About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಬೆಂಗಳೂರು ಓಪೆನ್‌: ಗುಣೇಶ್ವರನ್‌ಗೆ ಮುನ್ನಡೆ

ಬೆಂಗಳೂರು: ಪ್ರಕಸ್ತ ಋತುವಿನ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೂರ್ ಟೆನಿಸ್ ಟೂರ್ನಿಯಲ್ಲಿ ಭಾರತದ ಪ್ರಜ್ಞೇಶ್ ಗುಣೇಶ್ವರನ್ ಆರಂಭಿಕ ಜಯ ದಾಖಲಿಸಿದರು.

ಮಂಗಳವಾರ ಇಲ್ಲಿನ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಆಸೋಸಿಯೇಷನ್‌ನಲ್ಲಿ ನಡೆದ ಪುರುಷರ ಸಿಂಗಲ್‌ಸ್ ವಿಭಾಗ ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಜ್ಞೇಶ್ ರಷ್ಯಾದ ಇವಾನ್ ನೆಡೆಲ್ಕೊ ಅವರನ್ನು 6-2, 6-2 ನೇರಸೆಟ್‌ಗಳಿಂದ ಪರಾಭವಗೊಳಿಸಿ ಎರಡನೇ ಸುತ್ತಿಗೆ ಅರ್ಹತೆ ಪಡೆದರು. ಪಂದ್ಯ ಆರಂಭದಿಂದಲೂ ಎದುರಾಳಿಯನ್ನು ತಮ್ಮ ಬಲಿಷ್ಠ ಹೊಡೆತಗಳಿಂದ ಹಿನ್ನಡೆಯಾಗುವಂತೆ ಗುಣೇಶ್ವರನ್ ಮಾಡಿದರು.

ಮೊದಲ ಸೆಟ್‌ನಲ್ಲಿ ಹಾಗೂ ಎರಡನೇ ಸೆಟ್‌ನಲ್ಲಿ ತಲಾ ಎರಡೆರಡು ಅಂಕ ಮುನ್ನಡೆಯಾಗುವಲ್ಲಿ ಯಶಸ್ವಿಯಾಗಿ ಗೆಲುವಿನ ನಗೆ ಮತ್ತೊಂದು ಪಂದ್ಯದಲ್ಲಿ ಸಕೇತ್ ಮೈನಾನಿ ಎದುರಾಳಿ ಆದಿಲ್ ಕಲ್ಯಾಣ್‌ಪುರ್ ಅವರನ್ನು 6-3, 7-6 ನೇರಸೆಟ್‌ಗಳಿಂದ ಸೋಲಿಸಿದರೆ, ಸಸಿ ಕುಮಾರ್ ಮುಕುಂದ್ ಅವರು ರಷ್ಯಾದ ಕೊಲಿನ್ ಆಲ್ಟಾಮಿರೊನ್ ಅವರನ್ನು 7-6, 6-3 ಅಂತರಗಳಿಂದ ಮಣಿಸುವಲ್ಲಿ ಸಫಲವಾದರು.

ಪುರುಷರ ಡಬಲ್‌ಸ್ನಲ್ಲಿ ಪುರವ್ ರಾಜ ಮತ್ತು ಆಂಟೋನಿ ಸ್ಯಾನಿಚ್ ಜೋಡಿ ರೋಮಿನ್ ಮತ್ತು ಹೇಲ್‌ಸ್ ಅವರನ್ನು 6-4, 6-7, 11-9 ಅಂತರಗಳಿಂದ ಸೋಲಿಸಿದರೆ, ಶ್ರೀರಾಮ್ ಬಾಲಾಜಿ ಮತ್ತು ವಿಷ್ಣು ವರ್ಧನ್ ಜೋಡಿ ಸುಮಿತ್ ಮತ್ತು ಬ್ರೆಡನ್ ಸ್ಚೂರ್ ಜೋಡಿಯನ್ನು 6-4, 6-3 ನೇರಸೆಟ್‌ಗಳಿಂದ ಸೋಲಿಸುವ ಮೂಲಕ ಟೂರ್ನಿಯ ಮೊದಲ ಗೆಲುವು ಸಾಧಿಸಿತು.

Tags

Related Articles

Leave a Reply

Your email address will not be published. Required fields are marked *

Language
Close