About Us Advertise with us Be a Reporter E-Paper

Breaking Newsರಾಜ್ಯ
Trending

ಬಳ್ಳಾರಿಯ ಎಲ್ಲ ಶಾಸಕರ ಹಾಜರಾತಿ ನೋಡಿ ಮಾಜಿ ಸಿಎಂ ಫುಲ್ ಖುಷ್..!

ಬೆಂಗಳೂರು: ಬಳ್ಳಾರಿ ಲೋಕಸಭೆ ಕ್ಷೇತ್ರದ ಮರುಚುನಾವಣೆ ಅಭ್ಯರ್ಥಿ ಆಯ್ಕೆ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ  ಸಭೆ ನಡೆಯಿತು.

ಬಳ್ಳಾರಿಯ ಎಲ್ಲ ಶಾಸಕರ ಹಾಜರಾತಿ ನೋಡಿ ಮಾಜಿ ಸಿಎಂ ಸಿದ್ದರಾಮಯ್ಯ ಖುಷಿಯಾದ್ರು. ಎಲ್ರೂ ಒಗ್ಗಟ್ಟಾಗಿದ್ದೀರಲ್ಲ, ನೋಡ್ರಿ, ಕಲ್ಲು ಬಂಡೆ ತರ ಎಲ್ಲ ಜೊತೆಯಾಗಿದ್ದಾರೆ ಅಂತ ಖುಷಿಯಿಂದ ಹೇಳಿದ್ರು. ಸಿದ್ದರಾಮಯ್ಯ ಅವರ ಮಾತಿಗೆ ಬಳ್ಳಾರಿ ಶಾಸಕರು, ಸಚಿವ ಡಿಕೆಶಿ, ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ ನಕ್ಕು ಹಗುರಾದ್ರು.

ಈ ವೇಳೆ ಮಾತನಾಡಿದ ಸಚಿವ ಡಿಕೆಶಿ, ”ಅನಿಲ್ ಲಾಡ್ ಅವರನ್ನು ಬಿಟ್ಟು ಬಳ್ಳಾರಿಯ ಎಲ್ಲ ಶಾಸಕರು ಇಂದು ಹಾಜರಿದ್ದಾರೆ. ಎಲ್ಲ ಶಾಸಕರು ಒಟ್ಟಿಗೆ ಬರಬೇಕು ಅಂತಾ ಪಕ್ಷ ಹೇಳಿರಲಿಲ್ಲ. ನಾನು ಬಳ್ಳಾರಿಯ ಕಾಂಗ್ರೆಸ್ ಹಿರಿಯ ಮುಖಂಡರ ಜೊತೆ ಮಾತಾಡಿದ್ದೇನೆ. ಯಾರೇ ಅಭ್ಯರ್ಥಿ ಆದ್ರೂ ಎಲ್ಲ ಶಾಸಕರು ಒಟ್ಟಾಗಿ ಒಗ್ಗಟ್ಟಿನಿಂದ ಕೆಲಸ ಮಾಡಲು ಒಪ್ಪಿದ್ದಾರೆ. ಜೆಡಿಎಸ್ ಬೆಂಬಲದೊಂದಿಗೆ ಕಾಂಗ್ರೆಸ್ ಚುನಾವಣೆ ಎದುರಿಸಲಿದೆ. ಪಾಂಡವರು ಗೆಲ್ತೇವೆ ಎಂದು ಹೇಳುವ ಶ್ರೀರಾಮುಲು ಬಳ್ಳಾರಿ ಗ್ರಾಮೀಣ ಕ್ಷೇತ್ರ ಬಿಟ್ಟು ಹೋಗಿದ್ದು ಏಕೆ ಎಂಬುದನ್ನ ಮತದಾರರಿಗೆ ಹೇಳಲಿ” ಎಂದು ಶ್ರೀರಾಮುಲುಗೆ ಡಿಕೆಶಿ ಟಾಂಗ್ ಕೊಟ್ರು.

ಎರಡು ತಿಂಗಳಲ್ಲಿ ಬಿಜೆಪಿ ಸರ್ಕಾರ ರಚನೆ ಬಗ್ಗೆ ಆರ್.ಅಶೋಕ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆಯೂ ಪ್ರತಿಕ್ರಿಯಿಸಿದ ಡಿಕೆಶಿ, ”ಬಿಜೆಪಿ ಕುದುರೆ ವ್ಯಾಪಾರ ಮಾಡುವ ಬಗ್ಗೆ ಅಶೋಕ್ ಹೇಳಿದ್ದಾರೆ. ನಾವು ಕುದುರೆ ವ್ಯಾಪಾರ ಮಾಡಿ ಸರಕಾರ ರಚಿಸ್ತೇವೆ ಅಂತಾ ಬಿಜೆಪಿ ಅವರೇ ಖಚಿತ ಪಡಿಸ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ” ಎಂದು ವ್ಯಂಗ್ಯವಾಡಿದ್ರು.

ಇನ್ನು ಈ ವೇಳೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಜಲ ಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ಆನಂದ್ ಸಿಂಗ್, ತುಕರಾಂ, ಗಣೇಶ್, ಭೀಮಾನಾಯ್ಕ್, ಪರಮೇಶ್ವರ ನಾಯಕ್, ನಾಗೇಂದ್ರ ಉಪಸ್ಥಿತರಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close