ಈ ಬಾರಿ ಜೆಡಿಎಸ್‌ಗೇ ಹೆಚ್ಚು ಸ್ಥಾನ ಖಚಿತ

Posted In : ಸಂಗಮ, ಸಂಪುಟ

ಬಾಗೇಗೌಡ, ಬಸವನಗುಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ

ಸಂದರ್ಶನ: ವೆಂಕಟೇಶ್ ದಾಸ್

ಚುನಾವಣೆಗೆ ರಣಾಂಗಣ ಸಿದ್ಧಗೊಳ್ಳುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಮಿಂಚಿನ ಸಂಚಾರವಾಗಿದೆ. ತಮ್ಮ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಪ್ರಬಲ ಆಕಾಂಕ್ಷಿತರು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ಜತೆಗೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಕುಮಾರಸ್ವಾಮಿ ಅವರ 20 ತಿಂಗಳ ಅಭಿವೃದ್ಧಿಪರ ಆಡಳಿತ ಮತ್ತು ದೇವೇಗೌಡರ ಹೋರಾಟವನ್ನು ಜನರಿಗೆ ಮುಟ್ಟಿಸುವ ಮೂಲಕ ಜನಬೆಂಬಲ ಗಳಿಸಲು ಪ್ರಯತ್ನಿಸುತ್ತಿದೆ. ಈ ವೇಳೆ ಪಕ್ಷದ ಮುಖಂಡ ಹಾಗೂ ಬಸವನಗುಡಿ ಕ್ಷೇತ್ರದ ಅಭ್ಯರ್ಥಿ ಬಾಗೇಗೌಡ ‘ವಿಶ್ವವಾಣಿ’ ಜತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

* ರಾಜ್ಯದಲ್ಲಿ ಜೆಡಿಎಸ್‌ಗೆ ಈ ಬಾರಿ ಯಾವ ರೀತಿಯ ವಾತಾವರಣವಿದೆ?
ಜನರು ಎರಡು ರಾಷ್ಟ್ರೀಯ ಪಕ್ಷಗಳಿಗೆ ಅಧಿಕಾರ ಕೊಟ್ಟು ನೋಡಿದ್ದಾರೆ. ಎರಡು ಸರಕಾರಗಳ ಅವಧಿಯಲ್ಲಿ ರಾಜ್ಯದ ರೈತರ ಸಂಕಷ್ಟ ಪರಿಹರಿಸುವಂತಹ ಯಾವುದೇ ಸಾಧನೆಗಳು ಆಗಿಲ್ಲ ಎಂಬುದು ಜನರಿಗೆ ಗೊತ್ತಿದೆ. ಜತೆಗೆ, ಬೆಂಗಳೂರು ನಗರವೂ ಸೇರಿ ರಾಜ್ಯದಲ್ಲಿ ಮೂಲಸೌಕರ್ಯ ಒದಗಿಸುವ ಪ್ರಮುಖ ಯೋಜನೆಗಳಿಗೆ ಚಾಲನೆ ನೀಡುವಲ್ಲಿ ಸರಕಾರಗಳು ವಿಫಲವಾಗಿವೆ. ಕುಮಾರಸ್ವಾಮಿ ಅವರ ಅವಧಿಯಲ್ಲಿ ಆದಂತಹ ಸಾಧನೆಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಈ ಬಾರಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲೇಬೇಕು ಎಂದು ರಾಜ್ಯದ ರೈತರು, ಕಾರ್ಮಿಕರು ತೀರ್ಮಾನಿಸಿದ್ದಾರೆ. ಹೀಗಾಗಿ ಜೆಡಿಎಸ್ ಈ ಬಾರಿ ಅತಿಹೆಚ್ಚು ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬರಲಿದೆ.

