About Us Advertise with us Be a Reporter E-Paper

ಅಂಕಣಗಳು

ಮಾತಿನ ಮೇಲೆ ಎಚ್ಚರ ಇರಲಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಽ ಯೂರೋಪ್ ದೇಶಗಳ ಪ್ರವಾಸದಲ್ಲಿದ್ದಾರೆ. ಸಹಜವಾಗಿಯೇ ಹೋದಲೆಲ್ಲ ಅವರು ಸಭೆಗಳನ್ನು ನಡೆಸಿ ತಮ್ಮ ಚಿಂತನೆಗಳನ್ನು ಹರಿಯಬಿಡುತ್ತಿದ್ದಾರೆ. ರಾಜಕೀಯ ಪಕ್ಷದ ನಾಯಕನಾಗಿ ಪಕ್ಷದ ಚಿಂತನೆಗಳನ್ನು ಪ್ರಚುರಪಡಿಸುವುದು ತಪ್ಪಲ್ಲ. ಆದರೆ ಹಾಗೆ ಮಾಡುವಾಗ ತನ್ನ ಮಾತಿನ ಧಾಟಿ ಎತ್ತ ಸಾಗುತ್ತಿದೆ ಎಂಬುದರ ಬಗ್ಗೆಯೂ ಅವರು ಕೊಂಚ ಗಮನ ನೀಡುವುದು ಅಗತ್ಯ. ಹೊರದೇಶದಲ್ಲಿ ನಾವು ನಮ್ಮ ದೇಶದ ರಾಯಭಾರಿಗಳಾಗಿರುತ್ತೇವೆ. ಇಲ್ಲಿನ ರಾಜಕೀಯವನ್ನು ಪಕ್ಕಕ್ಕಿಟ್ಟು ದೇಶದ ಇಮೇಜಿಗೆ ಧಕ್ಕೆ ತರಬಹುದಾಂತಹ ಮಾತುಗಳನ್ನು ಆಡುವುದು ಅಷ್ಟೊಂದು ತರವಲ್ಲ. ಹ್ಯಾಂಬರ್ಗ್‌ನಲ್ಲಿ ರಾಹುಲ್ ಆಡಿದ ಮಾತು ಅಂತಹ ಭಾವನೆ ಹುಟ್ಟುಹಾಕಿದೆ ಎಂಬುದು ಬಿಜೆಪಿಯ ಆಂಬೋಣ. ಸಮಾಜದ ಕೆಲ ವರ್ಗಗಳನ್ನು ಅಭಿವೃದ್ಧಿ ವಂಚಿತಗೊಳಿಸಿದರೆ ಅದು ಉಗ್ರವಾದಕ್ಕೆ ಎಡೆಮಾಡಿಕೊಡುತ್ತದೆ ಎಂಬ ರಾಹುಲ್ ಉವಾಚ ದೇಶದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅದೇ ರೀತಿ ಅವರು ಬಿಜೆಪಿ ಮತ್ತು ಆರೆಸ್ಸೆಸ್ ಅನ್ನು ಈಜಿಪ್ತಿನ ಮುಸ್ಲಿಂ ಬ್ರದರ್‌ಹುಡ್ ಸಂಘಟನೆಗೆ ಹೋಲಿಸಿರುವುದು ಚರ್ಚೆಗೆ ಕಾವು ನೀಡಿದೆ. ಈ ಎರಡೂ ಹೇಳಿಕೆಗಳನ್ನು ಬಿಜೆಪಿ ಅತ್ಯುಗ್ರವಾಗಿ ಟೀಕಿಸಿದೆ. ಈ ಮಾತುಗಳನ್ನು ರಾಹುಲ್ ಯಾವ ಅರ್ಥದಲ್ಲಿ ಹೇಳಿದರೋ ತಿಳಿಯದು ಆದರೆ ಅವರ ಟೀಕೆ ಇನ್ನಷ್ಟು ಪ್ರಬುದ್ಧವಾಗಿರಬೇಕಿತ್ತು ಎನ್ನವ ಮಾತನ್ನು ತಳ್ಳಿಹಾಕಲಾಗದು. ಪ್ರಧಾನಿ ಹುದ್ದೆಗೆ ಮೋದಿಗೆ ಪರ್‍ಯಾಯ ಎಂಬ ಅರ್ಥದಲ್ಲಿ ಬಿಂಬಿತವಾಗಿರುವ ರಾಹುಲ್ ಗಾಂಽ ವರು ಮೋದಿ, ಬಿಜೆಪಿ, ಆರೆಸ್ಸೆಸ್ ತೆಗಳುವ ಭರದಲ್ಲಿ ಮಾತು ಅಂಕೆ ಮೀರದಂತೆ ನೋಡಿಕೊಂಡರೆ ಒಳಿತು.

Tags

Related Articles

Leave a Reply

Your email address will not be published. Required fields are marked *

Language
Close