About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಹುಬ್ಬಳ್ಳಿಯಲ್ಲಿ ಇರುಮುಡಿ ಇಳಿಸಿದ ಅಯ್ಯಪ್ಪ ಭಕ್ತರು

ಹುಬ್ಬಳ್ಳಿ: ಕೇರಳದಲ್ಲಿ ಪ್ರವಾಹ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ತಿಂಗಳ ಪೂಜೆ ಹಾಗೂ ಶಬರಿಮಲೈಗೆ ತೆರಳಬೇಕಾಗಿದ್ದ ವಿವಿಧ ಜಿಲ್ಲೆಗಳಿಂದ ಬಂದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ವ್ರತ ಪೂರ್ಣ ಮಾಡಿದ ಇರುಮುಡಿ ಗಂಟನ್ನು ಇಳಿಸಿ, ವಿಶೇಷ ಪೂಜೆ ಹಾಗೂ ದರ್ಶನವನ್ನು ಹುಬ್ಬಳ್ಳಿಯ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಪಡೆಯುತ್ತಿದ್ದಾರೆ.

ನೆರೆ ಹಾವಳಿ ಹೆಚ್ಚಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಆಗಸ್‌ಟ್ 16ರಿಂದ 21ರವರೆಗೆ ನಡೆಯಲಿರುವ ತಿಂಗಳ ಪೂಜೆಗೆ ಸೇವೇ ಸಲ್ಲಿಸಲು ತೆರಳಬೇಕಿದ್ದ ಕರ್ನಾಟಕದ ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದ ಮೂರ್ನಾಲ್ಕು ದಿನದಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಂತ ಸುಮಾರು 140ಕ್ಕೂ ಅಧಿಕ ಅಯ್ಯಪ್ಪ ಮಾಲಾಧಾರಿಗಳು ನಗರದ ಅಯ್ಯಪ್ಪ ದೇವಸ್ಥಾನಕ್ಕೆ ಬಂದು ತಮ್ಮ ವ್ರತ ಪೂರ್ಣಗೊಳಿಸುವಲ್ಲಿ ನಿರತರಾಗಿದ್ದು, ಕೇರಳದ ಶಬರಿ ಮಲೆಯಲ್ಲಿ ಕೈಗೊಳ್ಳುವ ಸಕಲ ವಿಧಿ-ವಿಧಾನಗಳಂತೆ ಇರುಮುಡಿ ಹೊತ್ತು ಹದಿನೆಂಟು ಇಡುಮುರಿ ಅರ್ಪಿಸುವುದು, ಮಂಗಳಾರತಿ, ಅಭಿಷೇಕ ಸೇರಿದಂತೆ ಸಕಲ ಪೂಜಾ ಕೈಂಕರ್ಯ ಮಾಡುತ್ತಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close