* ನಿಮ್ಮ ಪಕ್ಷ ಅಧಿಕಾರ ಪಡೆಯುವಷ್ಟು ಸ್ಥಾನ ಪಡೆಯಲಿದೆಯೇ?
ಕುಮಾರಸ್ವಾಮಿ ಅವರ ಪ್ರವಾಸದ ಸಂದರ್ಭದಲ್ಲಿ ಜನ ಸೇರುತ್ತಿರುವುದನ್ನು ನೋಡಿದರೆ ಕುಮಾರಸ್ವಾಮಿ ಅವರತ್ತ ಜನರಿಗೆ ಯಾವ ಪ್ರಮಾಣದಲ್ಲಿ ಒಲವಿದೆ ಎಂಬುದು ಸ್ಪಷ್ಟವಾಗುತ್ತದೆ. ರಾಜ್ಯದ ಜನರು ಹಿಂದಿನ ಸರಕಾರಗಳನ್ನು ನೋಡಿ ಬೇಸತ್ತು ಕುಮಾರಸ್ವಾಮಿ ಅವರತ್ತ ವಿಶ್ವಾಸ ಬೆಳೆಸಿಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ಅವರಿಗೆ ಒಮ್ಮೆ ಅಧಿಕಾರ ನೀಡಿದರೆ, ರಾಜ್ಯದ ಮತ್ತು ಯುವಜನರ ಸಮಸ್ಯೆಗಳು ಬಗೆಹರಿಯುತ್ತವೆ ಎಂಬ ವಿಶ್ವಾಸ ಜನರಲ್ಲಿ ಮೂಡುತ್ತಿದೆ. ಕುಮಾರಸ್ವಾಮಿ ಅವರು ನೀಡುತ್ತಿರುವ ಭರವಸೆಗಳು ಜನರಿಗೆ ಸರಿಯೆನಿಸುತ್ತಿದೆ. ಬೇರೆ ಪಕ್ಷಗಳು ತಮ್ಮತಮ್ಮ ವೈಯಕ್ತಿಕ ವಿಚಾರಗಳನ್ನಿಟ್ಟುಕೊಂಡು, ಧರ್ಮ, ಜಾತಿ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದರೆ ನಮ್ಮ ಪಕ್ಷದ ರಾಜ್ಯದ ಅಭಿವೃದ್ಧಿ, ರೈತಪರ ಚಿಂತನೆ ಮೂಲಕ ಜನರನ್ನು ತಲುಪುತ್ತಿವೆ. ಹೀಗಾಗಿ, ರಾಜ್ಯದ ಜನರು ನಮಗೆ ಈ ಬಾರಿ ಅಧಿಕಾರ ನೀಡುತ್ತಾರೆ ಎಂಬ ವಿಶ್ವಾಸವಿದೆ.

* ಬೆಂಗಳೂರು ನಗರದಲ್ಲಿ ಎಷ್ಟು ಸ್ಥಾನ ಗೆಲ್ಲುವ  ವಿಶ್ವಾಸವಿದೆ?
ಬೆಂಗಳೂರು ನಗರದಲ್ಲಿ ನಾವು ಸುಮಾರು ಹತ್ತಕ್ಕೂ ಅಧಿಕ ಸ್ಥಾನ ಗೆಲ್ಲಲಿದ್ದೇವೆ. ಬೆಂಗಳೂರು ನಗರಕ್ಕೆ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿದ ಸರಕಾರಗಳಲ್ಲಿ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಅವಧಿಯ ಜೆಡಿಎಸ್ ಸರಕಾರಗಳು ಮುಂಚೂಣಿಯಲ್ಲಿ ನಿಲ್ಲುತ್ತವೆ. ಕುಮಾರಸ್ವಾಮಿ ಅವರ ನಂತರ ಸರಕಾರ ನಗರದ ಕಸದ ಸಮಸ್ಯೆ, ಸಂಚಾರ ದಟ್ಟಣೆ ನಿವಾರಣೆ ಸೇರಿದಂತೆ ಇನ್ನಿತರ ಪ್ರಮುಖ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಯಾವುದೇ ಯೋಜನೆ ರೂಪಿಸಲಿಲ್ಲ. ಹೀಗಾಗಿ, ಬೆಂಗಳೂರಿನ ಜನತೆ ಈ ಬಾರಿ ಜೆಡಿಎಸ್ ಎಂಬ ವಿಶ್ವಾಸವಿದೆ. ನಾವು ಕಳೆದ ಬಾರಿಗಿಂತ ಕನಿಷ್ಠ ಎಂಟು ಸ್ಥಾನಗಳನ್ನು ಹೆಚ್ಚು ಪಡೆದುಕೊಳ್ಳಲಿದ್ದೇವೆ. ರಾಜರಾಜೇಶ್ವರಿನಗರ, ಬಸವನಗುಡಿ, ಮಹಾಲಕ್ಷ್ಮಿಪುರ, ಚಾಮರಾಜಪೇಟೆ, ಸಿ.ವಿ.ರಾಮನ್‌ನಗರ, ಪದ್ಮನಾಭ ನಗರ, ಬೆಂಗಳೂರು ದಕ್ಷಿಣ, ಯಶವಂತಪುರ, ಪುಲಿಕೇಶಿನಗರ, ಹೆಬ್ಬಾಳ, ಚಿಕ್ಕಪೇಟೆ, ಗಾಂಧಿ ನಗರ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ.

