Wednesday, 24th April 2024

ಉದ್ದಿಮೆಗಳ ಸ್ಥಾಪನೆಗೆ ಸವಲತ್ತುಗಳಿಗಿಂತ ಅಡೆತಡೆಗಳೇ ಹೆಚ್ಚು!

ಸಿದ್ಧಾರ್ಥ ವಾಡೆನ್ನವರ, ಲೇಖಕರು

ಉದ್ದಿಮೆಗಳ ಸ್ಥಾಾಪನೆಗೆ ಸವಲತ್ತುಗಳ ಬದಲಾಗಿ ಅಡೆತಡೆಗಳೇ ಅಧಿಕ. ಅಧಿಕಾರಿ ವರ್ಗ, ಭ್ರಷ್ಟಾಾಚಾರ, ಕಾರ್ಮಿಕರು, ಪ್ರಾಾದೇಶಿಕ ಪ್ರೀತಿ, ಕಳ್ಳ ಮಾರುಕಟ್ಟೆೆ, ಸಾಮಾಜಿಕ ಸಾಮರಸ್ಯ ಇಲ್ಲದೇ ಇರುವುದು ಉದ್ದಿಮೆಗಳ ಸ್ಥಾಾಪನೆಗೆ ಅಡೆತಡೆಗಳಾಗಿವೆ!

ಉದ್ದಿಮೆಗಳನ್ನು ಪ್ರಾಾರಂಭಿಸಲು ಈ ದೇಶದಲ್ಲಿ ಅಡೆತಡೆಗಳಿಗೆ ಲೆಕ್ಕವೇ ಇಲ್ಲ. ದೇಶದ ಆಡಳಿತ ವ್ಯವಸ್ಥೆೆ ಉದ್ದಿಮೆಗಳಿಗೆ ಉತ್ತೇಜನ ನೀಡುವ ಬದಲಾಗಿ ವಿಳಂಬ ಪ್ರವೃತ್ತಿಿ ಅನುಸರಿಸುತ್ತದೆ. ಉದ್ದಿಮೆಗಳು ನಷ್ಟದಲ್ಲಿ ಇರುವಂತೆ ಮಾಡಿದೆ. ನಿಗದಿತ ಅವಧಿಯಲ್ಲಿ ಪ್ರಾಾರಂಭ ಆಗದಂತೆ ವ್ಯವಸ್ಥಿಿತವಾಗಿ ನೋಡಿಕೊಳ್ಳುತ್ತದೆೆ. ಹಾಗಾದರೆ ಉದ್ದಿಮೆಗಳು ಪ್ರಾಾರಂಭ ಆಗಲು ಇರುವ ಅಡೆತಡೆಗಳು ಯಾವವು? ದುಷ್ಟ ಅಧಿಕಾರಿ ವರ್ಗ, ಅತೀಯಾದ ಭ್ರಷ್ಟಾಾಚಾರ, ಕಾರ್ಮಿಕರ ಅತಿಯಾದ ಬಯಕೆಗಳು, ಪ್ರದೇಶದ ಮೇಲಿರುವ ಪ್ರೀತಿ, ಇಲಾಖೆ ಮಧ್ಯೆೆ ಹೊಂದಾಣಿಕೆ ಇಲ್ಲದೇ ಇರುವುದು, ಕಪ್ಪುು ಮಾರುಕಟ್ಟೆೆಗಳ ಹಾವಳಿ, ಅತಿಯಾದ ಉತ್ಪಾಾದನಾ ವೆಚ್ಚ, ಸಾಮಾಜಿಕ ಸಮಸ್ಯೆೆಗಳು, ದುಷ್ಟ ರಾಜಕೀಯ ವ್ಯವಸ್ಥೆೆ ಇವುಗಳೇ ಉದ್ಯಮ ಬೆಳೆಯಲು ಇರುವ ಅಡೆತಡೆಗಳು!

ಉದ್ದಿಮೆಗಳಿಗೆ ಬೇಕಾದ ವಿದ್ಯುತ್, ನೀರು, ಭೂಮಿ, ಲೈಸನ್‌ಸ್‌ ಇತ್ಯಾಾದಿ ಈ ಎಲ್ಲವುಗಳಲ್ಲಿ ರಾಜಕೀಯ ತಳುಕು ಹಾಕಿಕೊಂಡಿದೆ. ಜತೆಗೆ ಅಧಿಕಾರಿಗಳಿಗೆ ಲಂಚ ಕೊಡಬೇಕು. ದಾಖಲೆಗಳನ್ನು ಹೊಂದಿಸಲು ಯುವ ಉದ್ದಿಮೆದಾರರು ಪರದಾಡುತ್ತಿಿದ್ದಾಾರೆ. ಕೆಲವು ಉದ್ದಿಮೆದಾರರು ಲಂಚಕ್ಕೆೆ ಹೆದರಿ ಉದ್ದಿಮೆ ಪ್ರಾಾರಂಭಿಸಲು ಮನಸ್ಸು ಮಾಡುತ್ತಿಿಲ್ಲ. ಹತ್ತಾಾರು ಇಲಾಖೆಗಳು ನೂರಾರು ಅಧಿಕಾರಿಗಳು ಪ್ರತಿಯೊಬ್ಬರೂ ಹಣ ಗಳಿಸಲೇಬೇಕು ಎಂಬ ದುರಾಶೆ. ಅದು ಭ್ರಷ್ಟಾಾಚಾರದಿಂದಲೇ ಮಾಡಬೇಕೆನ್ನುವ ಹಂಬಲ. ಇದು ದೇಶದ ಉದ್ಯಮವನ್ನು ಬೆಳೆಯಲು ಬಿಡುತ್ತಿಿಲ್ಲ.

