ರಾಮ್ಪುರ: ರಾಜಸ್ಥಾನದ ಅಲ್ವಾರ್ನಲ್ಲಿ ದನಗಳ್ಳನೊಬ್ಬನ ಮೇಲೆ ಸಾರ್ವಜನಿಕರು ಥಳಿಸಿದ ವಿಚಾರ ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದು, ವಿಪಕ್ಷಗಳ ಬಾಯಿಗೆ ಆಹಾರವಾಗಿದೆ.
ಇದೇ ವಿಚಾರವಾಗಿ ಮಾತನಾಡಿರುವ ಎಸ್ಪಿ ನಾಯಕ ಅಝಂ ಖಾನ್ ಮುಸ್ಲಿಮರು ತಮ್ಮ ಮುಂದಿನ ತಲೆಮಾರುಗಳ ಸುರಕ್ಷತೆಗಾಗಿ ಹೈನುಗಾರಿಕೆ ಹಾಗು ಹಸು ಸಾಕಣೆಯಿಂದ ದೂರ ಉಳಿಯಬೇಕೆಂದು ಆಗ್ರಹಿಸಿದ್ದಾರೆ.
“ಹೈನೋದ್ಯಮ ಹಾಗು ಗೋವುಗಳ ವ್ಯಾಪಾರದಲ್ಲಿರುವ ಮುಸ್ಲಿಮರು, ತಮ್ಮ ಮುಂದಿನ ತಲೆಮಾರುಗಳ ಸುರಕ್ಷತೆಗಾಗಿ ಅದರಿಂದ ದೂರ ಉಳಿಯಬೇಕೆಂದು ಬೇಡಿಕೊಳ್ಳುತ್ತೇನೆ. ಹಸುವನ್ನು ಮುಟ್ಟಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೆಲ ರಾಜಕಾರಣಿಗಳು ಎಚ್ಚರಿಕೆ ಕೊಡುತ್ತಿರುವ ವೇಳೆ, ಇಂಥ ವ್ಯಾಪಾರಗಳಿಂದ ಮುಸ್ಲಿಮರು ದೂರ ಉಳಿಯಬೇಕು” ಎಂದು ಅಝಂ ಹೇಳಿದ್ದಾರೆ.