About Us Advertise with us Be a Reporter E-Paper

Breaking Newsದೇಶಪ್ರಚಲಿತ

ಭಗತ್ ಸಿಂಗ್ ಭಯೋತ್ಪಾದಕ ಎಂದ ಜಮ್ಮು ಕಾಶ್ಮೀರದ ಪ್ರೊಫೆಸರ್

ಜಮ್ಮು-ಕಾಶ್ಮೀರ: ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಭಗತ್ ಸಿಂಗ್ ಅವರನ್ನು ಭಯೋತ್ಪಾದಕ ಎಂದು ಜಮ್ಮು ಕಾಶ್ಮೀರದ ವಿಶ್ವವಿದ್ಯಾಲಯ ಪ್ರೊಫೆಸರ್ ಮೊಹಮ್ಮದ್ ತಾಜುದ್ದೀನ್ ಅವರು ಹೇಳಿರುವುದಾಗಿ ಆರೋಪಿಸಿ ವಿಶ್ವವಿದ್ಯಾಲಯದ ಕೆಲವು ವಿದ್ಯಾರ್ಥಿಗಳು ದೂರು ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಪ್ರೊಫೆಸರ್ ಮೊಹಮ್ಮದ್ ಸುಮಾರು 2 ಗಂಟೆಗಳ ಕಾಲ ನೀಡಿದ ಉಪನ್ಯಾಸದಲ್ಲಿ ಭಗತ್ ಸಿಂಗ್ ಅವರನ್ನು ಭಯೋತ್ಪಾದಕ ಎಂದು ಉಲ್ಲೇಖಿಸಿರುವ 25 ಸೆಕೆಂಡ್‌ನ ಕ್ಲಪ್ ಅನ್ನು ಕಟ್ ಮಾಡಿ ಪುರಾವೆಯನ್ನಾಗಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಉಪಕುಲಪತಿಗೆ ದೂರು ನೀಡಿದ್ದಾರೆ ಎಂದು ವರದಿ ವಿವರಿಸಿದೆ.

ಉಪಕುಲಪತಿ ಮನೋಜ್ ಕೆ ಧಾರ್ ಅವರು ಮಾಧ್ಯಮಗಳ ಜೊತೆ ಮಾತನಾಡುತ್ತ, ದೂರನ್ನು ದಾಖಲಿಸಿರುವ ಬಗ್ಗೆೆ ಅವರು ಖಚಿತಪಡಿಸಿದ್ದಾರೆ. ಅಲ್ಲದೇ ಈ ಘಟನೆ ಬಗ್ಗೆೆ ತನಿಖೆ ನಡೆಸಲು ಆರು ಜನರನ್ನೊಳಗೊಂಡ ಸಮಿತಿಯನ್ನು ನಿಯೋಜಿಸಲಾಗಿದೆ. ವಿಚಾರಣೆ ಪೂರ್ಣಗೊಳ್ಳುವವರೆಗೂ ಆರೋಪಿತ ಪ್ರೊಫೆಸರ್‌ ಪಾಠ ಮಾಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ ಎಂಬುದಾಗಿ ಉಪಕುಲಪತಿ ತಿಳಿಸಿದ್ದಾರೆ.

‘ಕಳೆದ ಗುರುವಾರ ಕೆಲವು ವಿದ್ಯಾರ್ಥಿಗಳು ಸಂಜೆ ನನ್ನ ಬಂದು ಭೇಟಿಯಾಗಿ, ಈ ಘಟನೆ ಬಗ್ಗೆೆ ಮಾಹಿತಿ ನೀಡಿದ್ದರು. ಅಷ್ಟೇ ಅಲ್ಲ ವಿಡಿಯೋ ಸಿಡಿಯನ್ನು ಸಾಕ್ಷಿಯಾಗಿ ನೀಡಿದ್ದರು. ಕೂಡಲೇ ನಾನು ತನಿಖೆ ನಡೆಸಲು ಸಮಿತಿಯನ್ನು ರಚಿಸಿದ್ದೆ ’ ಎಂದು ಉಪಕುಲಪತಿ ಧಾರ್ ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close