ಅವರು ರಾಷ್ಟ್ರಪಿತನಾದರೆ, ಇವರು ಗ್ರಾಂಡ್‌ಫಾದರ್ ಆಫ್ ದಿ ನೇಶನ್!

Posted In : ಅಂಕಣಗಳು, ಬೆತ್ತಲೆ ಜಗತ್ತು

ಅವರನ್ನು ನೆನಪಿಸಿಕೊಂಡರೆ ಸಾಕು ಮನಸು ಪುಳಕಿತಗೊಳ್ಳುತ್ತದೆ, ಅವರ ಮಾತುಗಳನ್ನು ಕೇಳಿದರೆ ನರನಾಡಿಗಳಲ್ಲಿ ವಿದ್ಯುತ್ ಸಂಚಾರವಾಗುತ್ತದೆ, ಬದುಕಿಗೆ ಹೊಸ ಪ್ರೇರಣೆ ದೊರೆಯುತ್ತದೆ. ಇಷ್ಟಕ್ಕೂ ಆ ಶಕ್ತಿ ಯಾವುದು?

Look down at your feet! The road that is under your feet is the road you have passed over and is the same road that you see before. It will be soon under your feet, March on!!
ಒಬ್ಬ ಪರಿವ್ರಾಜಕ ಸನ್ಯಾಸಿಯಾಗಿ ಸ್ವಾಮಿ ವಿವೇಕಾನಂದರು ಹಿಮಾಲಯವನ್ನು ಏರುತ್ತಿರುತ್ತಾರೆ. ಅವರ ಜತೆಗಿದ್ದ ಸನ್ಯಾಸಿಯೊಬ್ಬ ಇನ್ನು ನನ್ನಿಂದ ನಡೆಯಲಾಗುವುದಿಲ್ಲ ಎಂದು ಅಲ್ಲಿಯೇ ಕುಳಿತು ಬಿಡುತ್ತಾನೆ. ಆಗ ಈ ಪ್ರೇರಕ ನುಡಿಗಳನ್ನಾಡುತ್ತಾರೆ-‘ಒಮ್ಮೆ ತಿರುಗಿ ನೋಡು. ನೀನು ಹಿಂದೆ ಯಾವ ರಸ್ತೆಯನ್ನು ಕ್ರಮಿಸಿ ಬಂದಿದ್ದಿಯೋ, ಮುಂದೆ ಇರುವುದೂ ಅದೇ ರಸ್ತೆ. ಹೆಜ್ಜೆ ಹಾಕು, ಅದೂ ಕ್ಷಣಮಾತ್ರದಲ್ಲಿ ಸಾಗಿಬಿಡುತ್ತದೆ.

Conquer
ಮುನ್ನುಗ್ಗು
ಡೋಂಟ್ ಲುಕ್‌ಬ್ಯಾಕ್
ಗೋ ಅಹೆಡ್
ಸ್ವಾಮಿ ವಿವೇಕಾನಂದರ ಸಮಗ್ರ ಸಾಹಿತ್ಯವನ್ನು ಓದಿದರೆ ಇಂತಹ ಮಾತುಗಳೇ ಹೆಚ್ಚಾಗಿ ಕಾಣುತ್ತವೆ. ಅವರು ನಿಜವಾದ Youth Icon. ಪ್ರತಿವರ್ಷ ಜನವರಿ 12ರಂದು ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವದಿನವಾಗಿ ಆಚರಿಸುತ್ತಿರುವುದು ನಿಜಕ್ಕೂ ಅವರೊಬ್ಬ ಸನ್ಯಾಸಿ, ಹಿಂದೂಧರ್ಮೋದ್ಧಾರಕ ಮಾತ್ರವಾಗಿರಲಿಲ್ಲ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಾವ ಗುಣನೀತಿಗಳನ್ನು ಅಳವಡಿಸಿಕೊಳ್ಳಬೇಕೋ ಅವುಗಳ ಸಾಕಾರಮೂರ್ತಿಯೂ ಆಗಿದ್ದರು. ವಿಶ್ವಧರ್ಮ ಸಮ್ಮೇಳನದ ನಂತರ ಯೂರೋಪ್ ಪ್ರವಾಸದಲ್ಲಿದ್ದ ವಿವೇಕಾನಂದರ ವೇಷಭೂಷಣಗಳನ್ನು ಕಂಡ ಬ್ರಿಟಿಷನೊಬ್ಬ, ‘ಒಬ್ಬ ಜಂಟಲ್‌ಮನ್ ಥರ ಡ್ರೆಸ್ ಮಾಡಿಕೊಳ್ಳುವುದಕ್ಕಾಗುವುದಿಲ್ಲವೇ?’ ಎಂದು ಕಿಚಾಯಿಸುತ್ತಾನೆ. ‘ನಿಮ್ಮ ಸಂಸ್ಕೃತಿಯಲ್ಲಿ ಬಟ್ಟೆಯಿಂದ ಒಬ್ಬ ವ್ಯಕ್ತಿ ಜಂಟಲ್‌ಮನ್ ಹೌದೋ ಅಲ್ಲವೋ ಎಂಬುದನ್ನು ಅಳೆಯುತ್ತೀರಿ. ಆದರೆ ನಮ್ಮ ಸಂಸ್ಕೃತಿಯಲ್ಲಿ ಒಬ್ಬನ ಚಾರಿತ್ರ್ಯದ ಮೇಲೆ ಅದು ನಿರ್ಧಾರಿತವಾಗುತ್ತದೆ’ ಎಂದು ವಿವೇಕಾನಂದರು ಬ್ರಿಟಿಷನು ತಲೆತಗ್ಗಿಸಿ ನಿಲ್ಲುವಂತಾಗುತ್ತದೆ. ವಿವೇಕಾನಂದರ ಮಾತುಗಳೇ ಹಾಗೆ, ಗುಂಡಿಗಿಂತ ಬಲಿಷ್ಠ.