ದೇಶಕ್ಕೆೆ ಸ್ವಾಾತಂತ್ರ್ಯ ಸಿಕ್ಕು 71 ವರ್ಷಗಳಾಗಿವೆ, ಬಹುತೇಕರು ಸ್ವಂತ ಆದಾಯದ ಮೇಲೆ ಬದುಕುತ್ತಿಿಲ್ಲ. ಸರಕಾರದ ಸವಲತ್ತುಗಳಿಂದಲೇ ಅಂದರೆ ಅಕ್ಕಿಿ, ಸೈಕಲ್, ಇತರೆ ಸವಲತ್ತು ಪಡೆದು ಬದುಕುತ್ತಿಿದ್ದಾಾರೆ. ನಾಯಕರು ಬದಲಾಗದೇ ಈ ದೇಶ ಬದಲಾಗುವುದಿಲ್ಲ. ರಾಜಕೀಯ ವ್ಯವಸ್ಥೆೆ ಬಡತನ ನಿವಾರಣೆಯ ಬಗ್ಗೆೆ ಮಾತನಾಡುವುದಿಲ್ಲ ಜಾತಿಗಳ ಬಗ್ಗೆೆ ಮಾತನಾಡುತ್ತದೆ. ದೇಶದ ಬಗ್ಗೆೆ ಮಾತನಾಡುವುದಿಲ್ಲ ಧರ್ಮಗಳ ಬಗ್ಗೆೆ ಮಾತನಾಡುತ್ತದೆ. ಉದ್ದಿಮೆಗಳ ಬಗ್ಗೆೆ ಮಾತನಾಡುವುದಿಲ್ಲ ನಿರುದ್ಯೋೋಗದ ಬಗ್ಗೆೆ ಮಾತನಾಡುತ್ತದೆ. ಶಿಕ್ಷಣದ ಬಗ್ಗೆೆ ಮಾತನಾಡುವುದಿಲ್ಲ ಖಾನಾ, ಕಪಡಾ, ಮಕಾನ್ ಬಗ್ಗೆೆ ಮಾತನಾಡುತ್ತದೆ. ಹಲವು ರಾಜಕಾರಣಿಗಳು ಮತ್ತು ಅಧಿಕಾರಿಗಳು ಜನರ ಮೇಲೆ ಎಂದೂ ಪ್ರೀತಿ ತೋರಿಸುವುದಿಲ್ಲ. ಅವರು ತಮ್ಮ ಕುಟುಂಬ, ತಮ್ಮ ಜಾತಿಯನ್ನೇ ಬೆಂಬಲಿಸುತ್ತಿಿದ್ದಾಾರೆ. ಇದನ್ನೆೆಲ್ಲಾಾ ನಾವು ಪತ್ರಿಿಕೆಗಳಲ್ಲಿ ನೋಡುತ್ತಿಿದ್ದೇವೆ.

ಉದ್ದಿಮೆ ಸ್ಥಾಾಪನೆ ಸಮಯದಲ್ಲಿ ಉತ್ತೇಜನ ಇಲ್ಲ. ಉದ್ದಿಮೆ ಸ್ಥಾಾಪನೆಯಾದ ಮೇಲೆ ಅದು ಲಂಚ ಪಡೆದು ಸವಲತ್ತು ನೀಡುತ್ತಾಾರೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಸಾಲದ ಮೇಲಿನ ಬಡ್ಡಿಿ ದರ ವಿಪರೀತ ಇದೆ. ಉದ್ದಿಮ ಕಟ್ಟುವುದು ಲಾಭ ಮಾಡಲು ಅಲ್ಲ, ಬ್ಯಾಾಂಕ್‌ಗಳಿಗೆ ಬಡ್ಡಿಿ ಕಟ್ಟಲು ಮತ್ತು ಸರಕಾರಕ್ಕೆೆ ತೆರಿಗೆ ಕಟ್ಟಲು ಎನ್ನುವ ಹಾಗೆ ಇದೆ ನಮ್ಮ ನೀತಿ. ಉದ್ದಿಮೆ ಸ್ಥಾಾಪಿಸಿ ವಹಿವಾಟು ಆರಂಭಿಸಿದರೆ ಆ ವಹಿವಾಟಿನ ಶೇ.14ರಷ್ಟು ಬಡ್ಡಿಿ, ಶೇ.13ರಷ್ಟು ಸಾಲ ಮರುಪಾವತಿ ಶೇ18ರಷ್ಟು ಸರಕಾರಕ್ಕೆೆ ತೆರಿಗೆ ಅಂದರೆ ಶೇ.45ರಷ್ಟು ಹರಿದು ಹೋಗುತ್ತದೆ. ಈ ಪರಿಸ್ಥಿಿತಿ ಇಂದು ಇದೆ. ಜನರ ಕಷ್ಟ ಕೇಳುವವರ್ಯಾಾರು, ನೀವೇ ಹೇಳಿ. ಒಟ್ಟು ಆದಾಯದ ಬಹುಪಾಲು ಯಾರಿಗೆ ಸೇರತ್ತೆೆ? ಇನ್ನು ಉದ್ದಿಮೆದಾರರಿಗೆ, ಉದ್ಯೋೋಗಿಗಳಿಗೆ, ಕಚ್ಚಾಾ ವಸ್ತುಗಳಿಗೆ, ಯಂತ್ರಗಳ ರಿಪೇರಿಗೆ ಏನು ಕೊಡಬೇಕು. ಇನ್ನೊೊಂದು ವಿಚಿತ್ರ ಪರಿಸ್ಥಿಿತಿ ನಮ್ಮಲ್ಲಿದೆ. ವಹಿವಾಟು ಲೆಕ್ಕ ಹಾಕುವಾಗ ತೆರಿಗೆ ಹೊರತು ಪಡಿಸಿ ಲೆಕ್ಕ ಹಾಕುತ್ತಾಾರೆ. ಅಂದರೆ ಜನರಿಗೆ ಆ ವಸ್ತುವಿನ ಒಟ್ಟು ವೆಚ್ಚ ಗೊತ್ತಾಾಗುವುದೇ ಇಲ್ಲ. ಪೆಪ್ಸಿಿ ನೋಡಿ 2 ರು. ಖರ್ಚು ಇರುತ್ತದೆ, ಅದನ್ನು 12 ರು.ಗಳಿಗೆ ಮಾರುತ್ತಾಾರೆ. ಸಾರಾಯಿ ನೋಡಿ, 10 ರು. ಖರ್ಚು ಇರುತ್ತದೆ ಅದನ್ನು 50 ರು. ಗಳಿಗೆ ಮಾರುತ್ತಾಾರೆ. ಒಟ್ಟಿಿನಲ್ಲಿ ನಮ್ಮ ವ್ಯವಸ್ಥೆೆ ಹೇಗಿದೆ ನೋಡಿ, ಬಡವರು ಶ್ರೀಮಂತರಾಗಬಾರದು ಎನ್ನುವಂತಿದೆ, ಅಲ್ಲವೇ?

