ವಿಶ್ವವಾಣಿ

ನಾಪತ್ತೆಯಾಗಿದ್ದ ಬ್ಯಾಂಕ್ ಉಪಾಧ್ಯಕ್ಷ ಶವವಾಗಿ ಪತ್ತೆ

ಮುಂಬೈ: ನಾಪತ್ತೆಯಾಗಿದ್ದ ಹೆಚ್‍ಡಿಎಫ್‍ಸಿ ಬ್ಯಾಂಕ್ ಉಪಾಧ್ಯಕ್ಷ ಸಿದ್ದಾರ್ಥ್ ಸಾಂಘವಿ ಅವರ ಮೃತದೇಹ ಪತ್ತೆಯಾಗಿದೆ. ಪ್ರಕರಣ ಸಂಬಂಧ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸರ್ಫರಾಜ್ ಶೇಖ್ (20) ಬಂಧಿತ. ಮುಂಬೈನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಿದ್ದಾರ್ಥ್ ಸಾಂಘವಿ(39) ಅವರು ಕಳೆದ ಬುಧವಾರದಂದು ನಾಪತ್ತೆಯಾಗಿದ್ದರು. ಬಳಿಕ ನೇವಿ ಮುಂಬೈ ಬಳಿ ಅವರ ಕಾರು ಮಾತ್ರ ಪತ್ತೆಯಾಗಿತ್ತು. ಇದೀಗ ಅವರು ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ.