About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ನಾಯಿಗಳು ಮಾಡಿದ ತಪ್ಪಿಗೆ ಪಶುವೈದ್ಯರ ಬಂಧನ…!

ಪೊಲೀಸರ ವಿರುದ್ಧ ಕ್ರಮ ಜರುಗಿಸುವಂತೆ ಕರ್ನಾಟಕ ಪಶುವೈದ್ಯಕೀಯ ಸಂಘ ಆಗ್ರಹ

ಬೆಂಗಳೂರು: ಮಗುವಿಗೆ ನಾಯಿಗಳು ಕಚ್ಚಿದ ಕಾರಣಕ್ಕೆ ಪಶು ವೈದ್ಯರ ವಿರುದ್ಧ ಮೊಕದ್ದಮೆ ದಾಖಲಿಸಿ ಅವರನ್ನು ಬಂಧಿಸಿ ಬಿಡುಗಡೆ ಮಾಡಿರುವುದನ್ನುಕರ್ನಾಟಕ ಪಶುವೈದ್ಯಕೀಯ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಶಿವರಾಮು ಅವರು, ಮಕ್ಕಳಿಗೆಬೀದಿ ನಾಯಿ ಕಡಿದು ಗಾಯಗೊಳಿಸಿರುವುದಕ್ಕೆನಮಗೂ ನೋವುಂಟಾಗಿದೆ. ಇದೊಂದು ಅನಿರೀಕ್ಷಿತ ಮತ್ತು ಆಕಸ್ಮಿಕ ಸಂಗತಿಯಾಗಿದೆ. ಆದರೆ, ಈ ಅನಿರೀಕ್ಷಿತ ಘಟನೆಗೆ ಪಶುವೈದ್ಯರನ್ನು ಬಲಿಪಶು ಮಾಡುತ್ತಿರುವುದು ಎಷ್ಟು ಸರಿ ಎಂದುಪ್ರಶ್ನಿಸಿದರು.

ಸರ್ಕಾರದ ಲಭ್ಯವಿರುವ ಕನಿಷ್ಠ ಸವಲತ್ತುಗಳೊಂದಿಗೆ ಹಗಲಿರುಳೂ ಜನರ ಸೇವೆ ಮಾಡುತ್ತಿದ್ದೇವೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬೀದಿ ನಾಯಿಗಳನ್ನು ನಿರ್ವಹಿಸುವ ರೀತಿಯ ಹಲವಾರು ಕ್ರಮಗಳನ್ನು ಚಾಚೂ ತಪ್ಪದೆ ಅನುಸರಿಸಬೇಕಾಗುತ್ತದೆ. ಬೀದಿ ನಾಯಿಗಳ ಸಂತಾನಹರಣಚಿಕಿತ್ಸೆಯ ನಂತರ ಆಯಾ ಪ್ರದೇಶದಲ್ಲೇ ಅವುಗಳನ್ನು ಬಿಡಬೇಕು. ಸಂತಾನಹರಣ ಚಿಕಿತ್ಸೆ ಸೇರಿದಂತೆ ಈ ಎಲ್ಲಾ ಕಾರ್ಯಗಳನ್ನು ಸ್ವಯಂ ಸೇವಾ ಸಂಸ್ಥೇಗಳು ಮಾಡುತ್ತಿದ್ದು,ಪಶುವೈದ್ಯಕೀಯ ಅಧಿಕಾರಿಗಳು ಕೇವಲ ಮೇಲುಸ್ತುವಾರಿ ಮಾಡುವ ಜವಾಬ್ದಾರಿಯನ್ನೂ ಮಾತ್ರ ನೀಡಲಾಗಿದೆ. ಆಗಿರುವ ಆಕಸ್ಮಿಕ ಘಟನೆಗೆ ಸಂಬಂಧಿಸಿದಂತೆ ಪಶುವೈದ್ಯಕೀಯವೈದ್ಯರನ್ನು ಹೊಣೆ ಮಾಡಿ ಪೋಲೀಸ್ ದೂರು ದಾಖಲಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ನಾಯಿಗಳು ಮಾಡಿದ ತಪ್ಪಿಗೆ ವೈದ್ಯರನ್ನು ಬಂಧಿಸುವ ಮೂಲಕ ಪೊಲೀಸರು ಉದ್ಧಟತನ ಪ್ರದರ್ಶಿಸಿದ್ದಾರೆ.ಅವರ ಈ ಕ್ರಮದಿಂದ ಪಶುವೈದ್ಯರು ಸಮಾಜದಲ್ಲಿ ತಲೆ ತಗ್ಗಿಸುವಂತಾಗಿದೆ. ಈ ರೀತಿ ಬಂಧಿಸಿದ್ದರಿಂದ ಪಶುವೈದ್ಯರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಕೂಡಲೇ ಇಂತಹಉದ್ಧಟತನದಿಂದ ಪಶುವೈದ್ಯರನ್ನು ಬಂಧಿಸಿ ಬಿಡುಗಡೆ ಮಾಡಿರುವ ಪೊಲೀಸರ ವಿರುದ್ಧ ಕೂಡಲೇ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ ಅವರು, ಶಿಸ್ತುಕ್ರಮ ಜರುಗಿಸದಿದ್ದರೆರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ವಿ ರಮೇಶ್, ಡಾ. ಅಭಿಲಾಷ್, ಡಾ ಮಲ್ಲಪ್ಪ ಭಜಂತ್ರಿ, ಡಾ. ರವಿ, ಡಾ ಸಾಯಿರಾಮ್ ಮತ್ತು ಡಾ ಬಸವರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close