ನಮ್ಮ ದೇಶದ ನೀತಿ-ನಿಯಮಗಳು ಗೊಂದಲಗಳಿಂದ ಕೂಡಿವೆ. ಯಾವುದೇ ಇಲಾಖೆಗೆ ಹೋಗಿ ಯಾವುದೇ ಬ್ಯಾಾಂಕಿಗೆ ಹೋಗಿ ನಿನ್ನ ಹತ್ತಿಿರ ಸೆಕ್ಯೂರಿಟಿ ಎಷ್ಟು ಇದೆ ಎಂದು ಕೇಳುತ್ತಾಾರೆ. ನೀವು ಸಾಲ ಪಡೆಯಲು ಮುಂದಾದರೆ ಸಾಲಕ್ಕೆೆ ಶೇ.100 ರಷ್ಟು ಸೆಕ್ಯೂರಿಟಿ ಕೇಳುತ್ತಾಾರೆ. ಅದೇ ದೊಡ್ಡವರು ದೊಡ್ಡ ಉದ್ದಿಮೆ ಸ್ಥಾಾಪನೆ ಮಾಡಲು ಸಾಲ ಕೇಳಿದರೆ ಶೇ.10 ರಷ್ಟು ಮಾತ್ರ ಸೆಕ್ಯೂರಿಟಿ ಕೇಳುತ್ತಾಾರೆ. ಯಾರಿಗೆ ಅನುಕೂಲವಾಗಿದೆ ಈ ವ್ಯವಸ್ಥೆೆ? ನೀವೇ ಹೇಳಿ, ಈ ಸಿದ್ಧಾಾಂತ ಬಹುತೇಕ ಯೋಜನೆಗಳಲ್ಲಿದೆ. ಹೀಗಾಗಿ ನಮ್ಮ ದೇಶದಲ್ಲಿ ಉದ್ದಿಮೆಗಳ ಕ್ರಾಾಂತಿ ಆಗುತ್ತಿಿಲ್ಲ. ದೇಶದ ನಿಯಮಗಳು ದೊಡ್ಡವರನ್ನು ದೊಡ್ಡವರನ್ನಾಾಗಿ ಮಾಡಲು ಪೂರಕವಾಗಿವೆ. ಚಿಕ್ಕವರನ್ನು ಇನ್ನೂ ಚಿಕ್ಕವರನ್ನಾಾಗಿ ಮಾಡಲು ವ್ಯವಸ್ಥಿಿತವಾಗಿ ರೂಪುಗೊಂಡಿವೆ. ದೊಡ್ಡ ಉದ್ದಿಮೆದಾರರಿಗೆ ಕಡಿಮೆ ತೆರಿಗೆ, ಚಿಕ್ಕ ಉದ್ದಿಮೆದಾರರಿಗೆ ಹೆಚ್ಚು ತೆರಿಗೆ ಈ ಸಿದ್ಧಾಾಂತ ನಮ್ಮ ದೇಶದಲ್ಲಿದೆ. ಜನರನ್ನು ಶ್ರೀಮಂತರಾಗಲು ಮತ್ತು ಜನರನ್ನು ಬುದ್ಧಿಿವಂತರಾಗಲು ಈಗಿನ ಪ್ರಜಾಪ್ರಭುತ್ವ ನಾಯಕರು ಬಿಡುತ್ತಿಿಲ್ಲ. ಪ್ರಜಾಪ್ರಭುತ್ವದ ಸಿದ್ಧಾಾಂತ ಸರಿಯಾಗಿದೆ. ಅದರಲ್ಲಿರುವ ನಾಯಕರು ಸರಿಯಾಗಿಲ್ಲ!