* ನಿಮ್ಮ ಕ್ಷೇತ್ರದಲ್ಲಿ ಸಿದ್ಧತೆಗಳು ಯಾವ ರೀತಿಯಲ್ಲಿವೆ?
ನಮ್ಮದು ಪ್ರಜ್ಞಾವಂತ ಮತದಾರರು ಹೆಚ್ಚಾಗಿ ವಾಸಿಸುವ ಕ್ಷೇತ್ರ. ಇಲ್ಲಿನ ಜನರು ಪ್ರತಿ ವಿಷಯವನ್ನು ಅಳೆದು ತೂಗಿ ನೋಡುತ್ತಾರೆ. ಮತದಾನ ಇದೇ ರೀತಿಯಲ್ಲಿರುತ್ತದೆ. ಕ್ಷೇತ್ರ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡುವ ಪಕ್ಷ ಹಾಗೂ ವ್ಯಕ್ತಿಗೆ ಮತ ಹಾಕುವುದು ಇಲ್ಲಿನ ಮತದಾರರ ಒಲವು. ಹೀಗಾಗಿ, ನಮ್ಮ ಕ್ಷೇತ್ರದ ಪ್ರತಿ ಮತದಾರನು ಜೆಡಿಎಸ್ ಮತ್ತು ಕುಮಾರಸ್ವಾಮಿ ಬಗ್ಗೆ ಒಲವು ಹೊಂದಿದ್ದಾರೆ. ಕ್ಷೇತ್ರದಲ್ಲಿ ಕಳೆದೆರಡು ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಅವಕಾಶ ನೀಡಿದ್ದೂ, ಅಭಿವೃದ್ಧಿ ವಿಚಾರದಲ್ಲಿ ಇರುವ ಸಮಸ್ಯೆಗಳಿಗೆ ಬದಲಾವಣೆ ಬಯಸಿದ್ದಾರೆ. ಹೀಗಾಗಿ, ನನ್ನನ್ನು ಆದರದಿಂದ ಬರಮಾಡಿಕೊಳ್ಳುತ್ತಾರೆ. ಬದಲಾವಣೆಗೆ ತಕ್ಕಂತೆ ಮತಹಾಕುವ ವಿಶ್ವಾಸ ಹೀಗಾಗಿ, ಕ್ಷೇತ್ರದ ಮತದಾರರು ನಮ್ಮ ಕೈ ಹಿಡಿಯುವ ವಿಶ್ವಾಸವಿದೆ.

* ನಿಮ್ಮ ಕ್ಷೇತ್ರದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ವಿಷಯವೇನು?
ಅಭಿವೃದ್ಧಿ ಮತ್ತು ಜನಪರ ಆಡಳಿತವೇ ನಮ್ಮ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇಲ್ಲಿ ಎಲ್ಲ ಜಾತಿಯ ಮತದಾರರಿದ್ದಾರೆ. ಒಕ್ಕಲಿಗರು, ನಾಯ್ಡುಗಳು, ಬ್ರಾಹ್ಮಣರು, ದಲಿತರು ಸೇರಿದಂತೆ ಎಲ್ಲ ಪ್ರಮುಖ ಜಾತಿ ಮತ್ತು ಭಾಷೆಯ ಮತದಾರರಿದ್ದಾರೆ. ಆದರೆ, ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದಾಗ ಯಾವುದೇ ಜಾತಿ ಇಲ್ಲಿ ಗೌಣವಾಗುತ್ತದೆ. ಪ್ರತಿಷ್ಠಿತ ಎನಿಸಿಕೊಂಡರೂ ಇಲ್ಲಿ ಇನ್ನೂ ಅನೇಕ ಸಮಸ್ಯೆಗಳಿವೆ. ಹಿಂದಿನ ಶಾಸಕರು ಕ್ಷೇತ್ರದ ಅಭಿವೃದ್ಧಿ ಮರೆತಿರುವ ಬಗ್ಗೆ ಜನರಿಗೆ ನಿರಾಸೆಯಿದೆ. ಹೀಗಾಗಿ, ನನಗೆ ಅವಕಾಶ ನೀಡುವ ಭರವಸೆ ನೀಡುತ್ತಿದ್ದಾರೆ. ಈಗಾಗಲೇ ನಾನು ಕ್ಷೇತ್ರದ ಮನೆಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದೇನೆ. ಜನರು ಬಹಳ ಪ್ರೀತಿ ತೋರುತ್ತಿದ್ದಾರೆ. ಕ್ಷೇತ್ರಕ್ಕೆ ಬದಲಾವಣೆ ಬೇಕಾಗಿದ್ದು, ಮುಂದಿನ ಚುನಾವಣೆಯಲ್ಲಿ ನಿಮ್ಮನ್ನು ಆಯ್ಕೆ ಮಾಡುವ ಮೂಲಕ ಬದಲಾವಣೆ ಮಾಡುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *

eighteen + fifteen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top