ಮಂದಿ ವಿರುದ್ಧ ಜಾರಿ ನಿರ್ದೇಶನಾಲಯವು ಸಾರ್ವಜನಿಕ ಹಣ ದುರ್ಬಳಕೆ ಕಾಯಿದೆ ಅಡಿ ಆರೋಪಪಟ್ಟಿ ದಾಖಲಿಸಿತ್ತು.

ಡೀಲ್‌ನ ಮಧ್ಯವರ್ತಿಗಳಾದ ಕಾರ್ಳೋ ಗೆರೋಸಾ, ಗೈಡೋ ಹಷ್ಕೆ ಹಾಗು ಕ್ರಿಶ್ಚಿಯನ್‌ ಮೈಕೆಲ್‌ ವಿರುದ್ಧ ಜಾಮೀನುರಹಿತ ವಾರಂಟ್‌ ಅನ್ನು ನ್ಯಾಯಾಲಯ ಅದಾಗಲೇ ಜಾರಿ ಮಾಡಿದೆ. ಪ್ರಕರಣದಲ್ಲಿ ದುಬೈನಲ್ಲಿ ಎರಡು ಸಂಸ್ಥೆಗಳನ್ನು ನಡೆಸುತ್ತಿರುವ ರಾಜೀವ್‌ ಸಕ್ಸೇನಾ ಹಾಗು ಅವರ ಪತ್ನಿ ಶಿವಾನಿ ಸಕ್ಸೇನಾ ಹೆಸರುಗಳು ಸಹ ಪ್ರಕರಣದಲ್ಲಿ ಕೇಳಿ ಬಂದಿವೆ.

ಪ್ರಕರಣದ ಮುಂದಿನ ಆಲಿಕೆಯನ್ನು ಡಿಸೆಂಬರ್‌ 18ರಂದು ಆಲಿಸಲಾಗುವುದು.

Tags

Related Articles

Leave a Reply

Your email address will not be published. Required fields are marked *

Language
Close