ಪ್ರಜಾಪ್ರಭುತ್ವ ಸಿದ್ಧಾಾಂತ ಬಲಪಡಿಸುವ ಬದಲಾಗಿ ಬಂಡವಾಳ ಶಾಹಿ ವ್ಯವಸ್ಥೆೆಗೆ ಬೆಂಬಲ ನೀಡುತ್ತಿಿದ್ದಾಾರೆ. ರೈತರು ಸಾಲ ಮರುಪಾವತಿ ಮಾಡದಿದ್ದರೆ ಅವರ ಮನೆ ಮತ್ತು ಮಾನ ಎರಡೂ ಹರಾಜು ಹಾಕುತ್ತಾಾರೆ. ಮಾನಕ್ಕೆೆ ಹೆದರಿ ನಮ್ಮ ರೈತ ಆತ್ಮಹತ್ಯೆೆ ಮಾಡಿಕೊಳ್ಳುವ ಹಂತಕ್ಕೆೆ ಹೋಗುತ್ತಾಾನೆ. ಅದೇ ದೊಡ್ಡ ಉದ್ದಿಮೆದಾರರು ಸಾಲ ಮರುಪಾವತಿಸದಿದ್ದರೂ ಅವರನ್ನು ಕೇಳುವುದಿಲ್ಲ. ಕೆಲ ಬ್ಯಾಾಂಕ್ ಅಧಿಕಾರಿಗಳು ಭ್ರಷ್ಟ ಉದ್ದಿಮೆದಾರರೊಂದಿಗೆ ಶಾಮೀಲಾಗಿ ಬ್ಯಾಾಂಕುಗಳಿಗೆ ಮೋಸ ಮಾಡುತ್ತಿಿದ್ದಾಾರೆ. ಕೆಲವು ರಾಜಕಾರಣಿಗಳು ಮೋಸ ಮಾಡುವ ಬೃಹತ್ ಉದ್ದಿಮೆದಾರರ ಗುಲಾಮರಾಗಿದ್ದಾಾರೆ. ಬಡ ರೈತನಿಗೆ ಸಾಲ ನೀಡಲು ನೂರಾರು ಕಾಗದ ಕೇಳುತ್ತಾಾರೆ ಮತ್ತು ನೂರಾರು ನಿಯಮಗಳನ್ನು ಹೇಳುತ್ತಾಾರೆ. ಅದೇ ಮೋಸ ಮಾಡುವ ದೊಡ್ಡ ಉದ್ದಿಮೆದಾರ ಮುಂದೆ ಬಂದರೆ ಅವನಿಗೆ ಸಾವಿರ ಸಾವಿರ ಕೋಟಿ ಸಾಲ ನೀಡುತ್ತಾಾರೆ. ಜತೆಗೆ ತಾವೂ ಲಂಚ ಪಡೆದು ಶ್ರೀಮಂತರಾಗುತ್ತಾಾರೆ. ಒಂದನ್ನು ನೆನಪಿಡಿ. ಬಹುತೇಕ ರಾಜಕಾರಣಿಗಳು ಮತ್ತು ಅಧಿಕಾರಿಗಳು ಮತ್ತು ಬ್ಯಾಾಂಕ್ ಅಧಿಕಾರಿಗಳು ದೇಶದ ಬಗ್ಗೆೆ ಚಿಂತಿಸಿದೆ ತಮ್ಮ ಸ್ವಂತ ಸಂಪತ್ತಿಿನ ವೃದ್ಧಿಿಗೋಸ್ಕರನೇ ಚಿಂತಿಸುತ್ತಿಿದ್ದಾಾರೆ, ಇದು ಬದಲಾಗಬೇಕು. ಇದು ಬದಲಾದರೆ ದೇಶ ಬದಲಾಗುತ್ತದೆ. ಜಗತ್ತಿಿನಲ್ಲಿ ಎಲ್ಲ ಸಮಸ್ಯೆೆಗಳಿಗೆ ಹೋರಾಟದಿಂದಲೇ ಉತ್ತರ ಸಿಕ್ಕಿಿದೆ!

ಭ್ರಷ್ಟಾಾಚಾರ ವ್ಯವಸ್ಥೆೆ ಹೇಗಿದೆ ಎಂದರೆ, ಎಲ್ಲಾಾ ಸಂದರ್ಭದಲ್ಲಿಯೂ ಮತ್ತು ಎಲ್ಲಾಾ ಇಲಾಖೆಯಲ್ಲಿಯೂ ಭ್ರಷ್ಟಾಾಚಾರ ಬೆಸೆದುಕೊಂಡಿದೆ. ಇಲಾಖೆಗಳಲ್ಲಿ ಭ್ರಷ್ಟಾಾಚಾರ ಇಲ್ಲದೇ ಫೈಲ್‌ಗಳ ಮುಂದುವರಿಕೆ ಇಲ್ಲ. ಉದ್ದಿಮೆಗಳಿಗೆ ಇದು ಕಂಟಕ, ಅಧಿಕಾರಿಗಳಿಗೆ ಲಂಚ ಕೊಡಬೇಕು. ಆ ಲಂಚ ಕೊಡುವ ಮೊತ್ತ ಯೋಜನೆಯ ಗಾತ್ರದಲ್ಲಿ ಇರುವುದಿಲ್ಲ. ಇದು ಉದ್ದಿಮೆದಾರರನ್ನು ಕಪ್ಪುು ಹಣ ಸಂಗ್ರಹಿಸಲಿಕ್ಕೆೆ ಪ್ರೇರಣೆ ನೀಡುತ್ತದೆ. ಜನರೇ ಭ್ರಷ್ಟಾಾಚಾರದ ವಿರುದ್ಧ ದಂಗೆ ಎದ್ದರೆ ಮಾತ್ರ ಭ್ರಷ್ಟಾಾಚಾರ ಕಡಿಮೆ ಮಾಡಬಹುದು. ಹೆಚ್ಚು ಹೆಚ್ಚು ಭ್ರಷ್ಟಾಾಚಾರ ತನಿಖಾ ಸಂಸ್ಥೆೆಗಳನ್ನು ಸ್ಥಾಾಪಿಸುವುದರಿಂದ ಭ್ರಷ್ಟಾಾಚಾರ ಕಡಿಮೆ ಮಾಡಲು ಸಾಧ್ಯವಿಲ್ಲ. ಭ್ರಷ್ಟಾಾಚಾರ ಹೆಚ್ಚಾಾಗುತ್ತದೆ ವಿನಃ ಕಡಿಮೆ ಆಗುವುದಿಲ್ಲ. ಯಾವ ಸರಕಾರಗಳೂ ಭ್ರಷ್ಟಾಾಚಾರ ಕಡಿಮೆ ಮಾಡಲು ಪ್ರಯತ್ನಿಿಸುತ್ತಿಿಲ್ಲ. ಕಾರಣ ಸರಕಾರಗಳೇ ಭ್ರಷ್ಟಾಾಚಾರದ ಪ್ರಥಮ ಹುರಿಯಾಳು. ಕಾನೂನು ರೀತಿಯಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು. ಯೋಜನೆಗಳ ಜಾರಿಗೆ ವಿಳಂಬ ಪ್ರವೃತ್ತಿಿ ಅನುಸರಿಸಬಾರದು. ಯೋಜನೆ ವಿಳಂಬಗೊಂಡರೆ ಯೋಜನೆಯ ಗಾತ್ರ ಹೆಚ್ಚಾಾಗುತ್ತದೆ. ಇರುವ ಭ್ರಷ್ಟಾಾಚಾರ ವ್ಯವಸ್ಥೆೆಯನ್ನು ಒಪ್ಪಿಿಕೊಳ್ಳಲೇಬೇಕಾದ ಸಂದರ್ಭ ಸೃಷ್ಟಿಿಯಾಗುತ್ತದೆ. ಅಧಿಕಾರಿಗಳಿಗೆ ಹಣ ಕೊಡಬಾರದೆಂದರೆ ರಾಜಕಾರಣಿಗಳ ಬೆಂಬಲ ಬೇಕು. ಇಲ್ಲವೇ ಅಧಿಕಾರಿಗಳು ಕೇಳಿದಷ್ಟು ಲಂಚ ನೀಡಿ ಯೋಜನೆಗೆ ಅನುಮತಿ ಪಡೆಯಬೇಕು. ಒಂದು ಸಿಂಪಲ್ ಆರ್‌ಟಿಸಿ ಪಡೆಯಬೇಕಾದರೂ ಲಂಚ ನೀಡಬೇಕು. ಈ ವ್ಯವಸ್ಥೆೆ ನಮ್ಮಲ್ಲಿ ಇದೆ. ಉದ್ದಿಮೆಗಳಿಗೆ ಪೂರಕವಾಗುವಂತೆ ಆಡಳಿತದಲ್ಲಿ ಸುಧಾರಣೆಗಳು ಆಗುತ್ತಿಿಲ್ಲ. ಹಣಕಾಸು ಸಂಸ್ಥೆೆಗಳಲ್ಲಿ ಹಣ ಬಿಡುಗಡೆ ಸುಲಭವಿಲ್ಲ. ಅಲ್ಲಿಯೂ ನೂರಾರು ನಿಯಮಗಳು, ಅವು ಉದ್ದಿಮೆಗಳ ಬೆಳವಣಿಗೆಯನ್ನು ತಡೆಯುತ್ತವೆ. ಕೆಲವು ಕಾಯಿದೆಗಳಿಂದ ಸ್ವಲ್ಪ ಪ್ರಮಾಣದಲ್ಲಿ ಭ್ರಷ್ಟಾಾಚಾರ ಕಡಿಮೆಯಾಗಿದೆ. ಹರತಾಳ ಆರ್‌ಟಿಐ ಕಾಯಿದೆ, ಮಾಧ್ಯಮದ ಪಾತ್ರ ಇವುಗಳಿಂದ ಅಧಿಕಾರಿಗಳು ಪಡೆಯುವ ಲಂಚದ ಪ್ರಮಾಣ ಕಡಿಮೆ ಆಗಿದೆ, ಇನ್ನೂ ಆಗಬೇಕಿದೆ.

