ಟಿ-20 : ಸಿಂಹಳೀಯರ ವಿರುದ್ಧ ಆಸೀಸ್ ದಾಖಲೆ ಗೆಲುವು

Posted In : Others

ಪಲ್ಲೆಕಲೆ:  ಟಿ-20ಕ್ರಿಕೆಟ್‌‌ನಲ್ಲಿ ಆಸ್ಟ್ರೇಲಿಯಾ ತಂಡದ  ಆರಂಭಿಕ ಆಟಗಾರ ಗ್ಲೇನ್ ಮ್ಯಾಕ್ಸ್‌‌ವೆಲ್ ಅವರ ಅಜೇಯ ಶತಕದಿಂದಾಗಿ ಶ್ರೀಲಂಕಾ ವಿರುದ್ಧದ ಮೊದಲ ಟಿ-20ಪಂದ್ಯದಲ್ಲಿ ಅತಿಹೆಚ್ಚು ರನ್ ಕಲೆ ಹಾಕುವ ಮೂಲಕ ಆಸೀಸ್ ಹೊಸ ದಾಖಲೆ ನಿರ್ಮಿಸಿದೆ.

ಶ್ರೀಲಂಕಾದ ಪಲ್ಲೆಕಲೆಯಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 20 ಓವರ್‌‌ಗಳಲ್ಲಿ ದಾಖಲೆಯ 263 ರನ್ ಗಳಿಸಿ ಹೊಸ ದಾಖಲೆ ನಿರ್ಮಿಸಿತು. ಈ ಬೃಹತ್‌ ಮೊತ್ತ ಬೆನ್ನಟ್ಟಿದ ಶ್ರೀಲಂಕಾ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 178 ರನ್‌ ಮಾತ್ರ ಗಳಿಸಲು ಸಾಧ್ಯವಾಯಿತು.  ಪರಿಣಾಮ ಆಸೀಸ್‌ 85 ರನ್‌ಗಳ ಜಯ ದಾಖಲಿಸಿತು. 

ಆಸೀಸ್ ಪರವಾಗಿ ಮ್ಯಾಕ್ಸ್‌ವೆಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಡೇವಿಡ್‌ ವಾರ್ನರ್‌ ಜೊತೆ ಇನ್ನಿಂಗ್ಸ್‌ ಆರಂಭಿಸಿದ ಮ್ಯಾಕ್ಸ್‌ವೆಲ್‌ ಕೇವಲ 65 ಎಸೆತಗಳಲ್ಲಿ 9 ಸಿಕ್ಸರ್, 14 ಬೌಂಡರಿ ಸಮೇತ 145 ರನ್ ಗಳಿಸಿ ಅಜೇಯರಾಗಿ ಉಳಿದರು. ಡೇವಿಡ್‌ ವಾರ್ನರ್‌ 28 ರನ್‌, ಉಸ್ಮಾನ್ ಖಾವಾಜಾ 36 ರನ್‌ ಟ್ರವಿಸ್ ಹೆಡ್‌ 45 ರನ್‌ಗಳು ಆಸೀಸ್‌ಗೆ ಅತ್ಯಧಿಕ ಮೊತ್ತ ಗಳಿಸಲು ನೆರವಾಯಿತು. 

Leave a Reply

Your email address will not be published. Required fields are marked *

7 + nineteen =

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top