ಅವರ ಮೂಲ ಹೆಸರು ನರೇಂದ್ರ. ಒಮ್ಮೆ ತರಗತಿಯ ಜಿಯೋಗ್ರಫಿ ಮೇಷ್ಟ್ರು ತಪ್ಪುಉತ್ತರ ಕೊಟ್ಟನೆಂಬ ಕಾರಣಕ್ಕೆ ನರೇಂದ್ರನನ್ನು ದಂಡಿಸುತ್ತಾರೆ. ಆದರೆ ತಾನು ಕೊಟ್ಟಿದ್ದು ಸರಿಯಾದ ಉತ್ತರವನ್ನೇ ಎಂದು ನರೇಂದ್ರನಿಗೆ ಗೊತ್ತಿತ್ತು. ಹಾಗಾಗಿ ನರೇಂದ್ರ ವಾದಕ್ಕಿಳಿಯುತ್ತಾನೆ. ಕುಪಿತರಾದ ಮೇಷ್ಟ್ರು, ‘ತಪ್ಪುಉತ್ತರ ಹೇಳಿದ್ದಲ್ಲದೆ, ವಾದ ಮಾಡುತ್ತೀಯಾ?’ ಎಂದು ಮತ್ತೆರಡು ಬಾರಿಸುತ್ತಾರೆ. ಈ ಘಟನೆಯಿಂದ ನೊಂದ ನರೇಂದ್ರ ಅಳುತ್ತಲೇ ಮನೆಗೆ ಬರುತ್ತಾನೆ. ಏನಾಯಿತೆಂದು ಕೇಳುತ್ತಾಳೆ. ಆಗ ನಡೆದ ಘಟನೆಯನ್ನು ಹೇಳುತ್ತಾನೆ. ನಾನು ಸರಿಯಾದ ಉತ್ತರ ಹೇಳಿದರೂ ಮೇಷ್ಟ್ರು ದಂಡಿಸಿದರು ಎಂದಾಗ, ಅಮ್ಮ ಹೇಳುತ್ತಾಳೆ- Follow the truth always no matter what happens!! ಇದು ನರೇಂದ್ರನ ಮೇಲೆ ಬಹಳ ದೊಡ್ಡ ಪ್ರಭಾವ ಬೀರುತ್ತದೆ. ಆತ ಬೆಳೆದು ದೊಡ್ಡವನಾಗಿ ಸ್ವಾಮಿ ವಿವೇಕಾನಂದರಾದ ಮೇಲೆ ಹೇಳುತ್ತಾರೆ-“Everything can be sacrificed for truth, but truth cannot be sacrificed for anything!”

ವಿವೇಕಾನಂದರ ಅಮೆರಿಕದ ಶಿಷ್ಯೆ ಮಿಸ್ ಮ್ಯಾಕ್ ಲಾರ್ಡ್ ಹೀಗೆ ಹೇಳುತ್ತಾಳೆ-‘ನಾನು ಈ ಆಧುನಿಕ ಪ್ರಪಂಚದಲ್ಲಿ ಇಬ್ಬರು ಮಹಾನ್ ವ್ಯಕ್ತಿಗಳನ್ನು ಕಂಡಿದ್ದೇನೆ. ಮೊದಲನೆಯವರು ಜರ್ಮನಿಯ ಚಕ್ರವರ್ತಿ ಕೈಸರ್ ಹಾಗೂ ಎರಡನೆಯವರು ಸ್ವಾಮಿ ವಿವೇಕಾನಂದ’. ಆಕೆಯೇ ಮುಂದುವರಿದು ‘ಈ ಇಬ್ಬರ ನಡುವೆ ಇರುವ ವ್ಯತ್ಯಾಸವೇನು?’ ಎಂದು ತನಗೆ ತಾನೇ ಪ್ರಶ್ನೆ ಹಾಕಿಕೊಳ್ಳುತ್ತಾಳೆ ಹಾಗೂ ಅವಳೇ ಉತ್ತರಿಸುತ್ತಾಳೆ. ‘ಒಂದು ವೇಳೆ ನೀವೇನಾದರೂ ಕೈಸರ್ ಎದುರು ನಿಂತರೆ ತೀರಾ ಕುಬ್ಜರಾಗಿ ಕಾಣುತ್ತೀರಿ, ಸಣ್ಣ ಧೂಳಿನ ಭಾಸವಾಗುತ್ತೀರಿ. ಆದರೆ ಸ್ವಾಮಿ ವಿವೇಕಾನಂದರಂಥ ಅಧ್ಯಾತ್ಮ ಶಕ್ತಿಯ ಎದುರು ನಿಂತಾಗ ನಿಮಗೆ ನೀವೇ ಬೃಹದಾಕಾರವಾಗಿ ಕಾಣುತ್ತೀರಿ, ಉಬ್ಬಿಹೋಗುತ್ತೀರಿ, ನಿಮ್ಮೊಳಗೂ ಒಬ್ಬ ದೊಡ್ಡ ವ್ಯಕ್ತಿ ಇದ್ದಾನೆ ಎಂದನಿಸುತ್ತದೆ. ಏಕೆಂದರೆ ಅವರ ಪ್ರೇರಕ ಮಾತುಗಳು ಹಾಗಿರುತ್ತವೆ’! ‘Before any wordly greatness you feel very small, Before any spiritual greatness like Swami Vivekananda you feel very strong!’’ ಎಂದು ಆಕೆ ವಿವರಿಸುತ್ತಾಳೆ. 1893ರಲ್ಲಿ ವಿಶ್ವಧರ್ಮ ಸಮ್ಮೇಳವನ್ನುದ್ದೇಶಿ ವಿವೇಕಾನಂದರು ಆಡಿದ ಮಾತುಗಳನ್ನು ಕೇಳಿ ಮೂಕವಿಸ್ಮಿತನಾದ ಅಮೆರಿಕದ ಪತ್ರಕರ್ತನೊಬ್ಬ’Columbus discovered the soil of America, Vivekananda discovered the Soul of America!’ಎಂದು ಮರುದಿನ ಪತ್ರಿಕೆಯಲ್ಲಿ ಬರೆಯುತ್ತಾನೆ.