ಕಾರ್ಮಿಕ ವರ್ಗದ ಪಾತ್ರ ಹೇಗಿದೆ ಎಂದರೆ, ಉದ್ದಿಮೆ ಸ್ಥಾಾಪಿಸಲು ಪರಿಪೂರ್ಣತೆ ಇಲ್ಲದ ಕಾರ್ಮಿಕ ವರ್ಗ ಕೂಡ ಒಂದು ಸಮಸ್ಯೆೆ. ಪರಿಪೂರ್ಣತೆ ಇಲ್ಲದ ಕಾರ್ಮಿಕರ ಸಂಖ್ಯೆೆ ಜಾಸ್ತಿಿಯೇ ಇದೆ. ಪಾಶ್ಚಿಿಮಾತ್ಯ ರಾಷ್ಟ್ರಗಳು ಕೈಗಾರಿಕೆಗಳ ಸ್ಥಾಾಪನೆಗೆ ಭಾರತದ ಬದಲಾಗಿ ಥೈಲಾಂಡ್, ಮೆಕ್ಸಿಿಕೋ, ಚೀನಾ ದೇಶಗಳನ್ನು ಆಯ್ಕೆೆ ಮಾಡಿಕೊಳ್ಳುತ್ತಿಿವೆ. ದಶಕಗಳ ಹಿಂದೆ ವಿಜೃಂಭಿಸುತ್ತಿಿದ್ದ ಹತ್ತಿಿ ಗಿರಣಿಗಳು ಕಾರ್ಮಿಕರ ಹೋರಾಟದಿಂದ ಮುಚ್ಚಲ್ಪಟ್ಟವು. ಲಕ್ಷಾಂತರ ಜನ ಬೀದಿಗೆ ಬಂದರು. ನರಳಿ ನರಳಿ ಸಾಯಬೇಕಾಯಿತು. ಕಡಿಮೆ ಕೆಲಸ ಹೆಚ್ಚು ಸಂಬಳ ಇಂತಹ ಮನಸ್ಸುಳ್ಳ ಕಾರ್ಮಿಕ ವರ್ಗ ನಮ್ಮ ದೇಶದ ಉದ್ದಿಮೆದಾರರನ್ನು ಕಾಡುತ್ತಿಿದೆ. ಎಲ್ಲದಕ್ಕೂ ಪರಿಹಾರವೆಂದರೆ ಶ್ರೇಷ್ಟ ಮಟ್ಟದ ಶಿಕ್ಷಣ ವ್ಯವಸ್ಥೆೆ, ಅದು ಜಾರಿಯಾಗಬೇಕು.

