About Us Advertise with us Be a Reporter E-Paper

ಗೆಜೆಟಿಯರ್

ವಾಟ್ಸಪ್ ಬಳಕೆ ಇರಲಿ ಎಚ್ಚರಿಕೆ

ಅಶೋಕ ವಿ ಬಳ್ಳಾ

ತಿಯಾದ್ರೆ ಅಮೃತವೂ ವಿಷವಂತೆ. ಈಗ ಇದರ ಸಾಲಿಗೆ ವಾಟ್ಸಪ್ ಕೂಡ ಸೇರುತ್ತದೆ. ಬಳಕೆದಾರರು, ಜನಪ್ರಿಯತೆಯ ಪರಿಣಾಮದ ಜತೆಗೆ ವಿವೇಚನಾರಹಿತ ಬಳಕೆಯಿಂದಾಗಿ ಈ ಸ್ಥಿತಿ ನಿರ್ಮಾಣವಾಗಿದೆ. ಇಂದು ಬಹುತೇಕರು ಅದರಲ್ಲೂ ಯುವ ಸಮುದಾಯ ಸ್ಮಾರ್ಟ್ ಫೋನ್ ಹೊಂದಿದ್ದು ಜಗತ್ತನ್ನೇ ಅಂಗೈಲಿ ಹಿಡಿದು ಬದುಕುತ್ತಿದ್ದಾರೆ.

ಫೇಸ್ಬುಕ್ ಅಥವಾ ಮೆಸ್ಸೆಂಜರ್ ಇಲ್ಲದ ಸ್ಮಾರ್ಟ್ ಫೋನ್‌ಗಳು ಸಿಕ್ಕರೂ ವಾಟ್ಸಪ್ ಇಲ್ಲದ ಫೋನ್‌ಗಳು ತೀರಾ ವಿರಳ. ವಾಟ್ಸಪ್ ಅತ್ಯಂತ ಜನಪ್ರಿಯ ಮಾಧ್ಯಮವಾಗಿದೆ. ಬರಹ, ಚಿತ್ರ ಮತ್ತು ಧ್ವನಿ ಸಂದೇಶ ರವಾನೆಯ ಈ ಮಾಧ್ಯಮ ಪ್ರತಿಯೊಬ್ಬರ ಪ್ರೀತಿ ಗಳಿಸಲು ಹೆಚ್ಚು ತೆಗೆದುಕೊಳ್ಳಲಿಲ್ಲ. ಅನಕ್ಷರಸ್ಥರೂ ಸರಳವಾಗಿ ಬಳಸಬಹುದಾದ ಈ ಆ್ಯಪ್ ಬಹುಪಯೋಗಿಯೂ ಹೌದು. ಇದರಲ್ಲಿ ಒಂದು ಗುಂಪು ಮಾಡಿಕೊಂಡು ಏಕಕಾಲದಲ್ಲಿ ನೂರಾರು ಜನರಿಗೆ ಮಾಹಿತಿ, ಸುದ್ದಿ ತಿಳಿಸಬಹುದು. ಇದೇ ಕಾರಣಕ್ಕೆ ಹಲವಾರು ಗುಂಪುಗಳು ಹುಟ್ಟಿಕೊಂಡಿವೆ. ನಿತ್ಯ ಅಗಣಿತ ಸಂದೇಶಗಳು ರವಾನೆಯಾಗುತ್ತಿವೆ.