ಹೌದು, ಅವರು ಹಿಂದು ಧರ್ಮದ ನಿಜವಾದ ರಾಯಭಾರಿ!
ವಿಶ್ವಧರ್ಮ ಸಮ್ಮೇಳನಕ್ಕಾಗಿ ಅಮೆರಿಕಕ್ಕೆ ಆಗಮಿಸಿದಾಗ, ‘ಬುದ್ಧ ಏಷ್ಯಾಗೆ ಸಂದೇಶವನ್ನು ತಂದಂತೆ, ನಾನು ಪಾಶ್ಚಿಮಾತ್ಯ ಜಗತ್ತಿಗೆ ಭಾರತದ ಸಂದೇಶವನ್ನು ತಂದಿದ್ದೇನೆ’ ಎಂದು ವಿವೇಕಾನಂದರು ಹೇಳುತ್ತಾರೆ. ಅವರನ್ನು ‘ಹಿಂದೂ ಧರ್ಮದ ರಾಯಭಾರಿ’ ಸುಖಾಸುಮ್ಮನೆ ಹೇಳಿದ್ದಲ್ಲ. ಶಂಕರಾಚಾರ್ಯ, ರಾಜಾರಾಮ್ ಮೋಹನ್ ರಾಯ್ ಮುಂತಾದವರೂ ದೇಶ ಸುತ್ತಿ, ಸಾಮಾಜಿಕ ಬದಲಾವಣೆಯನ್ನು ತರಲು ಯತ್ನಿಸಿದರಾದರೂ ಹಿಂದೂ ಧರ್ಮದ ಹಿರಿಮೆಯನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟ ಮೊದಲ ವ್ಯಕ್ತಿ ವಿವೇಕಾನಂದ. ಯಾವ ಧರ್ಮಗಳನ್ನೂ ತೆಗಳದೆ ಆ ಕೆಲಸ ಮಾಡಿದ್ದು ಇನ್ನೂ ದೊಡ್ಡ ಸಾಧನೆ. ವಿವೇಕಾನಂದರಿಗಿಂತ ಮೊದಲು ಯಾರೂ ಕೂಡ ವಿದೇಶಗಳಿಗೆ ಹೋಗಿ ಧರ್ಮಪ್ರಚಾರ, ಪ್ರಸಾರ ಮಾಡಿರಲಿಲ್ಲ.

ಅವನ ಶಿಷ್ಯಂದಿರು ಹೋಗಿದ್ದರೇ ಹೊರತು ಬುದ್ಧನೂ ಕೂಡ ಹೊರದೇಶಗಳಲ್ಲಿ ಧರ್ಮಪ್ರಚಾರ ಮಾಡಿರಲಿಲ್ಲ. ದೇಶ ಸುತ್ತಿದರೇ ಹೊರತು ವಿದೇಶಕ್ಕೆ ಹೋದವರಲ್ಲ. ಈ ಹಿನ್ನೆಲೆಯಲ್ಲಿ, He was the globalface of India. He was the first Ambassador of modern india to the world ಎಂದು ಅನುಮಾನವೇ ಇಲ್ಲದೆ ಹೇಳಬಹುದು. ಅವರೊಬ್ಬ ಸಾಂಸ್ಕೃತಿಕ ರಾಯಭಾರಿಯೂ ಹೌದು. ಸಾಂಸ್ಕೃತಿಕ ರಾಷ್ಟ್ರೀಯತೆ (ಕಲ್ಚರಲ್ ನ್ಯಾಶನಲಿಸಂ) ಎಂಬ ಹೊಸ ಕಲ್ಪನೆಯನ್ನು ಕೊಟ್ಟಿದ್ದೂ ಅವರೇ. ಬುದ್ಧನ ನಂತರ ಭಾರತೀಯ ಮೌಲ್ಯಗಳನ್ನು ಜಗತ್ತಿಗೆ ಕೊಂಡೊಯ್ದ ಹಾಗೂ ಅರಿವು ಮೊದಲ ವ್ಯಕ್ತಿಯೂ ವಿವೇಕಾನಂದ. ನಾವು ಆಗಾಗ ಉದಾಹರಿಸುವ Indianness,

