About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಧೋನಿ ಫಿಫ್ಟಿ, ರೋಹಿತ್‌ ಭರ್ಜರಿ ಶತಕ: ಗೆಲುವಿಗಾಗಿ ಹೋರಾಟ; 44.1 ಒವರ್‌ಗಳಲ್ಲಿ 213/6

ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಒಡ್ಡಿರುವ 289 ರನ್ ಹಿಂಬಾಲಿಸುತ್ತಿರುವ ಟೀಮ್ ಇಂಡಿಯಾ, ರೋಹಿತ್ ಶರ್ಮಾ ಅಮೋಘ ಶತಕ ಹಾಗೂ ಮಹೇಂದ್ರ ಸಿಂಗ್ ಧೋನಿ ಸಮಯೋಚಿತ ಅರ್ಧಶತಕದ ನೆರವಿನಿಂದ ತಿರುಗೇಟು ನೀಡುತ್ತಿದೆ.

ಪ್ರಥಮ ಓವರ್‌ನಲ್ಲೇ ಜೇಸನ್‌ ಬೆಹ್ರೆನ್‌ಡಾರ್ಫ್‌ ಶಿಖರ್ ಧವನ್ (0) ಶೂನ್ಯಕ್ಕೆ ಹೊರಗಟ್ಟಿದರು. ನಾಯಕ ವಿರಾಟ್ ಕೊಹ್ಲಿ (3) ಜತೆಗೆ ಅಂಬಟಿ ರಾಯುಡು (0) ಅವರನ್ನು ಬೆನ್ನು ಬೆನ್ನಿಗೆ ಪೆವಿಲಿಯನ್‌ಗಟ್ಟಿದ ಜೇ ರಿಚರ್ಡ್ಸನ್ ಭಾರತಕ್ಕೆ ತೀವ್ರ ಆಘಾತ ನೀಡಿದರು. ಇದರೊಂದಿಗೆ 3.5 ಓವರ್‌ಗಳಲ್ಲೇ 4 ರನ್ ಗಳಿಸುವುದರೆಡೆಗೆ ಪ್ರಮುಖ ಮೂರು ವಿಕೆಟುಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಮೊದಲೈದು ಓವರ್‌ಗಳಲ್ಲಿ ಭಾರತ 11 ಹಾಗೂ ಮೊದಲ ಪವರ್ ಪ್ಲೇ ಅಂತ್ಯಕ್ಕೆ 10 ಓವರ್ ವೇಳೆಗೆ ಮೂರು ವಿಕೆಟ್ ನಷ್ಟಕ್ಕೆ 21 ರನ್‌ಗಳನ್ನಷ್ಟೇ ಗಳಿಸಿತ್ತು. ಇದರಿಂದ ಆರಂಭದಲ್ಲೇ ತೀವ್ರ ಹಿನ್ನಡೆಗೊಳಗಾಯಿತು.

ಧೋನಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರೆ ರೋಹಿತ್ ಕೆಟ್ಟ ಚೆಂಡುಗಳನ್ನು ದಂಡಿಸಿದರು. ಅಲ್ಲದೆ ಏಕದಿನದಲ್ಲಿ 38ನೇ ಅರ್ಧಶತಕ ಸಿಡಿಸಿದರು. ಈ ಮೂಲಕ ಭಾರತ ತಿರುಗೇಟು ನೀಡಲು ನೆರವಾದರು. ಅಂತಿಮ 25 ಓವರ್‌ಗಳಲ್ಲಿ ಭಾರತದ ಗೆಲುವಿಗೆ 190 ರನ್‌ಗಳ ಅವಶ್ಯಕತೆಯಿತ್ತು. ಅತ್ತ ರೋಹಿತ್-ಧೋನಿ ಜೋಡಿಯು ಶತಕದ ಜತೆಯಾಟವನ್ನು ನೀಡಿದರು.

ಏಕದಿನದಲ್ಲಿ 68ನೇ ಫಿಫ್ಟಿ; ರೋಹಿತ್ ಬೆನ್ನಲ್ಲೇ ಮಹಿ ಕೂಡಾ ಅರ್ಧಶತಕವನ್ನು ಬಾರಿಸಿದರು. ಧೋನಿ ಫಿಫ್ಟಿ 93 ಎಸೆತಗಳಲ್ಲಿ ದಾಖಲಾಗಿದ್ದವು. ಈ ಮೂಲಕ ತಮ್ಮ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದರು. ಆದರೆ ಅರ್ಧಶತಕದ ಬೆನ್ನಲ್ಲೇ ವಿಕೆಟ್ ಒಪ್ಪಿಸಿದ ಧೋನಿ ನಿರಾಸೆ ಅನುಭವಿಸಿದರು. 96 ಎಸೆತಗಳನ್ನು ಎದುರಿಸಿದ ಮಹಿ ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು. ಅಲ್ಲದೆ ರೋಹಿತ್ ಜತೆ ನಾಲ್ಕನೇ ವಿಕೆಟ್‌ಗೆ 137 ರನ್‌ಗಳ ಜತೆಯಾಟದಲ್ಲಿ ಭಾಗಿಯಾದರು. ಧೋನಿ ವಿಕೆಟ್ ಸಹ ಡೆಬ್ಯು ವೇಗಿ ಬೆಹ್ರೆನ್‌ಡಾರ್ಫ್ ಪಾಲಾಯಿತು.

ಧೋನಿ ಪತನದ ಬಳಿಕವೂ ಹಿಟ್‌ಮ್ಯಾನ್ ಅಮೋಘ ಆಟವನ್ನು ಮುಂದುವರಿಸಿದರು. ಇವರಿಗೆ ದಿನೇಶ್ ಕಾರ್ತಿಕ್‌ರಿಂದ (12) ಉತ್ತಮ ಬೆಂಬಲ ಸಿಗದೇ ಹೋಯಿತು. ಇನ್ನೊಂದೆಡೆ ಕೆಚ್ಚೆದೆಯ ಹೋರಾಟ ನೀಡಿದ ರೋಹಿತ್, ಏಕದಿನದಲ್ಲಿ 22ನೇ ಶತಕ ಸಾಧನೆ ಮಾಡಿದರು. ರೋಹಿತ್ ಶತಕವು 110 ಎಸೆತಗಳಲ್ಲಿ ದಾಖಲಾಗಿತ್ತು. ಜಡೇಜ 8 ರನ್‌ ಗಳಿಸಿ ಔಟಾದರು/

44.1 ಓವರ್‌ಗಳಲ್ಲಿ ಭಾರತದ ಸ್ಕೋರ್ 213/6. ಅಂದರೆ ಅಂತಿಮ 35 ಎಸೆತಗಳಲ್ಲಿ ತಂಡದ ಗೆಲುವಿಗೆ 76 ರನ್‌ಗಳ ಅವಶ್ಯಕತೆಯಿತ್ತು.

Tags

Related Articles

Leave a Reply

Your email address will not be published. Required fields are marked *

Language
Close