About Us Advertise with us Be a Reporter E-Paper

ಅಂಕಣಗಳು

ಭದ್ರಾಪಾರ್ಕ್ ನಿರ್ಮಾಣಕ್ಕಿದು ಸಕಾಲ!

ಬಿ.ಜೆ. ವಿನಯಾದಿತ್ಯ

ರಾಜ್ಯದಲ್ಲಿ ನದಿಗಳಿಗೆ ಅಡ್ಡಲಾಗಿ ಕಟ್ಟಲಾದ ಜಲಾಶಯಗಳು ಆಧುನಿಕತೆಯನ್ನು ಮೆರೆದವು. ಅದಕ್ಕೂ ಮುಂಚಿತವಾಗಿ  ಮತ್ತು ಶಿವಮೊಗ್ಗ ಜಿಲ್ಲೆಗೆ ಬೆಸೆದುಕೊಂಡಿರುವ ಭದ್ರಾ ನದಿಯ ಹಿನ್ನೀರು, ಸಹ್ಯಾದ್ರಿ ಮಡಿಲನ್ನು ಅಪ್ಪಿಕೊಂಡಿದೆ. 1957ರಲ್ಲಿ ಭದ್ರಾ ನದಿಯ ಸುತ್ತಲೂ ವಾಸಿಸುತ್ತಿದ್ದ ಪ್ರಾಚೀನ ಬುಡಕಟ್ಟು ಸಮುದಾಯಗಳು ಅನಂತರ ಕಣ್ಮರೆಯಾದವು. ಡ್ಯಾಂ ನಿರ್ಮಾಣಕ್ಕಾಗಿ ಹಲವಾರು ಮರಗಳು ನೆಲಸಮವಾದವು. ಪ್ರಸ್ತುತ ಜಲಾಶಯದ ಹಿನ್ನೀರಿಗೆ ಹಬ್ಬಿಕೊಂಡಿರುವ ತಡಸ, ಸಾವೆ ಗ್ರಾಮಗಳ ಸಮೀಪದ ಸುಕಾಲಹಟ್ಟಿ ಬಂಗಲೆಯ ಹತ್ತಿರ ಜನಸಮೂಹ ವಾಸಿಸುತ್ತಿದೆ.

ಇಂದು ಜಲಾಶಯದ ಕ್ರೆಸ್‌ಟ್ಗೇಟುಗಳಿಂದ ಜಲಧಾರೆ ಭರ್ಜರಿ ಭೋರ್ಗರೆತದೊಂದಿಗೆ ಧುಮ್ಮಿಕ್ಕುತ್ತಿದೆ. ಈ ತುಂಬಿದ ಜಲಾಶಯವನ್ನು ಕಣ್ತುಂಬಿಕೊಳ್ಳುಲು  ಪ್ರವಾಸಿಗರ ಸಂಖ್ಯೆ ಅಪಾರ. ಜಲಾಶಯ ಭರ್ತಿಯಾದಾಗ ಬಾಗಿನ ಅರ್ಪಿಸಲು ಬರುವ ರಾಜಕಾರಣಿಗಳು ಪುನಃ ಆಗಮಿಸುವುದು ಬಾಗಿನ ಬಿಡುವ ಕಾರ್ಯಕ್ರಮಕ್ಕೆ! ರಾಜಕಾರಣಿಗಳು ಡ್ಯಾಂಗೆ ಬರುವರೆಂದರೆ ಅವರ ಹಿಂದೆ ಸುಮಾರು 4 ರಿಂದ 5 ಸಾವಿರ ಜನಸಾಗರ ಹರಿದು ಬರುತ್ತದೆ. ಭದ್ರಾ ಜಲಾಶಯದಲ್ಲಿ ಸಾರ್ವಜನಿಕ ಉದ್ಯಾನವನ ಇಲ್ಲದಿರುವುದು ನಿಜಕ್ಕೂ ವಿಷಾದನೀಯ ವಿಚಾರ. ಜಲಾಶಯದ ಮಖ್ಯದ್ವಾರದ ಬಳಿ ಕಸವನ್ನು ಬಿತ್ತರಿಸುವ ರಸ್ತೆ ಬದಿಯ ತಾತ್ಕಾಲಿಕ ಅಂಗಡಿಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಸಾರ್ವಜನಿಕರು  ಸೊಬಗನ್ನು ವೀಕ್ಷಿಸಿ ವಿಶ್ರಮಿಸಲು ಭದ್ರಾ ಉದ್ಯಾನವನದ ಅವಶ್ಯಕತೆ ಅಗತ್ಯವಾಗಿ ಬೇಕಿದೆ. ಪಾರ್ಕನ್ನು ನಿರ್ಮಾಣ ಮಾಡಿ ಒಬ್ಬರಿಗೆ 5ರು. ಎನ್ನುವಂತೆ ಪ್ರವೇಶ ಶುಲ್ಕ ನಿಗದಿಪಡಿಸಿದರೆ, ಆದಾಯವೂ ಹೆಚ್ಚುತ್ತದೆ. ಅಲ್ಲದೆ ಪ್ರವಾಸಿಗರ ಸಂಖ್ಯೆ ದ್ವಿಗುಣವಾಗುತ್ತದೆ. ಜಲಸಂಪನ್ಮೂಲ ಇಲಾಖೆ ಭದ್ರಾ ಜಲಾಶಯದ ಅಭಿವೃದ್ದಿಗೆ ಮುಂದಾಗಬೇಕಿದೆ. ಅಲ್ಲದೆ ರಾಜ್ಯದಲ್ಲಿರುವ ಪ್ರತಿಯೊಂದು ಜಲಾಶಯಕ್ಕೂ ಸಾರ್ವಜನಿಕ ಉದ್ಯಾನವನ ನಿರ್ಮಾಣವಾಗಲು ಸರಕಾರದ ಸಹಕಾರ ಅತ್ಯವಶ್ಯಕ. ಭದ್ರಾ ಜಲಾಶಯವನ್ನು ರಾಜ್ಯದ ಮಾದರಿ ಜಲಾಶಯವನ್ನಾಗಿ ಮಾಡುವ ಮಹತ್ಕಾರ್ಯ ಸರಕಾರದ ಮೇಲಿದೆ.

Tags

Related Articles

Leave a Reply

Your email address will not be published. Required fields are marked *

Language
Close