ನೌಕರರು, ಸಂಘಟನೆಗಳು, ಸಂಸ್ಥೆಗಳು, ಕಾರ್ಮಿಕರು, ಹಿರಿಕಿರಿಯರು, ಮಹಿಳೆಯರು, ಕವಿಸಾಹಿತಿಗಳು, ಶಿಕ್ಷಕರು, ಹೋರಾಟಗಾರರು, ಪತ್ರಿಕಾ ಮಾಧ್ಯಮದವರು ತಮ್ಮದೇ ಆದ ಕೆಲ ನಿಗದಿತ ಉದ್ದೇಶಗಳನ್ನಿಟ್ಟುಕೊಂಡು ವಾಟ್ಸಪ್ ಬಳಗ ಕಟ್ಟಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ನೂರಾರು ಪಡೆದುಕೊಂಡಿದ್ದಾರೆ. ಇದರ ಬಳಕೆಯಲ್ಲಿ ಭಾರತವು ಮುಂಚೂಣಿಯಲ್ಲಿದೆ. ಕೆಲವರಂತೂ ತಮ್ಮ ನಿತ್ಯದ ಬಹು ಸಮಯವನ್ನು ಇದಕ್ಕಾಗಿಯೇ ಮೀಸಲಿಟ್ಟಿದ್ದಾರೆ. ಹಲವಾರು ಕವಿಗಳು ಬಳಗದಲ್ಲಿ ದಿನಕೊಂದು ವಿಷಯದ ಮೇಲೆ ನೂರಾರು ಕವಿತೆಗಳನ್ನು ಕಟ್ಟಿದರೆ, ಅವುಗಳನ್ನು ವಿಮರ್ಶೆ ಮಾಡುವವರಿದ್ದಾರೆ. ಹೀಗೆ ವಾಟ್ಸಪ್ ಸಾಹಿತ್ಯ ಸೃಷ್ಟಿಗೂ ನೆರವಾಗಿದೆ. ಪತ್ರಿಕೆಗಳ ಪ್ರಮುಖ ಸುದ್ದಿ ತುಣುಕುಗಳು ಹರಿದಾಡುವ ವಾಹಿನಿಯಾಗಿದೆ. ತಮ್ಮ ಜಾಹೀರಾತು ಮತ್ತು ಪ್ರಚಾರಕ್ಕೆ ವೇದಿಕೆಯಾಗಿದೆ. ಶೈಕ್ಷಣಿಕ ವಿಚಾರಗಳ ವಿನಿಮಯ, ರಾಜಕೀಯ ಚರ್ಚೆ, ಚಿಂತನೆಗಳ ಹಂಚಿಕೆ, ಧಾರ್ಮಿಕ ಭಾವನೆಗಳ ದೇಶಪ್ರೇಮ ಬೆಳೆಸುವ ಮಾಧ್ಯಮವಾಗಿ ವಾಟ್ಸಪ್ ಬಹುಪಯೋಗಿಯಾಗಿದೆ.

ಇಷ್ಟೆಲ್ಲ ಅನುಕೂಲತೆಗಳಿದ್ದೂ ಕೆಲವರ ದುರುಪಯೋಗದಿಂದಾಗಿ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಿದೆ. ಧಾರ್ಮಿಕ ಭಾವನೆಗಳ ಪ್ರಚೋದನೆಗೆ ಬಳಕೆಯಾಗಿದೆ. ಪ್ರಶ್ನೆಪತ್ರಿಕೆಗಳ ಸೋರಿಕೆಯಂತಹ ಅಪರಾಧಕ್ಕೆ ಬಲಿಯಾಗಿದೆ. ಅನಗತ್ಯ ಮೆಸೇಜುಗಳ ಹಾವಳಿಯಿಂದ ಗುಂಪಿನ ಸದಸ್ಯರಿಗೆ ಕಿರಿಕಿರಿಯಾಗಿದೆ. ಪ್ರಾರಂಭದಲ್ಲಿ ವಾಟ್ಸಪ್ ಸಂದೇಶ ಬಂದರೆ ಸಾಕು ಮೊದಲು ಡೌನ್‌ಲೋಡ್ ಮಾಡಿ ನೋಡುತ್ತಿದ್ದವರಿಗೆ ಈಗ ಸಂದೇಶ ಕಳಿಸಿದ್ದನ್ನು ಫೋನ್ ಮಾಡಿ ತಿಳಿಸುವಂತಾಗಿದೆ. ಬಳಗದಲ್ಲಿನ ಸದಸ್ಯರ ಯಡವಟ್ಟಿನಿಂದಾಗಿ ಗುಂಪಿನ ನಿರ್ವಾಹಕ ಶಿಕ್ಷೆಗೆ ಗುರಿಯಾಗಿದ್ದಾನೆ. ಹೆಚ್ಚಾಗಿ ಬಳಕೆದಾರರಿಗಾಗಿ ಕಾನೂನು ರಚಿಸಲಾಗಿದೆ.

ಹೀಗೆ ವಿವೇಚನಾರಹಿತ ಬಳಕೆಯಿಂದಾಗಿ ಒಂದು ಅತ್ಯುಪಯುಕ್ತ ಮಾಧ್ಯಮವಾಗಿರುವ ವಾಟ್ಸಪ್ ಕಿರಿಕಿರಿಯತ್ತ ವಾಲುತ್ತಿರುವುದು ಬೇಸರದ ಸಂಗತಿ. ಆದ್ದರಿಂದ ವಿವೇಚನೆಯಿಂದ ವಾಟ್ಸಪ್ ಬಳಸುವಂತಾಗಲಿ. ಆ ಮೂಲಕ ಜನಸ್ನೇಹಿಯಾಗಲಿ. ಮತ್ತೆ ತನ್ನ ಹಳೆ ಹೊಳಪನ್ನು ಪಡೆಯುವಂತಾಗಲಿ ಎಂಬುದೇ ಎಲ್ಲ ವಾಟ್ಸಪ್ ಪ್ರಿಯರ ಆಶಯ.

Tags

Related Articles

Leave a Reply

Your email address will not be published. Required fields are marked *

Language
Close