ನಮ್ಮ ದೇಶ ಜಾತ್ಯತೀತ ದೇಶ ಆದರೂ ಜಾತಿ-ಧರ್ಮಗಳ ಆಚರಣೆಗೆ ಸಂಪೂರ್ಣ ಸ್ವಾಾತಂತ್ರ್ಯವಿದೆ. ಹೀಗಾಗಿ ಕ್ರಿಿಶ್ಚಿಿಯನ್ನರು, ಮುಸಲ್ಮಾಾನರು, ಹಿಂದೂಗಳು, ಬೌದ್ಧರು, ಸಿಖ್‌ರು, ಜೈನರು ತಮ್ಮ ತಮ್ಮ ಹಬ್ಬಗಳನ್ನು ಆಚರಿಸಲು ನಾನಾ ತಿಂಗಳು ನಾನಾ ದಿನಗಳಲ್ಲಿ ರಜೆ ಪಡೆಯುತ್ತಾಾರೆ. ಇದರಿಂದ ದೇಶದ ಉದ್ದಿಮೆಗಳಿಗೆ ಗರಿಷ್ಠ ಮಟ್ಟದಲ್ಲಿ ಉತ್ಪಾಾದನೆ ಮಾಡಲು ಸಾಧ್ಯವಾಗುತ್ತಿಿಲ್ಲ. ಹೆಚ್ಚಾಾಗಿ ರಜೆಗಳಿಗೆ ತೆರಳುವ ವ್ಯವಸ್ಥೆೆ ವರ್ಷ ಪೂರ್ತಿ ನಡೆಯುತ್ತದೆ. ಉದ್ದಿಮೆಗಳ ಬೆಳವಣಿಗೆಗೆ ಇದು ಕಂಟಕ! ಕರ್ತವ್ಯ ನಿರ್ವಹಿಸುವ ದಿನಗಳು ಕಡಿಮೆಯಾಗುತ್ತವೆ. ಉದ್ಯಮ ಸಾಮರ್ಥ್ಯದ ಉಪಯೋಗ ಆಗುವುದಿಲ್ಲ. ಜತೆಗೆ ಬಂದ್, ಹರತಾಳ್, ಗಲಾಟೆ, ಅತೀವೃಷ್ಟಿಿ, ಅನಾವೃಷ್ಟಿಿ, ಭೂಕಂಪ ಇವು ಕೂಡಾ ಉದ್ದಿಮೆದಾರರನ್ನು ಕಾಡುತ್ತಿಿವೆ. ನಮ್ಮ ದೇಶದಲ್ಲಿ ಹೆಚ್ಚಾಾಗಿ ಪುರುಷರು ಮಾತ್ರ ದುಡಿಯುತ್ತಾಾರೆ, ಇದು ಮುಖ್ಯ ಸಮಸ್ಯೆೆ. ಕಡಿಮೆ ಸಂಬಳ ಆದರೆ ಅಡೆತಡೆಗಳೇ ಜಾಸ್ತಿಿ. ಎಲ್ಲರೂ ಅಧಿಕಾರಿಗಳಾಗಲು ಹಾತೊರೆಯುತ್ತಾಾರೆ ಹೀಗಾಗಿ ಫಿಟರ್, ವೆಲ್ಡರ್, ಡ್ರಾಾಪ್‌ಟ್‌‌ಮನ್, ಖಲಾಸಿ, ಮೆಕ್ಯಾಾನಿಕ್ ಹುದ್ದೆೆಗಳಿಗೆ ಅಭ್ಯರ್ಥಿಗಳ ಕೊರತೆ ಇದೆ. ಪರಿಹಾರಕ್ಕಾಾಗಿ ನೂತನ ವ್ಯವಸ್ಥೆೆ ಜಾರಿಗೆ ಬರಬೇಕು.

ಪ್ರದೇಶದ ಮೇಲಿನ ಪ್ರೀತಿ; ಸ್ಥಳೀಯ ಜನರ ಪ್ರದೇಶದ ಪ್ರೀತಿ ಅವರನ್ನು ಶ್ರೀಮಂತರನ್ನಾಾಗಿ ರೂಪಿಸುತ್ತಿಿಲ್ಲ, ಬೇರೆಡೆ ದುಡಿಯಲು ಹೋಗುತ್ತಿಿಲ್ಲ. ಜತೆಗೆ ಸ್ಥಳಿಯ ಆಚರಣೆ ಮತ್ತು ನಂಬಿಕೆಗಳಿಂದ ಹಲವು ಉದ್ದಿಮೆಗಳು ಅವನತಿಯ ದಾರಿ ಹಿಡಿದಿವೆ. ಈ ಪ್ರದೇಶದಲ್ಲಿ ಇಂತಹ ಉದ್ಯಮಗಳು ಇರಬಾರದು ಎನ್ನುವ ವ್ಯವಸ್ಥೆೆ ಇದೆ. ಆಹಾರ ಉತ್ಪನ್ನ ವಿಷಯಗಳಲ್ಲಿ ಇಂತಹ ನಂಬಿಕೆಗಳಿವೆ, ವಿಶೇಷವಾಗಿ ಭಾರತದಲ್ಲಿ ಕೆಲವು ಉದ್ಯಮಿಗಳಿಗೆ ಅವಕಾಶ ಕೊಡುವುದಿಲ್ಲ. ಪವಿತ್ರತೆ ಅತೀ ಮುಖ್ಯವಾಗಿರುತ್ತದೆ. ಸ್ಥಳಿಯ ಜನರ ಇನ್ನೊೊಂದು ಮುಖ್ಯ ಸಮಸ್ಯೆೆ ಏನೆಂದರೆ ಅವರು ಸ್ಥಾಾಪಿಸಿದ ಪ್ರತಿಯೊಂದು ವ್ಯವಹಾರದಲ್ಲಿ ಲಾಭವನ್ನೇ ಬಯಸುತ್ತಾಾರೆ. ಒಬ್ಬರಿಗೆ ಸಮಸ್ಯೆೆ ಆದರೆ ಯಾರೂ ಉದ್ದಿಮೆ ಸ್ಥಾಾಪಿಸಲು ಮುಂದೆ ಬರುವುದಿಲ್ಲ. ಕರ್ನಾಟಕದಲ್ಲಿ ಬಹುತೇಕ ಉದ್ಯಮಗಳು ಬೆಂಗಳೂರಿನಲ್ಲಿಯೇ ಸ್ಥಾಾಪನೆಯಾಗುತ್ತಿಿವೆ. ಉತ್ತರ ಕರ್ನಾಟಕಕ್ಕೆೆ ಹೆಚ್ಚಾಾಗಿ ಆಸಕ್ತಿಿ ತೋರಿಸುತ್ತಿಿಲ್ಲ, ಇಲಾಖೆಗಳ ಸ್ಥಳಾಂತರ ಆಗುತ್ತಿಿಲ್ಲ. ಕಾರಣ ಸರಕಾರದ ನೀತಿಗಳು ಮತ್ತು ಅಗತ್ಯ ಮಾರುಕಟ್ಟೆೆ, ಎಲ್ಲಿ ಕಚ್ಚಾಾ ಸಾಮಗ್ರಿಿಗಳು ಲಭ್ಯವಿದೆಯೋ ಅಲ್ಲಿ ಕೈಗಾರಿಕೆಗಳ ಸ್ಥಾಾಪನೆ ಆಗಬೇಕು, ಅದು ಆಗುತ್ತಿಿಲ್ಲ, ವ್ಯವಸ್ಥೆೆ ಬದಲಾಗಬೇಕು.

