About Us Advertise with us Be a Reporter E-Paper

ವಿ +

ಯೂಟ್ಯೂಬ್‌ನಲ್ಲಿ ಸಿಕ್ಕ ಮುತ್ತಿನ ಮಣಿ

ಸಾಕಷ್ಟು ಜನರ ದೂರು ‘ನಮ್ಮ ಮಕ್ಕಳು ಸೋಶಿಯಲ್ ಮೀಡಿಯಾಗಳಿಂದ ಹಾಳಾಗುತ್ತಿದ್ದಾರೆ. ಯಾವಾಗಲೂ ಫೇಸ್‌ಬುಕ್, ವಾಟ್‌ಸ್ಆ್ಯಪ್, ಇನ್ಸ್ಟಾಗ್ರಾಂ, ಯೂಟ್ಯೂಬ್ ಎನ್ನುತ್ತಾ ಕಾಲ ಕಳೆಯುತ್ತಾರೆ’ ಎನ್ನುವುದು. ಯಾವುದೇ ಸೋಶಿಯಲ್ ಮೀಡಿಯಾವಾಗಲಿ ನೀವು ಅದನ್ನು ಹೇಗೆ ಬಳಕೆ ಮಾಡುತ್ತೀರ ಎನ್ನುವುದರ ಮೇಲೆಯೇ ಒಳಿತು ಕೆಡುಕು ನಿರ್ಧರಿತವಾಗಿರುತ್ತದೆ. ಸೋಶಿಯಲ್ ಮೀಡಿಯಾಗಳಿಂದ ಬದುಕನ್ನು ಬರಡಾಗಿಸಿಕೊಂಡವರು ನಮ್ಮ ಕಣ್ಮುಂದೆ ಇದ್ದರೂ ಅದಕ್ಕೆ ಅಪವಾದವೆಂಬಂತೆ, ಸಾಮಾಜಿಕ ಜಾಲತಾಣಗಳು ಅದೆಷ್ಟೋ ಜನರ ಬದುಕನ್ನು ಕಟ್ಟಿಕೊಟ್ಟಿದೆ. ಅದಕ್ಕೆ ನಿದರ್ಶನವೇ ಬಿಜೆಂದರ್ ಚೌಹಾಣ್. ಪ್ರದೇಶದ ಬಿಜ್ನಾರ್ ಜಿಲ್ಲೆಯಲ್ಲಿರುವ ಪುಟ್ಟ ಹಳ್ಳಿ ಧಂಪುರ್‌ನ ಮೂವತ್ನಾಲ್ಕರ ಹರೆಯದ ಬಿಜೆಂದರ್ ಚೌಹಾಣ್, ಯೂಟ್ಯೂಬ್‌ನಿಂದಲೇ ಬದುಕುವ ದಾರಿಯನ್ನು ಕಂಡುಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾನೆ.

ಸಾಮಾನ್ಯವಾಗಿ ಕೃಷಿ ಎಂದಾಕ್ಷಣ ನೆನಪಿಗೆ ಬರುವುದು ಬತ್ತ, ಬೇಳೆ, ರಾಗಿ, ಜೋಳ, ಹತ್ತಿ, ಕಬ್ಬು, ಇತ್ಯಾದಿ. ಆದರೆ ಬಿಜೆಂದರ್ ಮಾಡಿದ್ದು ಕಡಲಡಿಯಲ್ಲಿ ಹುಡುಕಿ ತೆಗೆಯುವ ಮುತ್ತಿನ ಕೃಷಿ. ಆಶ್ಚರ್ಯವೆನಿಸಿದರೂ ಇದು ಸತ್ಯ! ಬಿಜೆಂದರ್ ಯೂಟ್ಯೂಬ್‌ನಲ್ಲಿ ಮುತ್ತನ್ನು ಬೆಳೆಯುವುದು ಹೇಗೆಂದು ತಿಳಿದುಕೊಂಡು, ಅದರ ಕೃಷಿ ಕಾರ್ಯದಿಂದ ಯುವ ಸಮುದಾಯಕ್ಕೇ ಮಾದರಿಯಾಗಿ ನಿಂತಿದ್ದಾರೆ.

ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಹಂಬಲವನ್ನಿಟ್ಟುಕೊಂಡಿದ್ದ ಬಿಜೆಂದರ್‌ಗೆ ಯೂಟ್ಯೂಬ್‌ನಲ್ಲಿ ಸಿಕ್ಕ ಕೃಷಿ ಮಾಹಿತಿಗಳು ಅಕ್ವಾಕಲ್ಚರ್‌ನತ್ತ ಮುಖ ಮಾಡುವಂತೆ ಮಾಡಿಸಿತು. ಇದೇ ನಿಟ್ಟಿನಲ್ಲಿ ಉತ್ತರ ಪ್ರದೇಶದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಕ್ವಾಕಲ್ಚರ್ ಬಗ್ಗೆ ತರಬೇತಿ ಪಡೆದರು. ತಮ್ಮ ಹೊಲ, ಗದ್ದೆಯ ಸ್ವಲ್ಪ ಭಾಗದಲ್ಲಿ ಹೊಂಡಗಳನ್ನು ನಿರ್ಮಿಸಿಕೊಂಡು ಅದರೊಳಗೆ ಕಪ್ಪೆ ಚಿಪ್ಪುಗಳನ್ನುಬಿತ್ತನೆ ಮಾಡಿದರು. ಹಗಲಿರುಳು ಕಠಿಣ ಪರಿಶ್ರಮದಿಂದ ದುಡಿದ ಫಲವಾಗಿ ಇಂದು ವರ್ಷವೊಂದಕ್ಕೆ ಎಂಟು ರು. ಆದಾಯ ಗಳಿಸುತ್ತಿದ್ದಾರೆ.

ಸುಲಭದ ಕೆಲಸವಲ್ಲ:
ಹತ್ತು ಅಡಿ ಉದ್ದ ಮತ್ತು ಅಗಲದ ಪಾಂಡ್‌ಗಳನ್ನು ನಿರ್ಮಿಸಿದ ಬಿಜೆಂದರ್ ಅದರಲ್ಲಿ ಸಾವಿರಾರು ಕಪ್ಪೆ ಚಿಪ್ಪುಗಳನ್ನು ಬಿತ್ತನೆ ಮಾಡಿದರು. ಹದಿನಾಲ್ಕು ತಿಂಗಳು ಅವು ಬೆಳೆಯುವಂತೆ ಚೆನ್ನಾಗಿ ಪೋಷಣೆ ಮಾಡಿದರು. ಸಾವಿರಾರು ಕಪ್ಪೆ ಚಿಪ್ಪುಗಳ ಬಿತ್ತನೆ ಮಾಡಿದರು ಅದರಲ್ಲಿ ಅವರಿಗೆ ಬದುಕಿ ಸಿಕ್ಕವು ಅರ್ಧದಷ್ಟು ಮಾತ್ರ. ಬಿತ್ತನೆ ಮಾಡಿದ ಪ್ರತಿ ಚಿಪ್ಪು ಕೂಡ ಮುತ್ತು ಕೊಡುತ್ತದೆ ಎನ್ನಲಾಗುವುದಿಲ್ಲ. ಬಿತ್ತನೆ ಮಾಡಿದ್ದು ಹಲವು ಸಾವಿರ, ಕೆಲವು ಸಾವಿರ, ಆದಾಯ ತಂದು ಕೊಟ್ಟ ಮುತ್ತು ಕೆಲವೇ ನೂರು ಎನ್ನಬಹುದು. ಸದ್ಯ ಮಾರುಕಟ್ಟೆಯಲ್ಲಿ ಮುತ್ತಿಗೆ ಒಳ್ಳೆ ಬೆಳೆಯಿರುವುದರಿಂದ ಸುಮಾರು 500 ಮುತ್ತುಗಳಿಗೆ ಲಕ್ಷದಷ್ಟು ಆದಾಯ ಗಳಿಸಬಹುದಾಗಿದೆ.

ಬಿಜೆಂದರ್ ಸದ್ಯ ಮಾದರಿ ಕೃಷಿಕರ ಪಟ್ಟಿಯಲ್ಲಿರುವ ಆದರ್ಶ ಯುವಕ. ಮುತ್ತಿನ ಕೃಷಿಯ ಬಗ್ಗೆ ಆಸಕ್ತಿ ಇರುವ ಯುವಕರಿಗೆ ಉಚಿತವಾಗಿ ಕಾರ್ಯಾಗಾರವನ್ನು ನಡೆಸುತ್ತಿದ್ದಾರೆ. ನಾಗಪುರದ ರಾಷ್ಟ್ರೀಯ ಮುತ್ತು ಕೃಷಿ ತರಬೇತಿ ಕೆಂದ್ರದ ವಿದ್ಯಾರ್ಥಿಗಳಿಗೆ ಮುತ್ತು ಬೆಳೆಯುವ ಬಗ್ಗೆ ಉಪನ್ಯಾಸವನ್ನು ನೀಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close