ಭಾರತೀಯತೆ ಎಂಬ ಕಾನ್ಸೆಪ್‌ಟ್ ಕೊಟ್ಟಿದ್ದೇ ವಿವೇಕಾನಂದ. ತುಂಬ articulate AW, extempore ಆಗಿ ಮಾತನಾಡುತ್ತಿದ್ದ ವಿವೇಕಾನಂದರ ನುಡಿಗಳು ನಮ್ಮ ಸುಪ್ರೀಂಕೋರ್ಟ್‌ನ ಐತಿಹಾಸಿಕ ತೀರ್ಪಿಗೂ ದಿಕ್ಸೂಚಿಯಾಗಿವೆ. ಹೌದು, Hinduism is not just a religion,it’s a way of life’(ಹಿಂದುತ್ವವೆಂಬುದು ಒಂದು ಧರ್ಮ ಮಾತ್ರವಲ್ಲ, ಜೀವನ ವಿಧಾನವೂ ಹೌದು) ಎಂದು ಜಗತ್ತಿಗೆ ಹೇಳಿದ್ದು, ಮನವರಿಕೆ ಮಾಡಿಕೊಟ್ಟಿದ್ದೂ ವಿವೇಕಾನಂದ ಭಾರತದಲ್ಲಿ ಇಷ್ಟೆಲ್ಲಾ ಅಲ್ಪಸಂಖ್ಯಾತರನ್ನು ಕಾಣಲು ಹಿಂದೂಗಳು ಬಹುಸಂಖ್ಯಾತರಾಗಿರುವುದೇ ಕಾರಣ. ಹಿಂದೂಯಿಸಂ ಎಂಬುದು ಧರ್ಮಮಾತ್ರವಲ್ಲ, ಅದೊಂದು ಸ್ಪಿರಿಚ್ಯುಯಾಲಿಟಿ ಎಂದವರು ಅವರು. ಸ್ಪಿರಿಚ್ಯುಯೆಲ್ ಅಂದರೆ ತನ್ನ ಹಿತವೇ ಮುಖ್ಯ ಎಂಬ ಆಲೋಚನೆ ಬಿಟ್ಟು ಇತರರ ಶ್ರೇಯೋಭಿವೃದ್ಧಿಯ ಬಗ್ಗೆಯೂ ಯೋಚಿಸಬೇಕು ಎಂಬುದು. ಅವತ್ತು ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತೀಯತೆ, ಹಿಂದೂ ಧರ್ಮದ ಹಿರಿಮೆ, ಸಹಿಷ್ಣುತೆ ಬಗ್ಗೆ ವಿವೇಕಾನಂದರು ಆಡಿದ ಮಾತುಗಳನ್ನು ಕೇಳಿದ ಅಮೆರಿಕದ ಪ್ರತಿಷ್ಠಿತ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ತನ್ನ ಮರುದಿನದ ಆವೃತ್ತಿಯಲ್ಲಿChurch should be ashamed for sending its preachers to India?”

ಎಂದು ಬರೆದಿತ್ತು!!
ಹಾಗಾದರೆ ಸ್ವಾತಂತ್ರ್ಯ ಚಳವಳಿಗೆ ವಿವೇಕಾನಂದರ ಕೊಡುಗೆಯೇನು? ಹಾಗೆಂದು ಕೇಳಿದರೆ ನೇರವಾಗಿ ಅವರು ಭಾಗಿಯಾಗದಿದ್ದರೂ ಸ್ವಾತಂತ್ರ್ಯ ಹೋರಾಟಗಾರರಾದ ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ್ ಆಜಾದ್, ಭಗತ್‌ಸಿಂಗ್ ವಿವೇಕಾನಂದರಿಂದ ಪ್ರಭಾವಿತರಾಗಿದ್ದರು. ಈ ದೇಶದ ಮೇರು ನಾಯಕ ಮಹಾತ್ಮ ಗಾಂಧೀಜಿಯವರು, ‘ನಾನು ವಿವೇಕಾನಂದರ ಚಿಂತನೆ ಹಾಗೂ ವಿಚಾರಧಾರೆಯನ್ನು ಆಮೂಲಾಗ್ರವಾಗಿ ಓದಿದ್ದೇನೆ. ಹಾಗೆ ಓದಿದ ಮೇಲೆ ನನ್ನಲ್ಲಿದ್ದ ರಾಷ್ಟ್ರಪ್ರೇಮ ಸಹಸ್ರ ಹೆಚ್ಚಾಯಿತು’ ಎಂದು ಸ್ವತಃ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ Gandhiji is the father of the na on, then Vivekananda is the grandfather of the nation? ಎಂದು ಹೇಳಬಹುದಲ್ಲವೇ?!

ಒಂದು ಸಲ ಸ್ವಾಮಿ ವಿವೇಕಾನಂದರು ರೈಲಿನಲ್ಲಿ ಪ್ರಯಾಣಿಸುತ್ತಿರುತ್ತಾರೆ. ಎದುರಲ್ಲೇ ಇಬ್ಬರು ಫಿರಂಗಿಗಳು ಕುಳಿತಿರುತ್ತಾರೆ. ಅವರು ಸನ್ಯಾಸಿ ವಿವೇಕಾನಂದರನ್ನು ಕಂಡು ಗೇಲಿ ಮಾಡಲಾರಂಭಿಸುತ್ತಾರೆ, ಆವರಿಗೆ ಇಂಗ್ಲಿಷ್ ಬರುವುದಿಲ್ಲ ಎಂಬುದು ಅವರ ಊಹೆಯಾಗಿರುತ್ತದೆ. ಹಾಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ನಿಲ್ದಾಣದಲ್ಲಿ ವಿವೇಕಾನಂದರನ್ನು ಬಲ್ಲವರೊಬ್ಬರು ರೈಲು ಹತ್ತುತ್ತಾರೆ, ಅವರೊಂದಿಗೆ ವಿವೇಕಾನಂದರು ಬಹಳ ಸೊಗಸಾಗಿ ಇಂಗ್ಲಿಷ್‌ನಲ್ಲಿ ಮಾತನಾಡುವುದನ್ನು ಕಂಡು ದಂಗುಬಡಿದಂತಾದ ಫಿರಂಗಿಗಳಲ್ಲಿ ಒಬ್ಬ ವಿವೇಕಾನಂದರ ಬಳಿಗೆ ಬಂದು, ‘ನಿಮಗೆ ಇಂಗ್ಲಿಷ್ ಬರುವುದಿಲ್ಲವೆಂಬ ಕಾರಣಕ್ಕೆ ಏನೆಲ್ಲ ಮಾತನಾಡಿದೆವು. ಆದರೆ ನೀವೇಕೆ ಪ್ರತಿಕ್ರಿಯಿಸಲೂ ಇಲ್ಲ, ಕೋಪಿಸಿಕೊಳ್ಳಲೂ ಇಲ್ಲ’ ಎಂದು ಪ್ರಶ್ನಿಸುತ್ತಾನೆ. ಅಗ ವಿವೇಕಾನಂದರು ಹೇಳುತ್ತಾರೆ-‘ನಾನು ಮೂರ್ಖರನ್ನು ನೋಡುತ್ತಿರುವುದು ಇದೇ ಮೊದಲಲ್ಲ’! ಹಾಗಂತ ವಿವೇಕಾನಂದರು ಎಲ್ಲ ಸಂದರ್ಭಗಳಲ್ಲೂ ಸುಮ್ಮನಿರುತ್ತಿದ್ದರು ಎಂದು ಭಾವಿಸಬೇಡಿ!