* ಖೊಟ್ಟಿಿ ಮತ್ತು ಕಳ್ಳ ವಸ್ತುಗಳ ಮಾರಾಟ;
ಕೆಲವು ವಸ್ತುಗಳ ಮಾರಾಟ ಆಗುತ್ತವೆ, ಆ ವಸ್ತುಗಳು ಮೂಲ ಉತ್ಪಾಾದಕರಿಂದ ಉತ್ಪಾಾದನೆ ಆಗದೇ ಮೂಲ ಉತ್ಪಾಾದಕರ ಹೆಸರಿನಲ್ಲಿ ಬೇರೆಯವರು ತಯಾರು ಮಾಡಿ ಮಾರಾಟ ಮಾಡುತ್ತಾಾರೆ. ಹೀಗಾಗಿ ಖೊಟ್ಟಿಿ ಮತ್ತು ಕಳ್ಳ ವಸ್ತುಗಳ ಹಾವಳಿ ಉದ್ಯಮಗಳ ಅವನತಿಗೆ ಕಾರಣವಾಗುತ್ತದೆ. ವಿದೇಶಗಳಿಂದ ತೆರಿಗೆ ಪಾವತಿಸದೇ ಕಳ್ಳ ವಸ್ತುಗಳನ್ನು ಅನ್ಯ ಮಾರ್ಗದಿಂದ ಖರೀದಿ ಮಾಡಿ ತಮ್ಮದೇ ಆದ ಜಾಲದಿಂದ ಮಾರಾಟ ಮಾಡುತ್ತಾಾರೆ. ದೇಶಿಯ ಉತ್ಪನ್ನಗಳ ಉತ್ಪಾಾದನಾ ವೆಚ್ಚ ಹೆಚ್ಚಾಾಗಿ ಸ್ಪರ್ಧೆ ನೀಡುವುದು ಕಷ್ಟಕರವಾಗುತ್ತದೆ. ದೇಶಿಯ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗುತ್ತದೆ. ತೆರಿಗೆ ಕಟ್ಟಿಿ ವಸ್ತುಗಳನ್ನು ಕೊಳ್ಳುವುದರ ಬದಲಾಗಿ ತೆರಿಗೆ ವಿನಾಯತಿ ಸಿಗುವ ವಸ್ತುಗಳನ್ನು ಖರೀದಿ ಮಾಡಲು ಜನ ಆಸಕ್ತಿಿ ತೋರುತ್ತಾಾರೆ. ಇದರಿಂದ ದೇಶಿಯ ಉತ್ಪಾಾದಕರು ತೆರಿಗೆ ಸಂಗ್ರಹ ಮಾಡಿ ವಸ್ತುಗಳನ್ನು ಮಾರಾಟ ಮಾಡುವುದು ಕಷ್ಟಕರವಾಗುತ್ತದೆ. ಮಾರಾಟ ಕಡಿಮೆಯಾಗಿ ಸಾಮರ್ಥ್ಯದಷ್ಟು ಉತ್ಪಾಾದನೆಯಾಗದೆ ಸಾಲದ ಸುಳಿಗೆ ಸಿಗುವ ಅಪಾಯವಿರುತ್ತದೆ. ಮುಂದೆ ಉದ್ಯಮಗಳು ಮುಚ್ಚಿಿ ಜನರು ಉದ್ಯೋೋಗ ಕಳೆದುಕೊಳ್ಳುತ್ತಾಾರೆ. ದೇಶದ ಆರ್ಥಿಕತೆಗೆ ಪೆಟ್ಟು ಬೀಳುತ್ತದೆ. ಕಠಿಣ ಕಾನೂನುಗಳನ್ನು ಜಾರಿಗೆ ತಂದು ಖೊಟ್ಟಿಿ ಮತ್ತು ಕಳ್ಳ ವಸ್ತುಗಳ ಮಾರಾಟಗಾರರನ್ನು ಕಂಡು ಹಿಡಿದು ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕಾದ ಸರಕಾರಗಳು ಏನೂ ಮಾಡದೆ ಸಹಕಾರ ನೀಡುತ್ತಿಿವೆ. ಇದು ಆಡಳಿತದ ವೈಫಲ್ಯ.

