About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಲೋಕಸಭಾ ಚುನಾವಣೆ ಒಳಗಾಗಿಯೇ ಬಿಜೆಪಿ ಸರಕಾರ ರಚನೆ: ಆರ್.ಅಶೋಕ್

ಬೆಂಗಳೂರು: ಎರಡು ತಿಂಗಳಲ್ಲಿ ಇಲ್ಲವೇ, ಲೋಕಸಭಾ ಚುನಾವಣೆ ಒಳಗಾಗಿಯೇ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗುತ್ತದೆ. ಇದಕ್ಕೆ ಬಿಜೆಪಿ ಹೈಕಮಾಂಡ್ ಹೈಕಮಾಂಡ್ ಸಮ್ಮತಿಯೂ ಸಿಕ್ಕಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ನಿವೃತ್ತ ಕೆಎಎಸ್ ಅಧಿಕಾರಿ ಡಾ.ಸಿದ್ದರಾಮಯ್ಯ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಯಾರು ಕನಸು ಕಾಣ್ತಾರೋ ಅವರೇ ಗುರಿ ಸಾಧಿಸುತ್ತಾರೆ. ಸರಕಾರ ರಚಿಸೋದು ಕನಸು ಅಂತಾನಾದರೂ ಹೇಳಿ ಅಥವಾ ಗುರಿ ಅಂತನಾದರೂ ನಾವೇನು ರಾಜಕೀಯ ಸನ್ಯಾಸಿಗಳಾ?. 37 ಶಾಸಕರನ್ನೂ ಇಟ್ಟುಕೊಂಡು ಸಿಎಂ ಆಗಬಹುದು ಅಂದ್ರೆ 104 ಸೀಟು ಇರೋರು ನಾವು ಸರಕಾರ ಮಾಡಬಾರದಾ ಎಂದು ಮೈತ್ರಿ ಸರಕಾರದ ವಿರುದ್ಧ ಕಿಡಿ ಕಾರಿದರು.

ರಾಜ್ಯದ ಜನ ನಮಗೆ ಬೆಂಬಲ ನೀಡಿದ್ದಾರೆ. ನಾವು ಬಿಜೆಪಿ ಸರಕಾರ ರಚಿಸೋದು ಶತಸಿದ್ಧ. ಬಿಎಸ್.ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಗಳಾಗುತ್ತಾರೆ. ಪಕ್ಷಕ್ಕೆ ಎಷ್ಟು ಜನರನ್ನು ಕರೆ ತರಬೇಕು ಎಂಬುದನ್ನು ನಮ್ಮ ವರಿಷ್ಟರು ನಿರ್ಧರಿಸುತ್ತಾರೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಭಿನ್ನಮತೀಯರ ಸಂಪರ್ಕದಲ್ಲಿ ಇದ್ದೇವೆ. ರಚಿಸೋ ವಿಶ್ವಾಸ ಇದೆ, ನಾವು ಸರಕಾರ ರಚನೆ ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ನುಡಿದರು.

ಮಂಡ್ಯ ಉಪಚುನಾವಣೆಯಲ್ಲಿ ಸ್ಪರ್ಧೆ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, ಯಡಿಯೂರಪ್ಪ ಅವರೇ ಸ್ಪರ್ಧೆ ಬೇಡ ಎಂದು ಹೇಳಿದ್ದಾರೆ. ಶ್ರೀರಾಮುಲು ಸ್ಪರ್ಧೆ ಮಾಡಬೇಕು ಅಂತ ಕೆಲವರು ಹೇಳಿದ್ದರು. ಅವರು ಲೋಕಸಭೆಗೆ ಬೇಡ ಎಂದು ಬಿಎಸ್ ವೈ ಹೇಳಿದ್ದಾರೆ.

ಮಂಡ್ಯದ ಚುನಾವಣೆ ಉಸ್ತುವಾರಿಯಾಗಿ ನನ್ನ ನೇಮಕ ಮಾಡಿದ್ದಾರೆ. ಕೋರ್ ಕಮಿಟಿಯಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ. ಯಾರನ್ನೇ ಮಾಡಿದ್ದರೂ ನಮ್ಮ ಬೆಂಬಲ ಇದೆ ಅಂತ ಹೇಳಿದ್ದಾರೆ. ಡಾ. ಸಿದ್ದ ರಾಮಯ್ಯ ಅವರು ನರೇಂದ್ರ ಮೋದಿ ಅವರ ಕಾರ್ಯವೈಖರಿ ಒಪ್ಪಿ ಬಿಜೆಪಿಗೆ ಸೇರುತ್ತಿದ್ದಾರೆ ಹಾಗಾಗಿ ಡಾ.ಸಿದ್ದರಾಮಯ್ಯ ಅಭ್ಯರ್ಥಿ ಆಗಲಿದ್ದಾರೆ ಎಂದರು.

ಇನ್ನೆರಡು ತಿಂಗಳಿನಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲಿದೆ ಒಂದೊಂದು ವಿಧಾನಸಭಾ ಕ್ಷೇತ್ರವೂ ಮುಖ್ಯ ಹಾಗಾಗಿ ಲೋಕಸಭೆಗೆ ಸ್ಪರ್ಧಿಸುವುದು ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದರಿಂದ ನನ್ನ ಹೆಸರನ್ನು ಮಂಡ್ಯದಲ್ಲಿ ಕೈ ಬಿಡಲಾಗಿದೆ ಎಂದು ಅಶೋಕ್ ಹೇಳಿದರು.

Tags

Related Articles

Leave a Reply

Your email address will not be published. Required fields are marked *

Language
Close