ವಿಶ್ವಧರ್ಮ ಸಮ್ಮೇಳನ ಮುಗಿಸಿ ವಿವೇಕಾನಂದರು ಹಡಗಿನಲ್ಲಿ ವಾಪಸ್ಸಾಗುತ್ತಿರುತ್ತಾರೆ. ಅದೇ ಹಡಗಿನಲ್ಲಿ ಇಬ್ಬರು ಪಾದ್ರಿಗಳು ಮತಾಂತರ ಮಾಡಲು ಭಾರತಕ್ಕೆ ಆಗಮಿಸುತ್ತಿರುತ್ತಾರೆ. ವಿವೇಕಾನಂದರನ್ನು ಕಂಡ ಅವರು ಬಹಳ ಕೀಳಾಗಿ ಮಾತನಾಡಲು, ನಿಂದಿಸಲು ಆರಂಭಿಸುತ್ತಾರೆ. ವಿವೇಕಾನಂದರು ಏನೂ ಮಾತನಾಡುವುದಿಲ್ಲ. ಕೊನೆಗೆ ಪಾದ್ರಿಗಳು ಹಿಂದು ಧರ್ಮವನ್ನು, ಭಾರತವನ್ನು, ಭಾರತೀಯರನ್ನು ನಿಂದಿಸಲು ಆರಂಭಿಸುತ್ತಾರೆ. ಅದುವರೆಗೂ ಸುಮ್ಮನಿದ್ದ ದೃಢಕಾಯರಾದ ವಿವೇಕಾನಂದರು ಕುಪಿತಗೊಂಡು ಪಾದ್ರಿಗಳಿಬ್ಬರ ಕುತ್ತಿಗೆ ಪಟ್ಟಿ ಹಿಡಿದೆಳೆದು, ‘ಭಾರತ ಹಾಗೂ ಭಾರತೀಯರ ಬಗ್ಗೆ ಇನ್ನೊಂದು ಕೆಟ್ಟ ಮಾತನಾಡಿದರೆ ಸಮುದ್ರಕ್ಕೆಸೆಯುತ್ತೇನೆ’ ಎನ್ನುತ್ತಾರೆ. ಅವಕ್ಕಾದ ಬಾಯಿಮುಚ್ಚಿಕೊಳ್ಳುತ್ತಾರೆ. ಆದರೆ ಇದನ್ನು ಕಂಡು ವಿವೇಕಾನಂದರ ಶಿಷ್ಯಂದಿರಿಗೇ ಆಶ್ಚರ್ಯವಾಗುತ್ತದೆ ‘ನೀವೊಬ್ಬ ಸ್ವಾಮಿಯಾಗಿ ಈ ರೀತಿ ಕೋಪಿಸಿಕೊಳ್ಳುವುದು, ಹಿಂಸಿಸಲು ಹೋಗುವುದು ಸರಿಯೇ?’ ಎಂದು ಪ್ರಶ್ನಿಸುತ್ತಾರೆ.

ಆಗ ವಿವೇಕಾನಂದರು ಉತ್ತರಿಸುವ ಬದಲು ಶಿಷ್ಯಂದಿರನ್ನೇ ಪ್ರಶ್ನಿಸುತ್ತಾರೆ- ‘ನಿಮ್ಮ ತಾಯಿಯನ್ನು ಯಾರಾದರೂ ಕೆಣಕಿದರೆ, ಅವಮಾನಿಸಿದರೆ ಸುಮ್ಮನಿರುತ್ತೀರಾ? ಹಾಗೆ ಭಾರತ ಮಾತೆ ಕೂಡ ನನ್ನ ತಾಯಿ, ಭಾರತೀಯರು ನನ್ನ ಬಂಧುಗಳು. ಅವರನ್ನ ನಿಂದಿಸಿದರೆ, ಅಪಮಾನಿಸಿದರೆ ಸುಮ್ಮನಿರುವುದಕ್ಕಾಗುತ್ತದಾ?’ ಎನ್ನುತ್ತಾರೆ. ಮತಾಂತರದ ಬಗ್ಗೆ ಅವರು ಹೇಳಿದ್ದೇನು ಗೊತ್ತೆ?-‘ಹಿಂದೂವೊಬ್ಬ ಮತಾಂತರಗೊಂಡರೆ ಸಂಖ್ಯೆಯಲ್ಲಿ ಒಂದು ಕಡಿಮೆಯಾಗುವುದು ಮಾತ್ರವಲ್ಲ, ಒಬ್ಬ ಶತ್ರುವು ಸೃಷ್ಟಿಯಾದಂತೆ’. ಇಂತಹ ಸ್ವಾಮಿ ವಿವೇಕಾನಂದರು ಜನಿಸಿದ್ದು 1863, ಜನವರಿ 12ರಂದು. ನಿನ್ನೆ ತಾನೆ ಅವರ ಜನ್ಮದಿನವನ್ನು ದೇಶ ಆಚರಿಸಿತು. ಈ ದೇಶ ಹಾಗೂ ಸನಾತನ ಧರ್ಮವನ್ನು ತಾಯಿಯಂತೆ ಪ್ರೀತಿಸುವುದು, ಪೂಜಿಸುವುದು, ರಕ್ಷಿಸುವುದೇ ಅವರಿಗೆ ನಾವು ತೋರುವ ನಿಜವಾದ ಗೌರವ.

