lakshmi-electricals

‘ಕೇಂದ್ರದ ಯೋಜನೆ ಕುರಿತು ಬಿಎಸ್‌ವೈ ಅಸಮಾಧಾನ’

Posted In : ಚಿತ್ರದುರ್ಗ, ರಾಜ್ಯ

ಚಿತ್ರದುರ್ಗ: ತಾಲೂಕಿನ ಸಿರಿಗೆರೆಯ ತರಳಬಾಳು ಮಠದಲ್ಲಿ ಬೆಳೆ ವಿಮೆ ಕುರಿತು ಸಂವಾದ ಕಾರ್ಯಕ್ರಮ ನಡೆದಿದ್ದು, ಈ ಸಂವಾದದಲ್ಲಿ  ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಾಧ್ಯಕ್ಷ ಬಿಎಸ್ ವೈ ಭಾಗವಹಿಸಿದ್ದರು.

ಸಂವಾದದ ವೇಳೆ ಕೇಂದ್ರದ ಯೋಜನೆಗಳು ರೈತರಿಗೆ ಸರಿಯಾಗಿ ಪ್ರಯೋಜನವಾಗಿಲ್ಲದನ್ನು ಅರಿತ ಅವರು ಯೋಜನೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಫಸಲ್ ವಿಮಾ ಯೋಜನೆಯಿಂದ ರೈತರಿಗೆ ಅನುಕೂಲವಾಗಿಲ್ಲ. ಒಂದು ಎಕರೆಗೆ ಐದು ಸಾವಿರಕ್ಕೂ ಕಡಿಮೆ ವಿಮೆ ಲಭಿಸುತ್ತದೆ. ನೂರಕ್ಕೆೆ ನೂರು ಬೆಳೆ ವಿಫಲ ಆದಾಗಲೂ ಕಡಿಮೆ ವಿಮೆ ಲಭಿಸುವುದು ದುರದೃಷ್ಟಕರವಾಗಿದೆ. ಹಿಂದಿನ ಬೆಳೆವಿಮೆ ಯೋಜನೆಗಿಂದ ಈ ಯೋಜನೆ ಉತ್ತಮವಾಗಿದ್ದು, ಆದರೂ ರೈತರಿಗೆ ಈ ಯೋಜನೆಯಿಂದ ಪ್ರಯೋಜನವಾಗುತ್ತಿಲ್ಲ ಎಂದು ವಿಷಾದವ್ಯಕ್ತಪಡಿಸಿದರು. 

ಈವರೆಗೂ ನಾನು ಸಹ ಈ ಯೋಜನೆಯಿಂದ ರೈತರಿಗೆ ಪ್ರಯೋಜಗಳಾಗುತ್ತವೆ ಎಂಬ ಭ್ರಮೆಯಲ್ಲಿದ್ದೆೆ. ಆದರೆ ಇದೀಗ ಈ ಸಂವಾದದಲ್ಲಿ ಪಾಲ್ಗೊೊಂಡ ಬಳಿಕ ನನಗೆ ಅರಿವಾಗಿದೆ. ಹೀಗಾಗಿ ನನಗೆ ತಿಳಿಸಿಕೊಟ್ಟ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳಿಗೆ ಅಭಿನಂದನೆ ಸಲ್ಲಿಸಿದರು. 

ನ್ನು ರೈತರಿಗೆ ಈ ಯೋಜನೆಯಿಂದ ಫಲಪ್ರದವಾಗದಿರುವುದರ ಕುರಿತು ಇಲ್ಲಿ ನಡೆದ ಸಂವಾದದ ಆಧಾರದ ಮೇಲೆ ಕೇಂದ್ರ ಕೃಷಿ ಸಚಿವ, ಕೇಂದ್ರ ಹಾಗೂ ರಾಜ್ಯಸರಕಾರದ ಜೊತೆ ಚರ್ಚಿಸುತ್ತೇನೆ ಎಂದು ಅವರು ತಿಳಿಸಿದರು. 
 

Leave a Reply

Your email address will not be published. Required fields are marked *

five − 5 =

Loading

ಒತ್ತುವರಿ ತೆರವಿನಿಂದ ಬೆಂಗಳೂರಿನ ನೆರೆ ಸಮಸ್ಯೆೆ ಪರಿಹಾರವಾಗಬಲ್ಲದೇ?

Thank you for voting
You have already voted on this poll!
Please select an option!

vishwavani-timely-3

Sunday, 26.03.2017

ಶ್ರೀ ದುರ್ಮುಖ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣಪಕ್ಷ, ತಿಥಿ: ತ್ರಯೋದಶಿ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಶುಭ, ಕರಣ: ವಣಿಜೆ

ರಾಹುಕಾಲಗುಳಿಕಕಾಲಯಮಗಂಡಕಾಲ
04.30-06.00 03.00-04.30 12.00-01.30

Read More

 

Sunday, 26.03.2017

ಶ್ರೀ ದುರ್ಮುಖ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣಪಕ್ಷ, ತಿಥಿ: ತ್ರಯೋದಶಿ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಶುಭ, ಕರಣ: ವಣಿಜೆ

ರಾಹುಕಾಲಗುಳಿಕಕಾಲಯಮಗಂಡಕಾಲ
04.30-06.00 03.00-04.30 12.00-01.30

Read More

Back To Top