ಜಾತಿ, ಮತ ಎಲ್ಲವನ್ನೂ ಮೀರಬಲ್ಲ ವ್ಯಕ್ತಿಗಳು ನಾಯಕರಾಗಲು ಸಾಧ್ಯ

Posted In : ಉತ್ತರ ಕನ್ನಡ, ರಾಜ್ಯ

ಶಿರಸಿ: ಜಾತಿ, ಮತ ಎಲ್ಲವನ್ನೂ ಮೀರಬಲ್ಲ ವ್ಯಕ್ತಿಗಳು ನಾಯಕರಾಗಲು ಸಾಧ್ಯ ಅಂತವರು ದಿ.ರಾಮಕೃಷ್ಣ ಹೆಗಡೆಯವರು.
ನನ್ನ ರಾಜಕೀಯ ಈ ಎತ್ತರಕ್ಕೆ ಕಾರಣರಾದವರು ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆಯವರು ಎಂದು ಮಾಜಿ ಸಭಾಪತಿ ಬಿ ಎಲ್ ಶಂಕರ ಹೇಳಿದರು.

ಶಿರಸಿಯ ಗಾಣಿಗ ಸಮುದಾಯ ಭವನದಲ್ಲಿ ಶುಕ್ರವಾರ ದಿ.ರಾಮಕೃಷ್ಣ ಹೆಗಡೆಯವರ ಅಭಿಮಾನಿ ವೇದಿಕೆಯಿಂದ ನಡೆದ ರಾಮಕೃಷ್ಣ ಹೆಗಡೆಯವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅವರು ಅವರ ತಾಯಿ, ಅಕ್ಕ ಕೂಡಾ ಸಾಮಾಜಿಕ ಕಾರ್ಯಕ್ಕೆ ಅವರು ತಮ್ಮನ್ನು ತಾವು ತೊಡಗಿಸಿಕೊಂಡವರು. ಅವರಿಗೆ ಸಿಕ್ಕ, ಪಡೆದ ಸಂಸ್ಕಾರವೇ ಉನ್ನತವಾದುದು.ಕರ್ನಾಟಕದ ಸಾರ್ವಜನಿಕ ಬದುಕಲ್ಲಿ ಬಹುಕಾಲ ಉಳಿವ ಉತ್ತಮ ಕಾರ್ಯ ಮಾಡಿದ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಇವರೂ
ಒಬ್ಬರು.  ಜಿಪಂ, ಮಂಡಲ ಪಂಚಾಯಿತ ವ್ಯವಸ್ಥೆಯ ವ್ಯವಸ್ಥೆ ಇಂದಿಗೂ ಶ್ಲಾಘನೀಯವಾಗಿದೆ.

ಇಂತ ಬದ್ಧತೆ, ಅಧಿಕಾರ ವಿಕೇಂದ್ರಿಕರಣದ ಹರಿಕಾರ ಹೋರಾಟಗಳೇ ಅವರ ಸ್ಮರಣೆಗೆ ಕಾರಣ. 83,89 ರ ವರೆಗೂ ಅವರ ಕಾರ್ಯ ಅಭೂತಪೂರ್ವ. ಜನರ ನಾಡಿಮಿಡಿತವನ್ನು ಅರಿತು ಅವರ ನಿರೀಕ್ಷೆ ಏನು ಎನ್ನುವುದನ್ನು ಅರಿತು ನೀಡಬಲ್ಲವನೇ ನಿಜವಾದ ನಾಯಕನಾಗಿ ನಿಲ್ಲಬಲ್ಲ. ಅವರ ಆಡಳಿತಾವಧಿಯಲ್ಲಿ ಹುಡುಕಿ ನಮ್ಮಂತವರನ್ನು ಮಂತ್ರಿಯನ್ನಾಗಿ ಮಾಡಿದ್ದರು. ಅವರಿಗೆ ಆಗಿನ ಆಡಳಿತ ಸಮರ್ಥರು ಬೇಕಿರಲಿಲ್ಲ. ಮುಂದಿನ ಪೀಳಿಗೆಯ ನಾಯಕರು ಅವರಿಗೆ ಬೇಕಿತ್ತು. ಅವರ ಗುರುತಿಸುವ ಆ ಕಾರ್ಯ ಇಂದಿನ ಕಾಲದಲ್ಲಿಲ್ಲ.  ದೇವರಾಜ ಅರಸು ಕೂಡಾ ಈ ನಿಟ್ಟಿನಲ್ಲಿ ಕಾರ್ಯಮಾಡಿದ್ದರು.

ಇಂದಿನ ರಾಜಕಾರಣದ ಅಂದರೆ ವ್ಯಾಪಾರದ ಸರಕಾಗಿದೆ. ಎಲ್ಲದಕ್ಕೂ ಮೌಲ್ಯವೇ ನಿರ್ಣಯವಾಗುತ್ತಿದೆ. ಅತ್ಯಂತ ಅಪಹಾಸ್ಯಕ್ಕೆ ಗುರಿಯಾಗುವ ವಸ್ತು ವೇ ಮೌಲ್ಯ ಎನ್ನುವುದು. ನಿಂದನ ರಾಜಕಾರಣವೇ ಇಂದು ಸಾಕಷ್ಟು ಮುಂದಿದೆ. ತಮ್ಮಿಂದಾಗುವ ತಪ್ಪಿನ ಬಗ್ಗೆ ಹೆಗಡೆಯವರು ಮತ್ತು ಎಸ್ ಎಮ್ ಕೃಷ್ಣ ಅವರು ಅಪಾಲಜಿ ಕೇಳಲು ಎಂದೂ ಹಿಂದೆ ಬಂದವರಲ್ಲ. ಇಂದಿನ ರಾಜಕಾರಣಿಗಳಿಂದ ಅಪಾಲಜಿ ಕೇಳಿಸ ಬೇಕೆಂದರೆ ಬಹು ಕಷ್ಟ ಇದು ಉತ್ತರಕನ್ನಡ ಜಿಲ್ಲೆಯ ಜನರಿಗೆ ಇದೆ ಎಂದು ಮಾರ್ಮಿಕವಾಗಿ ಹೇಳಿದರು.

Leave a Reply

Your email address will not be published. Required fields are marked *

twenty + 16 =

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top