One thought on “ಅವರು ರಾಷ್ಟ್ರಪಿತನಾದರೆ, ಇವರು ಗ್ರಾಂಡ್‌ಫಾದರ್ ಆಫ್ ದಿ ನೇಶನ್!

  1. ಸ್ವಾತಂತ್ರ್ಯ ಹೋರಾಟಕ್ಕೆ ವಿವೇಕಾನಂದರ ಕೊಡುಗೆ ಏನೂ ಇಲ್ಲ. ಭಾರತದ ಸ್ವಾತಂತ್ರ್ಯದ ಬಗ್ಗೆ ಅವರು ಒಂದು ಮಾತನ್ನೂ ಆಡಿಲ್ಲ. ಸಂಶಯವಿದ್ದರೆ ಅವರ ಕೃತಿಶ್ರೇಣಿಯನ್ನು ಓದಿ.
    ಪ್ರತಾಪ ಸಿಂಹರು ಭಗತ್ ಸಿಂಗ್ ರವರನ್ನು ವಿವೇಕಾನಂದ ರಿಂದ ಪ್ರಭಾವಿತರಾದರು ಎಂದು ತಿಳಿಸಿದ್ದಾರೆ. ನಾನು ವಿವೇಕಾನಂದರಿಂದ ಪ್ರಭಾವಿತನಾದೆ ಎಂದು ಎಲ್ಲಿಯಾದರೂ ಭಗತ್ ಸಿಂಗ್ ಹೇಳಿದ್ದನೇ? ಇಲ್ಲ. ವಾಸ್ತವವಾಗಿ, ಭಗತ್ ಸಿಂಗ್ ಆರ್ಯಸಮಾಜದ ಕುಟುಂಬದವನು. ಅವನ ತಾತ ಆರ್ಯಸಮಾಜದ ಪ್ರಚಾರಕರಾಗಿದ್ದರು, ಅವನ ಚಿಕ್ಕಪ್ಪಂದಿರು ಕ್ರಾಂತಿಕಾರಿಗಳಾಗಿದ್ದರು, ದೇಶ ಪ್ರೇಮವನ್ನು ಅವರು ಆರ್ಯಸಮಾಜದಿಂದಲೇ ಪಡೆದಿದ್ದರು, ಅವರ ಗುರು ಪಂಜಾಬಿನ ಸಿಂಹ ಎಂದು ಕರೆಯಲ್ಪಡುತ್ತಿದ್ದ ಸುಪ್ರಸಿದ್ಧ ಆರ್ಯಸಮಾಜ ನೇತಾರ, ಲಾಲಾ ಲಜಪತ್ ರಾಯ್.
    ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿದವರು ಸ್ವಾಮಿ ದಯಾನಂದರು, ಅದ್ದರಿಂದಲೇ ವೀರ ಸಾವರಕರ್ ಅವರನ್ನು ಭಾರತದ ಮೊದಲ ಸ್ವಾತಂತ್ರ್ಯ ಯೋದ್ಧ ಎಂದು ಕೊಂಡಾಡಿದ್ದಾರೆ. ಸ್ವಾಮಿ ದಯಾನಂದರು ತಮ್ಮ ಮಹೋನ್ನತ ಗ್ರಂಥ ” ಸತ್ಯಾರ್ಥ ಪ್ರಕಾಶ” ದಲ್ಲಿ ಅವರು ವಿದೇಶೀ ರಾಜ್ಯಕ್ಕಿಂತ ಸ್ವದೇಶ ರಾಜ್ಯವೇ ಉತ್ತಮ ಎಂದು ಹೇಳಿದ್ದಾರೆ. ಆರ್ಯ ಸಮಾಜ ಸ್ಥಾಪನೆಗೊಂಡದ್ದು 1875 ರಲ್ಲಿ ಅಂದಿನಿಂದಲೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ವಿದ್ಯುತ್ ವಾಗಿ ಆರಂಭವಾಯಿತು, ಸ್ವಾಮಿ ದಯಾನಂದರು ಸ್ವತಃ 1857 ರಲ್ಲಿನ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದರು, ಈ ಬಗ್ಗೆ ಅವರುಹೆಚ್ಚು ಹೇಳಲು ಕೆಲವು ಕಾರಣಗಳಿಂದ ವಿವರನೀಡಲಿಲ್ಲ
    ಸ್ವಾಮಿ ವಿವೇಕಾನಂದರ ರಾಮಕೃಷ್ಣ ಮಿಷನ್ ಎಷ್ಟರ ಮಟ್ಟಿಗೆ ಸ್ವಾತಂತ್ರ್ಯ ಆಂದೋಳನದಲ್ಲಿ ಭಾಗವಹಿಸಿತು ಎಂದು ಪ್ರತಾಪ ಸಿಂಹರೇ ಹೇಳಬೇಕು. ಒಂದು ಮಾತು, ವಿವೇಕಾನಂದರು ಮತಾಂತರವನ್ನು ಖಂಡಿಸಿದರು, ಆದರೆ ಬಲಾತ್ಕಾರವಾಗಿ ಮತಾಂತರ ಗೊಂಡ ವೈಕ್ತಿಗಳನ್ನು ಪುನಃ ಹಿಂದೂ ಸಮಾಜಕ್ಕೆ ವಾಪಸು ತರುವ ಏನಾದರೂ ಕಾರ್ಯಕ್ರಮ ಮಾಡಿದರೇ ? ಇಲ್ಲ. ವಿದೇಶಗಳಲ್ಲಿ ಅಥವಾ ಭಾರತದಲ್ಲಿ ಒಬ್ಬ ಅಹಿಂದೂವನ್ನು ಅವರು ತಮ್ಮ ಮಾತೃಧರ್ಮಕ್ಕೆ ಕರೆತರಲಿಲ್ಲ. ಇನ್ನು ಎಲ್ಲಾ ಮತಗಳು ಒಂದೇ ಎನ್ನುವ ಅಪ್ಪಟ ಸುಳ್ಳನ್ನು ರಾಮಕೃಷ್ಣ ಮಿಷನ್ ಹೇಳಿಕೊಂಡು ಬರುತ್ತಿದೆ. ಈಗಂತೂ ರಾಮಕೃಷ್ಣ ಮಿಷನ್ ನಲ್ಲಿ ಕ್ರಿಸ ಮಿಸ್, ಈದ್ ಮಿಲಾದ ಆಚರಣೆ ಮಾಡಲು ಶುರು ಮಾಡಿದೆ. ಮಾರ್ಕ್ಸಿಸ್ಟ್ ನವರ ತೊಂದರೆ ಯಿಂದ ತಪ್ಪಿಸಿಕೊಳ್ಳಲು ಅವರು ತಾವು ಹಿಂದೂಗಳೇ ಅಲ್ಲ ಎಂದು ಸುಪ್ರೀಂ ಕೋರ್ಟ್ ನ ಮುಂದೇ ಹೇಳಿದರು, ಇರಲಿ, ಸ್ತ್ರೀ ಸ್ವಾತಂತ್ರ್ಯ ,ಅವರ ಶಿಕ್ಷಣ, ದಲಿತೋದ್ಧಾರಕ್ಕೆ ವಿವೇಕಾನಂದರ ಕೊಡುಗೆಯೇನು?
    ಗೋಹತ್ಯೆ ನಿಷೇಧ ಮಾಡಬೇಕೆಂದು ಸಂಘ ಪರಿವಾರದ ಕೂಗು. ಆದರೆ ವಿವೇಕಾನಂದರು ಮಾಂಸಾಹಾರ ಭಕ್ಷಣೆ ಯನ್ನು ಸಮರ್ಥನೆ ಮಾಡಿ ಗೋ ಹತ್ಯೆ ಪರವಾಗಿ ಮಾತನಾಡಿದ್ದಾರೆ. ಇನ್ನು ಅವರಲ್ಲಿ ಸ್ವದೇಶ, ಸ್ವಭಾಷೆಯ ಬಗ್ಗೆ ಏನು ಅಭಿಮಾನವಿತ್ತು? ಅವರ ಭಾಷಣವೆಲ್ಲಾ ಬರೀ ಇಂಗ್ಲೀಷ್ ನಲ್ಲಿ ಮಾತ್ರ.
    ಇದಕ್ಕೆ ತದ್ವಿರುದ್ಧವಾಗಿ, ಸ್ವಾಮಿ ದಯಾನಂದರು ಸ್ವಾತಂತ್ರ್ಯ ಹೋರಾಟಕ್ಕೆ ಕರೆ ಕೊಟ್ಟರು, ಗೋಹತ್ಯಾ ನಿಷೇಧವನ್ನು ಒತ್ತಾಯಿಸಿ ಪುಸ್ತಕಗಳನ್ನು ಬರೆದರು, ಈ ಸಂಬಂಧ ಅವರು 2 ಕೋಟಿಗೂ ಹೆಚ್ಚು ಸಹಿಗಳನ್ನು ಪಡೆದಿದ್ದರು, ಈ ಕುರಿತಂತೆ ಇಂಗ್ಲೇಡ್ ಗೆ ಹೋಗಿ ಅಲ್ಲಿ ವಿಕ್ಟೋರಿಯಾ ರಾಣಿಯನ್ನು ಭೇಟಿ ಮಾಡಬೇಕಿಂದಿದ್ದರು, ಆದರೆ ಅವರ ಅಸಹಜ ಸಾವು ಇದಕ್ಕೆ ಅಡ್ಡಿ ಬಂದಿತು,
    ವಿವೇಕಾನಂದರು ವೇದಗಳ ಬಗ್ಗೆ ಯಾವುದೇ ತಿಳುವಳಿಕೆ ಇರಲಿಲ್ಲ. ದುರುದ್ಧೇಶದಿಂದ ಕೂಡಿದ ಮ್ಯಾಕ್ಸ್ ಮುಲೆರ ಅವರ ಋಗ್ವೇದ ಭಾಷ್ಯವನ್ನು ಓದಿ, ಅದರಲ್ಲಿನ ಅಪಾರ್ಥಗಳನ್ನೇ ಸತ್ಯವೆಂದು ನಂಬಿದ್ದರು. ಅದರೆ ದಯಾನಂದರು ವೇದಗಳಿಗೆ ನೂತನ, ಸಾರ್ವಕಾಲಿಕ, ಸಾರ್ವದೇಶಿಕ, ಸಾರ್ವಭೌಮ ಭಾಷ್ಯವನ್ನು ಬರೆದರು, ಈ ಬಾಷ್ಯವನ್ನು ಓದಿಗೊಂಡೇ ಮಾಕ್ಯ್ ಮುಲೆರ್ ಅವರು ವೇದಗಳ ಬಗ್ಗೆ ಇದ್ದ ತಮ್ಮ ತಪ್ಪು ಅಭಿಪ್ರಾಯಗಳನ್ನು ತಿದ್ದುಕೊಳ್ಳುವುದಕ್ಕೆ ಆರಂಬಿಸಿದರು
    ವೀರ ಸಾವರಕರ್, ಲಾಲಾ ಲಜಪತ್ ರಾಯ್, ಶ್ರದ್ದಾನಂದ, ಭಾಯಿ ಪರಮಾನಂದ, ಕ್ರಾಂತಿಕಾರಿಗಳಾದ ರಾಮ್ ಪ್ರಸಾದ್ ಬಿಸ್ಮಿಲ್, ಸುಖದೇವ್ , ಭಗತ್ ಸಿಂಗ್ ಇವರೆಲ್ಲರೂ ಸ್ವಾಮಿ ದಯಾನಂದರ ವಿಚಾರಗಳಿಂದ ಪ್ರೇರಿತರಾಗಿ, ಸ್ವಾತಂತ್ರ್ಯ ಕ್ಕೆ ಹೋರಾಡಿ ಹುತಾತ್ಮರಾದರು, ಒಬ್ಬನೇ ರಾಮಕೃಷ್ಣ ಮಿಷನ್ ನ್ನಿನ ಸದಸ್ಯನೂ ಇಂತಹ ಕಾರ್ಯವನ್ನು ಎಸಗಿಲ್ಲ
