About Us Advertise with us Be a Reporter E-Paper

Breaking NewsUncategorizedಪ್ರಚಲಿತರಾಜ್ಯ
Trending

ಬೆಂಗಳೂರಿನಲ್ಲಿ ಮತ್ತೆ ಬೌ ಬೌ ಅಟ್ಯಾಕ್: ಐವರಿಗೆ ಗಾಯ

ಬೆಂಗಳೂರು: ಉದ್ಯಾನನಗರಿಯಲ್ಲಿ ಮತ್ತೆ ಬೀದಿನಾಯಿಗಳ ಹಾವಳಿ ಜೋರಾಗಿದೆ. ಗುರುವಾರ ಶಾಲಾ ಮಕ್ಕಳು, ಪೋಷಕರ ಮೇಲೆ ಬೀದಿನಾಯಿಗಳು ದಾಳಿ ನಡೆಸಿವೆ.

ರಾಜಾಜಿನಗರದ 6ನೇ ಬ್ಲಾಕ್‍ನ ಗುಬ್ಬಣ್ಣ ಲೇಔಟ್ ನಲ್ಲಿ ಬೀದಿನಾಯಿಗಳು ದಾಳಿ ನಡೆಸಿ, ಐವರಿಗೆ ಕಚ್ಚಿವೆ. ಖಾಸಗಿ ಶಾಲಾ ಮಕ್ಕಳಾದ ಆಕಾಶ್, ಸಾಯಿಸಿರಿ ಸೇರಿದಂತೆ, ಮಕ್ಕಳನ್ನು ಶಾಲೆಗೆ ಬಿಡಲು ತೆರಳಿದ್ದ ಪೋಷಕರ ಮೇಲೂ ನಾಯಿಗಳು ದಾಳಿ ನಡೆಸಿವೆ. ಗಾಯಾಳು ವಿದ್ಯಾರ್ಥಿಗಳು, ಪೋಷಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಘಟನೆ ನಡೆದ ಬಳಿಕ ತಡವಾಗಿ ಎಚ್ಚೆತ್ತ ಬಿಬಿಎಂಪಿ, ಶ್ವಾನಗಳನ್ನು ಹಿಡಿಯಲು ವಾಹನದ ಜತೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close