About Us Advertise with us Be a Reporter E-Paper

ಅಂಕಣಗಳು

ರೂಢಿ ಉತ್ತಮರಾಗಿ

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮತ್ತೆ ಸಂಯಮ ಕಳೆದುಕೊಂಡಿದ್ದಾರೆ. ರಾತ್ರೋ ರಾತ್ರಿ ರೈತರ ಸಾಲ ಮನ್ನಾ ಮಾಡಲು ನಾನೇನೂ ದುಡ್ಡಿನ ಗಿಡ ನೆಟ್ಟಿಲ್ಲ, ಸಾಲಮನ್ನಾ ವಿಚಾರದಲ್ಲಿ ನಾನೇನು ಹುಡುಗಾಟ ಆಡ್ತಿಲ್ಲ ಅಂತ ಗುಡುಗಿದ್ದಾರೆ. ರೈತರ ಸಾಲ ಮನ್ನಾ ಕುಮಾರಸ್ವಾಮಿ ಅವರು ಚುನಾವಣೆ ಪ್ರಣಾಳಿಕೆಯಲ್ಲಿ ಕೊಟ್ಟಿರುವ  ಈ ಭರವಸೆ ಕೊಟ್ಟಾಗ ಅವರು ದುಡ್ಡಿನ ಗಿಡ ನೆಟ್ಟಿದ್ದರೋ ಇಲ್ಲವೋ ಅದು ಗೊತ್ತಿಲ್ಲ. ಬಹುಶಃ ಗಿಡ ನೆಟ್ಟಿದ್ದರೆ ಅದು ಫಲ ಬಿಟ್ಟಿಲ್ಲ ಅಂತ ಕಾಣುತ್ತದೆ. ಅವರು ಕೊಟ್ಟ ಭರವಸೆ ಬಗ್ಗೆ ಜನ ಕೇಳುವುದು ಸಹಜ. ಹಾಗೆಂದು ಈ ವಿಚಾರ ಪ್ರಸ್ತಾಪ ಮಾಡಿದವರ ಮೇಲೆ ಹಾರಿ ಬೀಳುವುದು ಸರಿಯಲ್ಲ. ಅದನ್ನೇ ಅವರು ಶಾಂತ ರೀತಿಯಲ್ಲಿ ಹೇಳಬಹುದು. ಇರುವ ಅಡೆತಡೆಗಳ ಬಗ್ಗೆ ವಿವರಿಸಬಹುದು. ರೈತರ ಸಾಲ ಮನ್ನಾ ವಿಚಾರದಲ್ಲಿ ಅವರಿಗಿರುವ ಬದ್ಧತೆ  ಸಮ್ಮಿಶ್ರ ಸರಕಾರದಲ್ಲಿ ಆ ಭರವಸೆ ಈಡೇರಿಸಲು ಇರುವ ಇತಿಮಿತಿ ಎರಡರ ಬಗ್ಗೆಯೂ ಎಲ್ಲರಿಗೂ ಗೊತ್ತಿದೆ. ಹಣಕಾಸು ಖಾತೆಯನ್ನು ಅವರೇ ನಿರ್ವಹಿಸುತ್ತಿರುವುದರ ಜತೆಗೆ ಬಜೆಟ್‌ನಲ್ಲೂ ಒಂದಷ್ಟು  ಹೊಸ ತೆರಿಗೆ ವಿಧಿಸಿದ್ದಾರೆ. ಜನಪ್ರಿಯ ಯೋಜನೆಗಳಿಗೆ ಸ್ವಲ್ಪ ಮಟ್ಟಿನ ಅನುದಾನ ಕಡಿತ ಕೂಡ ಮಾಡಿದ್ದಾರೆ. ಅಧಿಕಾರವೂ ಅವರ ಕೈಯಲ್ಲೇ ಇದೆ. ಸಂಪನ್ಮೂಲ ಕ್ರೋಡೀಕರಣ ಮಾರ್ಗೋಪಾಯಗಳು ಅವರ ಕೈಯಲ್ಲೇ ಇದೆ. ಎಲ್ಲಕ್ಕಿಂತ ಮಿಗಿಲಾಗಿ ರೈತ ಸಮುದಾಯ ಅವರ ಪಕ್ಷದ ಟ್ರಂಪ್ ಕಾರ್ಡ್. ಹೇಗಿದ್ದರೂ ಸಾಲ  ಮಾಡುತ್ತಿದ್ದಾರೆ. ಅದನ್ನೂ ಆಡಿ ಏಕೆ ಮಾಡಬೇಕು? ಆಡದೇ ಮಾಡುವವನು ರೂಢಿಯೊಳಗೆ ಉತ್ತಮನು ಎಂಬುದನ್ನು ಒಮ್ಮೆ ನೆನೆಸಿಕೊಂಡರೆ ಸಾಕು!

Tags

Related Articles

Leave a Reply

Your email address will not be published. Required fields are marked *

Language
Close