    ಆದುದರಿಂದಲೇ, ಲೋಕ ಸಭೆಯ ಮಾಜಿ ಸ್ಪೀಕರ್, ಅನಂತ ಶಯನಂ ಅಯ್ಯಂಗಾರ್ [ ಇವರು ಸಂಪ್ರದಾಯಿಗಳಾಗಿದ್ದರೂ, ಆರ್ಯಸಮಾಜದ ಪ್ರಗತಿ ಪರ ಧೋರಣೆಯನ್ನು ಮೆಚ್ಚಿದ್ದರು] ತಮ್ಮ ಭಾಷಣದಲ್ಲಿ ಗಾಂಧೀಜಿಯವರ ರಾಷ್ಟ್ರ ಪಿತ ರಾದರೆ, ಸ್ವಾಮಿ ದಯಾನಂದರ ರಾಷ್ಟ್ರದ ಪಿತಾಮಹ ಎಂದು ತಮ್ಮ ಗೌರವವನ್ನು ಸಮರ್ಪಿಸಿದ್ದಾರೆ. ಅಂದ ಹಾಗೆ, ಗಾಂಧೀಜಿಯವರ ವಿಚಾರಗಳಿಗೆ ಪ್ರೇರಣೆಯಾದರೂ ಎಲ್ಲಿಂದ ಬಂದಿತು? ಗಾಂಧೀಜಿಯವರು ಗೋಪಾಲ ಕೃಷ್ಣ ಗೋಖಲೆಯವರನ್ನು ತಮ್ಮ ರಾಜಕೀಯ ಗುರುಗಳೆಂದು ಕರೆದುಕೊಂಡಿದ್ದಾರೆ. ಗೋಪಾಲ ಕೃಷ್ಣ ಗೋಖಲೆಯವರ ಗುರುಗಳು ಮಹಾದೇವ ಗೋವಿಂದ ರಾನಡೆಯವರು, ರಾನಡೆಯವರು ದಯಾನಂದರ ಶಿಷ್ಯರಾಗಿದ್ದರು, ಆದುದರಿಂದಲೇ ಗಾಂಧೀಜಿಯವರನ್ನು ಒಂದರ್ಥದಲ್ಲಿ ದಯಾನಂದರ ಅನುಯಾಯಿಗಳೆಂದು ಹೇಳಬಹುದು,
    ಪಟ್ಟಾಬಿ ಸೀತಾರಾಮಯ್ಯನವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು, ಇವರು ಕಾಂಗ್ರೆಸ್ ಪಾರ್ಟಿಯ ಇತಿಹಾಸವನ್ನು ಬರೆದಿದ್ದಾರೆ. ಆ ಗ್ರಂಥದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಶೇ60% ಜನ ಆರ್ಯಸಮಾಜದವರು ಎಂದು ಹೇಳಿದ್ದಾರೆ. ಗಾಂಧೀಜಿಯವರು ಸಹ ಇದನ್ನು ಅನುಮೋದಿಸಿದ್ದಾರೆ.
    ಸಂಕ್ಷಿಪ್ತವಾಗಿ ಹೇಳುವುದಾದರೆ, ವಿವೇಕಾನಂದರು ಕೆಲವು ಉತ್ತೇಜಕವಾಗಿ ಹಿಂದೂ ಧರ್ಮದ ಬಗ್ಗೆ ಅಭಿಮಾನದಿಂದ ಮಾತನಾಡಿದ್ದಾರೆ. ಹೊರತು, ಹಿಂದೂ ಸಮಾಜದ ಸಂಘಟನೆ, ಶುದ್ದಿ ಇತ್ಯಾದಿಗಳಿಗೆ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆ ಶೂನ್ಯವಾಗಿದೆ. ಇದನ್ನು ನಾವು ನಿಷ್ಪಕ್ಷವಾಗಿ ಅರಿತು, ನಮ್ಮ ಹಿಂದೂ ಸಮಾಜದ ಏಳಿಗೆ ಮತ್ತು ಅಭಿವೃದ್ಧಿ ಗೆ ಹಾಗೂ ಒಂದು ಸಮ, ಮೌಡ್ಯರಹಿತ ಸಮಾಜದ ನಿರ್ಮಾಣಕ್ಕೆ ದುಡಿದ ಆರ್ಯಸಮಾಜದ ಸಂಸ್ಥಾಪಕ ದಯಾನಂದರನ್ನು ನಮ್ಮ ಆದರ್ಶವಾಗಿ ಇಟ್ಟುಕೊಳ್ಳುವುದು ಉತ್ತಮ

Leave a Reply

Your email address will not be published. Required fields are marked *

fourteen + fifteen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

 

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

Back To Top