‘ಬಾಹುಬಲಿ-2’ಭರ್ಜರಿ ಪ್ರದರ್ಶನ

Posted In : ಕೋಲಾರ, ಬೆಂಗಳೂರು, ರಾಜ್ಯ, ರಾಯಚೂರು

ಬೆಂಗಳೂರು: ಬಾಹುಬಲಿ -2 ಚಿತ್ರ ಗುರುವಾರ ರಾತ್ರಿಯಿಂದಲೇ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನ ಮಲ್ಟಿಪ್ಲೆಕ್‌ಸ್‌ ಗಳು ಸೇರಿ ಹಲವೆಡೆ ರಾತ್ರಿಯೇ ಪ್ರದರ್ಶನ ಆರಂಭವಾಗಿ ಅಭಿಮಾನಿಗಳು ಸಂಭ್ರಮದಿಂದ ಸಿನಿಮಾ ನೋಡಿದ್ದಾರೆ. ಮೈಸೂರು, ಬಳ್ಳಾರಿ, ಮಂಗಳೂರಿನಲ್ಲಿಯೂ ಬಾಹುಬಲಿಯನ್ನು ಕಣ್ತುಂಬಿಕೊಂಡಿದ್ದಾರೆ. ಬಳ್ಳಾರಿಯಲ್ಲಿ ತಡರಾತ್ರಿ ಪ್ರದರ್ಶನ ಆರಂಭವಾಗಿದ್ದು, 1500 ರು.ವರೆಗೂ ಬ್ಲಾಕ್ ಟಿಕೆಟ್ ಮಾರಾಟವಾಗಿವೆ.

ಎಸ್.ಎಸ್.ರಾಜಮೌಳಿ ನಿರ್ದೇಶನದ ಈ ಚಿತ್ರ ದಾಖಲೆ ಸಂಖ್ಯೆಯ ಚಿತ್ರ ಮಂದಿರಗಳಲ್ಲಿ ತೆರೆ ಕಂಡಿದೆ. ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶರ್ಮ, ತಮನ್ನಾ ಮೊದಲಾದವರು ಅಭಿನಯಿಸಿದ್ದಾರೆ.

ರಾಯಚೂರಿನಲ್ಲಿ ಬಾಹುಬಲಿ -2 ಅಬ್ಬರ: ಬಾಹುಬಲಿ-2 ಚಿತ್ರ ರಾಯಚೂರಿನ ಮೂರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಶುಕ್ರವಾರ ಬೆಳಗ್ಗೆಯಿಂದಲೇ ಪ್ರದರ್ಶನ ಕಾಣುತ್ತಿದೆ. ಬಾಹುಬಲಿ ಆರಂಭ ನೋಡಿದ್ದ ಸಿನಿಪ್ರಿಯರು ಬಾಹುಬಲಿ-2 ವೀಕ್ಷಣೆ ಮೂಲಕ ತಮ್ಮ ಸಿನಿದಾಹ ತೀರಿಸಿಕೊಂಡಿದ್ದಾರೆ.

ಗುರುವಾರ ರಾತ್ರಿ ಸಿನಿಮಾ ಪ್ರದರ್ಶನವಿಲ್ಲ ಎಂದು ತಿಳಿಸಿದ್ದರೂ ಚಿತ್ರಮಂದಿರಕ್ಕೆ ನೂರಾರು ಮಂದಿ ಬಂದಿದ್ದರಿಂದ ಪೊಲೀಸರು ಕೆಲವರನ್ನು ಬಂಧಿಸಿದರೆ, ಕೆಲವರಿಗೆ ಲಾಠಿ ರುಚಿ ತೋರಿಸಿದ್ದಾರೆ. ಬೆಳಗ್ಗೆ ಚಿತ್ರಮಂದಿರದ ಹತ್ತಿರ ನೂರಾರು ಜನರು ಆಗಮಿಸಿದ್ದು ಟಿಕೆಟ್ ಸಿಕ್ಕವರು ಸಿನಿಮಾ ನೋಡುತ್ತಿದ್ದರೆ, ಸಿಗದಿದ್ದವರು ಮಾತ್ರ ಮುಂದಿನ ಪ್ರದರ್ಶನಕ್ಕೆ ಕಾಯುತ್ತಿರುವ ದೃಶ್ಯ ಕಂಡುಬಂತು.

ಕೋಲಾರದಲ್ಲೂ ಬಾಹುಬಲಿ ಅಬ್ಬರ : ನಾರಾಯಣಿ ಚಿತ್ರಮಂದಿರದಲ್ಲಿ ಮೊದಲ ಪ್ರದರ್ಶನಕ್ಕೆ 400-500 ರು. ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ರಾಜ್ಯ ಸರಕಾರದಿಂದ ಮಲ್ಟಿಫ್ಲೆಕ್‌ಸ್‌ ಟಿಕೆಟಿಗೆ ಗರಿಷ್ಠ 200 ರೂಪಾಯಿ ನಿಗದಿಪಡಿಸಿ ಆದೇಶ ಹೊರಡಿಸಿದ್ದರೂ, ಪ್ರೇಕ್ಷಕರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿರುವುದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

twenty − 7 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top