ವಿಶ್ವವಾಣಿ

ಬೆನ್ನನ್ನೇ ಮೆಟ್ಟಿಲಾಗಿಸಿ ಸಾಹಸ ಮೆರೆದಿದ್ದ ಯುವಕನಿಗೆ ಮಹೀಂದ್ರಾ ಗಿಫ್ಟ್..!

ತಿರುವನಂತಪುರ: ಕೇರಳದಲ್ಲಿ ಸಂಭವಿಸಿದ ಭಾರಿ ಪ್ರವಾಹದ ಸಂದರ್ಭದಲ್ಲಿ ಭಾರತೀಯ ಸೇನೆ, ಎನ್‍ಡಿಆರ್ ಎಫ್ ತಂಡ, ಸ್ವಯಂಸೇವಕರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದದ್ದು ನಿಮಗೆಲ್ಲಾ ತಿಳಿದೇ ಇದೆ. ಈ ವೇಳೆ ಭಾರಿ ಸುದ್ದಿಯಾಗಿದ್ದ ಯುವಕನಿಗೆ ಖ್ಯಾತ ವಾಹನ ತಯಾರಿಕಾ ಸಂಸ್ಥೆ ಮಹೀಂದ್ರ ಕಂಪನಿ ಭರ್ಜರಿ ಗಿಫ್ಟ್ ನೀಡಿದೆ..

ಹೌದು, ಮೀನುಗಾರ ಜೈಸೆಲ್‍ಗೆ ಮಹೀಂದ್ರಾ ಕಂಪನಿ ಗಿಫ್ಟ್ ನೀಡಿದೆ. ಮಹೀಂದ್ರಾ ಮರಾಝೊ ಎಂಬ ಹೊಸ ಕಾರೊಂದನ್ನು ಉಡುಗೊರೆಯಾಗಿ ನೀಡುವ ಮೂಲಕ ಜೈಸೆಲ್ ಅವರನ್ನು ಪ್ರಶಂಸಿದೆ. ಪ್ರವಾಹದ ವೇಳೆ ಜೈಸೆಲ್ ಎಂಬಾತ ಭಾರಿ ಸುದ್ದಿಯಾಗಿದ್ದ. ಪ್ರವಾಹದಿಂದ ಕಂಗಾಲಾಗಿದ್ದ ಜನರಿಗೆ ನೆರವಿನ ಹಸ್ತ ಚಾಚಿದ್ದ. ಮಹಿಳೆಯರನ್ನು ಬೋಟ್‍ಗೆ ಹತ್ತಿಸಲು ತನ್ನ ಬೆನ್ನನ್ನೇ ಮೆಟ್ಟಿಲನ್ನಾಗಿಸಿದ್ದ ಜೈಸಲ್. ಈತನ ಈ ಮಹಾತ್ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆಯ ಮಹಾಪೂರವೂ ಹರಿದುಬಂದಿತ್ತು. ಇದೀಗ ಮಹೀಂದ್ರಾ ಕಂಪನಿ ಹೊಚ್ಚ ಹೊಸ ಕಾರೊಂದನ್ನು ಉಡುಗೊರೆ ನೀಡುವ ಮೂಲಕ ಜೈಸೆಲ್ ಸಾಧನೆಯನ್ನು ಪ್ರಶಂಸಿದ್ದಾರೆ.