ಉದ್ದಿಮೆಗಳನ್ನು ಹೆಚ್ಚು ಹೆಚ್ಚು ಸೃಷ್ಟಿಿ ಮಾಡಲು ಸರಕಾರಗಳು ಮುಂದಾಗಬೇಕು. ಜನರಿಗೆ ಉದ್ದಿಮೆ ಸ್ಥಾಾಪಿಸಲು ಹೆಚ್ಚು ಹೆಚ್ಚು ತರಬೇತಿ ನೀಡುವ ವ್ಯವಸ್ಥೆೆ ಜಾರಿಗೆ ಬರಬೇಕು. ಅದು ದೇಶಾದ್ಯಂತ ವಿಸ್ತರಣೆಯಾಗಬೇಕು. ನಮ್ಮ ಯುವಕರಲ್ಲಿ ಧೈರ್ಯ ಇಲ್ಲ. ಅವರಿಗೆ ಧೈರ್ಯ, ಸವಲತ್ತು, ಬ್ಯಾಾಂಕುಗಳಿಂದ ಹಣಕಾಸಿನ ವ್ಯವಸ್ಥೆೆ ಒದಗಿಸಬೇಕು. ನಿಬಂಧನೆಗಳನ್ನು ಕಡಿಮೆಮಾಡಿ ಪ್ರೋೋತ್ಸಾಾಹಿಸಿದರೆ ನಿರುದ್ಯೋೋಗ ಸಮಸ್ಯೆೆ ನಿವಾರಿಸಬಹುದು. ಹೊಸ ಹೊಸ ಅನ್ವೇಷಣೆಗಳಿಗೆ ದಾರಿ ಮಾಡಿಕೊಡುವಂತಹ ಯೋಜನೆಗಳಿಗೆ ಪ್ರೋೋತ್ಸಾಾಹ ನೀಡಬೇಕು. ನೀರು, ಭೂಮಿ, ಅನುಮತಿ, ಸಾಲ ಸುಲಭವಾಗಿ ಸಿಗುವಂತೆ ನಿಯಮ ರೂಪಿಸಬೇಕು. ಹಳೆಯ ಕಾನೂನುಗಳು ರದ್ದಾಾಗಿ ಹೊಸ ಕಾನೂನುಗಳು ಜಾರಿಗೆ ಬರಬೇಕು. ನಮ್ಮ ಕಾನೂನು ವ್ಯವಸ್ಥೆೆ ಅನಾದಿ ಕಾಲದ ನಿಯಮಗಳೊಂದಿಗೆ ತಳಕು ಹಾಕಿಕೊಂಡಿದೆ. ಗೊಂದಲಗಳ ಗೂಡಾಗಿದೆ. ಅವುಗಳ ನಿವಾರಣೆ ಆಗಬೇಕು. ಯೋಜನೆ ವಿಳಂಬವಾದರೆ ಯೋಜನಾ ವೆಚ್ಚ ಅಧಿಕವಾಗುತ್ತದೆ. ಅತೀ ಕಡಿಮೆ ಅವಧಿಯಲ್ಲಿ ಯೋಜನೆಗಳನ್ನು ಪ್ರಾಾರಂಭ ಆಗುವಂತೆ ನೋಡಿಕೊಳ್ಳಬೇಕು. ಬಡ್ಡಿಿ ಪ್ರಮಾಣ ಕಡಿಮೆಯಾಗಿ, ನಿರ್ವಾಹಕ ವೆಚ್ಚ ಕಡಿಮೆಯಾಗಿ ಸುಗಮ ಆಡಳಿತಕ್ಕೆೆ ದಾರಿ ಸಿಗುತ್ತದೆ. ಆಡಳಿತ ವ್ಯವಸ್ಥೆೆ ಸರಿಯಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ. ಅಮೆರಿಕ, ಚೀನಾ ಅನುಸರಿಸಿದ ಮಾದರಿಗಳನ್ನು ನಾವು ಅನುಸರಿಸಬೇಕಾಗಿದೆ. ಇದೆಲ್ಲಾಾ ಆಗಬೇಕಾದರೆ, ನಾಯಕರ ಮನಸ್ಸು ಬದಲಾಗಬೇಕು.

ವೋಟಿಗಾಗಿ ನೋಟು ಜಾರಿಯಲ್ಲಿದೆ, ವೋಟಿಗಾಗಿ ನೋಟು ವ್ಯವಸ್ಥೆೆಯಡಿಯಲ್ಲಿ ಸರಕಾರಗಳು ರಚನೆ ಅದರೆ ನಮ್ಮ ದೇಶದ ಜನ ಶ್ರೀಮಂತರಾಗುವುದಿಲ್ಲ. ಭಿಕ್ಷೆ ಬೇಡಿ ಬದುಕುವ ವ್ಯವಸ್ಥೆೆ ಮುಂದುವರಿಯುತ್ತದೆ. ಎಲ್ಲ ಸಮಸ್ಯೆೆಗಳಿಗೆ ಹೋರಾಟದಿಂದಲೇ ಉತ್ತರ ಸಿಕ್ಕಿಿದೆ. ಹೋರಾಟದ ಮನೋಭಾವವನ್ನು ಬೆಳೆಸಿಕೊಳ್ಳಿಿ, ಫೇಸ್‌ಬುಕ್, ವಾಟ್ಸಪ್ ನಿರತರಾಗಬೇಡಿ. ಬಡತನವನ್ನು ನಿವಾರಿಸಲು ಎಲ್ಲರೂ ಸೇರಿ ಹೋರಾಟ ಮಾಡಬೇಕು. ಇದರಿಂದ ಅಡೆತಡೆಗಳು ಕಡಿಮೆಯಾಗುವ ಸಾಧ್ಯತೆ ಇದೆ. ಅಡೆತಡೆಗಳು ಕಡಿಮೆಯಾದರೆ ಭಾರತೀಯರು ಶ್ರೀಮಂತರಾಗುತ್ತಾಾರೆ!

Leave a Reply

Your email address will not be published. Required fields are marked *

error: Content is protected !!