About Us Advertise with us Be a Reporter E-Paper

ಗೆಜೆಟಿಯರ್

ಅವಂತುರಾ ಚಾಪರ್ಸ್ ಬೈಕ್ ಶೋರೂಮ್ ಪ್ರಾರಂಭ

ಉನ್ನತ ದರ್ಜೆಯ ಮೋಟರ್ ಸೈಕಲ್ ಸಂಸ್ಥೆ ಯಾದ ಅವಂತುರಾ ಚಾಪರ್ಸ್ ತನ್ನ ಮೊದಲ ಬೈಕ್  ಅನ್ನು ನಗರದ ರೆಸಿಡೆನ್ಸಿ ರಸ್ತೆಯಲ್ಲಿ ಪ್ರಾರಂಭಿಸಿದೆ.

ಈ ಶೋರೂಮ್‌ನಲ್ಲಿ ಅವಂತುರಾ ಚಾಪರ್ಸ್‌ನ ಮೊದಲ ಮಾಡೆಲ್‌ಗಳಾದ- 2,000 ಸಿಸಿಯ ರುದ್ರ ಮತ್ತು ಪ್ರವೇಗ ಎಂಬ ಮೋಟಾರ್ ಸೈಕಲ್‌ಗಳು ಲಭ್ಯ ವಿದ್ದು, ಇದರ ವಿಶೇಷತೆ ಏನೆಂದರೆ ಗ್ರಾಹಕರ ಅಭಿರು ಚಿಗೆ ತಕ್ಕಂತೆ ಬೈಕ್‌ಗಳನ್ನು ಸಿದ್ಧಪಡಿಸಿ ನೀಡುವುದು.

ಗ್ರಾಹರಿಗೆ ಬೇಕಾಗುವ ವಿವಿಧ ಬಣ್ಣಗಳ ಹಾಗೂ ಎಲ್ಲಾ ಡಿಸೈನ್‌ಗಳ ಬೈಕ್‌ಗಳನ್ನು ಸಿದ್ಧಪಡಿಸಿ ನೀಡಲಾಗುತ್ತದೆ. ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ನಿರ್ಮಾಣವಾಗಿರುವ ಈ ಕಂಪೆನಿಯು ಮುಂಬೈಯಲ್ಲಿ  ತಯಾರಿಕಾ ಘಟಕವನ್ನು ಹೊಂದಿದೆ.

ಅವಂತುರಾ ಚಾಪರ್ಸ್ -ಸ್ಟ್ರೀಟ್ ಲೀಗಲ್

ಚಾಪರ್ಸ್‌ನ ಭಾರತದ ಮೊದಲ ಬ್ರಾಂಡ್ ಇತ್ತೀಚೆಗೆ ತನ್ನ ಮೊದಲ ಮಾಡೆಲ್‌ಗಾಗಿ ಎಆರ್‌ಎಐ ಪ್ರಮಾಣೀಕರಣವನ್ನು ಸ್ವೀಕರಿಸಿದೆ. ಬೆಂಗಳೂರಿನಲ್ಲಿ ತನ್ನ ಮೊದಲ ಶೋರೂಮ್ ಅನ್ನು ಡೀಲರ್ ಪಾರ್ಟನರ್ ದಿ ಡ್ರೈವನ್ ಕೆಫೆ ಜತೆ ಪ್ರಾರಂಭಿಸಿದೆ. ಅವಂತುರಾ ಚಾಪರ್ಸ್ ವಿತರಣಾ ಜಾಲವನ್ನು ಮುಂದಿನ ದಿನಗಳಲ್ಲಿ ದೆಹಲಿ ಎನ್ಸಿಆರ್ ಮತ್ತು ಹೈದರಾಬಾದ್‌ಗೆ ವಿಸ್ತರಿಸುವ ಯೋಜನೆಯನ್ನು ಹೊಂದಿದೆ.

ಉತ್ತಮವಾದ ಮೆಗಾ ಲಾಂಚ್‌ನ ನಂತರ, ನಾಮಿನೇಟ್ ಮಾಡಲಾದ  ಪ್ರತಿಷ್ಠಿತ ಆಟೋಮೊಬೈಲ್ ಅವಾಡ್‌ಸ್ ಶೋಗಳಲ್ಲಿ ಮೆಚ್ಚುಗೆಗಳಿಸಿದ್ದು, ರುದ್ರ ಮತ್ತು ಪ್ರವೇಗಾ – ಮಾಸ್ಟರ್ ಪೀಸ್‌ಗಳು ಅವಂತುರಾ ಚಾಪರ್ಸ್ ಮೂಲಕ ಇನ್ನಷ್ಟು ಕಲಾತ್ಮಕ ಮೆರುಗು ಪಡೆದಿವೆ. ಗ್ರಾಹಕರು ಅವಂತುರಾ ಚಾಪರ್ಸ್ ಬೈಕ್‌ಗಳನ್ನು ಪರೀಕ್ಷಿಸಲು ಮತ್ತು ಖರೀದಿಸಲು ರೆಸಿಡೆನ್ಸಿ ರಸ್ತೆಯಲ್ಲಿರುವ ಅವಂತುರಾ ಚಾಪರ್ಸ್ ಶೋ ರೂಮ್ ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

ಈ ಸಂದರ್ಭದಲ್ಲಿ ಅವಂತುರಾ ಚಾಪರ್ಸ್ ಸಿಇಒ ಗೌರವ್ ಎ. ಅಗರ್ವಾಲ್ ಮಾತನಾಡಿ, ಮೇಕ್ ಇನ್ ಇಂಡಿಯಾ ಕಲ್ಪನೆಯಡಿ ಇಡೀ  ಮೊದಲ ಅವಂತುರಾ ಚಾಪರ್ಸ್ ಷೋರೂಮ್ ಅನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲಾಗಿದೆ. ಶೀಘ್ರದಲ್ಲೇ ಇತರ ಪ್ರಮುಖ ಮಾರುಕಟ್ಟೆಗಳಿಗೂ ಪರಿಚಯಿಸುತ್ತೇವೆ. ಭಾರತದಿಂದಲೆ ಜಾಗತಿಕ ಮಟ್ಟದಲ್ಲಿ ಪ್ರಭಾವವನ್ನು ಸೃಷ್ಟಿಸುವ ನಮ್ಮ ಮಹತ್ವಾಕಾಂಕ್ಷೆಯು ಆರಂಭವಾಗಿದೆ. ಭಾರತದ ವಿರಾಮ-ಸವಾರಿ ಸಂಸ್ಕೃತಿ ಮತ್ತು ಅದರ ಪ್ರವರ್ತಕರ ಅಭಿರುಚಿಯ ಸಂಖ್ಯೆ ಬೆಳೆಯುತ್ತಿರುವ ಮೂಲಕ ಮಾರುಕಟ್ಟೆಯು ಅವಂತುರಾ ಚಾಪರ್ಸ್‌ಗೆ ಸಿದ್ಧವಾಗಿದೆ ಎಂಬ ವಿಶ್ವಾಸವನ್ನು  ನಮಗೆ ನೀಡುತ್ತಿದೆ ಎಂದರು.

Tags

Related Articles

Leave a Reply

Your email address will not be published. Required fields are marked *

Language
Close