About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಆರೋಗ್ಯ ಕ್ಷೇತ್ರದಲ್ಲಿ ನೂತನ ಕ್ರಾಂತಿಗೆ ಚಾಲನೆ ನೀಡಿದ ಪ್ರಧಾನಿ

ದೆಹಲಿ: ಜಗತ್ತಿನ ಅತಿ ದೊಡ್ಡ ಆರೋಗ್ಯ ರಕ್ಷಾ ಯೋಜನೆ ಆಯುಷ್ಮಾನ್‌ ಭಾರತಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ.

ರಾಂಚಿಯ ಪ್ರಭಾತ್‌ ತಾರಾ ಮೈದಾನದಲ್ಲಿ “ಆಯುಷ್ಮಾನ್‌ ಭಾರತ್‌-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ”ಗೆ ಅಭೂತಪೂರ್ವ ಚಾಲನೆ ನೀಡಲಾಗಿದೆ.

ಈ ಸಂದರ್ಭ ಮಾತನಾಡಿದ ಪ್ರಧಾನಿ, “ಕೆಲವರು ಈ ಯೋಜನೆಯನ್ನು ಮೋದಿಕೇರ್‌ ಎಂದರೆ ಕೆಲವರು ಬಡವರ ಯೋಜನೆ ಎನ್ನುತ್ತಾರೆ. ಖಂಡಿತವಾಗಿಯೂ ಇದು ಬಡವರಿಗೆ ನೆರವು ನೀಡಲು ತಂದಿರುವ ಯೋಜನೆ. ಇದು ಜಗತ್ತಿನ ಅತಿ ದೊಡ್ಡ ಸರಕಾರೀ ಪ್ರಯೋಜಿತ ಆರೋಗ್ಯ ಖಾತ್ರಿ ಯೋಜನೆ” ಎಂದು ಮೋದಿ ಹೇಳಿದ್ದಾರೆ.

ಸೆಪ್ಟೆಂಬರ್‌ 25ರಂದು ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯರ ಜನ್ಮದಿನದಂದು ಯೋಜನೆ ಚಾಲನೆಗೆ ಬರಲಿದೆ. ಕಳೆದ ತಿಂಗಳ ಸ್ವತಂತ್ರ ದಿನಾಚರಣೆಯಂದು ಕೆಂಪು ಕೋಟೆ ಆವರಣದಲ್ಲಿ ಭಾಷಣ ಮಾಡುವ ಸಂದರ್ಭ ಪ್ರಧಾನಿ ಮಂತ್ರಿ ಈ ಯೋಜನೆಯನ್ನು ಘೊಷಣೆ ಮಾಡಿದ್ದರು. ಯೋಜನೆಯನ್ನು ದೇಶದ 445 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಆರಂಭಿಸಲಾಗಿದೆ. ಯೋಜನೆ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಡಿಜಿಟಲ್‌ ಅಭಿಯಾನವನ್ನು ದೇಶದೆಲ್ಲೆಡೆ ಹಮ್ಮಿಕೊಳ್ಳಲಾಗಿದೆ.

 

Tags

Related Articles

Leave a Reply

Your email address will not be published. Required fields are marked *

Language
Close