ದ್ವಿತೀಯ ಪಿಯುಸಿ: ಕೊಲೆ ಮಾಡಿ ಜೀವಾವಧಿ ಶಿಕ್ಷೆಗೀಡಾದ ಕೈದಿಗೆ ಶೇ.80 ಅಂಕ!
ಬೆಂಗಳೂರು ಮೂಲದ ಎಸ್.ಅಶೋಕ್ ಕುಮಾರ್ ಎಂಬಾತ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ, ಕಳೆದ 7 ವರ್ಷಗಳಿಂದ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದಾರೆ. ಜೈಲಿನ ಪ್ರತ್ಯೇಕ ಸೆಲ್ನಲ್ಲಿಯೇ ಅಭ್ಯಾಸ ಮಾಡುತ್ತಿದ್ದ ಅಶೋಕ್, ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದರು. ಇದೀಗ ಫಲಿತಾಂಶ ಹೊರಬಿದ್ದಿದ್ದು, 600ಕ್ಕೆ 481 ಅಂಕ ಪಡೆದುಕೊಂಡಿದ್ದಾರೆ.