ಶಿವನಿಗೆ ಶಿವರಾತ್ರಿಯಂದೇ ವಿಶೇಷ ಪೂಜೆಯೇಕೆ?

Posted In : ಸಂಗಮ, ಸಂಪುಟ

ಸಂಕಲನ : ಶ್ರೀ ಮೋಹನ ಗೌಡ, ಬೆಂಗಳೂರು

ಮಾಘ ಕೃಷ್ಣ ತ್ರಯೋದಶಿಯನ್ನು ಮಹಾಶಿವರಾತ್ರಿ ಎನ್ನುತ್ತಾರೆ. ಈ ವ್ರತವು ಕಾಮ್ಯ ಮತ್ತು ನೈಮಿತ್ತಿಕ ಹೀಗೆ ಎರಡು ವಿಧವಾಗಿದೆ. ಉಪವಾಸ, ಪೂಜೆ ಮತ್ತು ಜಾಗರಣೆ ಇವು ಈ ವ್ರತದ ಮೂರು ಅಂಗಗಳಾಗಿವೆ. ಶಿವನು ಈ ವ್ರತದ ಪ್ರಧಾನ ದೇವತೆಯಾಗಿದ್ದಾನೆ. ಮಹಾಶಿವರಾತ್ರಿಯ ದಿನ ಶಿವತತ್ತ್ವವು 1000 ಪಟ್ಟು ಹೆಚ್ಚು ಕಾರ್ಯ ನಿರತವಾಗಿರುತ್ತದೆ. ಶಿವತತ್ತ್ವದ ಲಾಭವು ಹೆಚ್ಚು ಪ್ರಮಾಣದಲ್ಲಿ ಸಿಗಲು ಮಹಾಶಿವರಾತ್ರಿಯ ದಿನ ಭಾವಪೂರ್ಣವಾಗಿ ಶಿವನ ಪೂಜೆ- ಅರ್ಚನೆ ಹಾಗೂ ಓಂ ನಮಃ ಶಿವಾಯ ನಾಮಜಪವನ್ನು ಮಾಡಬೇಕು. ಈ ವರ್ಷ ಮಹಾಶಿವರಾತ್ರಿಯು ಫೆಬ್ರುವರಿ 13 ರಂದು ಇದೆ.

ಶಿವನಿಗೆ ಬಿಲ್ವಪತ್ರೆಯನ್ನು ಯಾಕೆ ಅರ್ಪಿಸುತ್ತಾರೆ? ಮತ್ತು ಅದರ ಮಹತ್ವವೇನು?
ಬಿಲ್ವಪತ್ರೆ : ಶಿವಲಿಂಗದಲ್ಲಿ ಆಹತ (ಶಿವಲಿಂಗದ ಮೇಲೆ ಬೀಳುವ ನೀರಿನ ಘರ್ಷಣೆಯಿಂದ ಉಂಟಾಗುವ) ನಾದ ಮತ್ತು ಅನಾಹತ ನಾದ ಹೀಗೆ 2 ಪವಿತ್ರಕಗಳಿರುತ್ತವೆ. ಈ ಎರಡು ಪವಿತ್ರಕಗಳು ಮತ್ತು ಬಿಲ್ವಪತ್ರೆಯಲ್ಲಿನ ಪವಿತ್ರಕ ಹೀಗೆ ಮೂರು ಪವಿತ್ರಕಗಳನ್ನು ಆಕರ್ಷಿಸಲು 3 ಎಲೆಗಳುಳ್ಳ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುತ್ತಾರೆ. ಎಳೆಯ ಬಿಲ್ವಪತ್ರೆಯು ಆಹತ (ನಾದಭಾಷೆ) ಮತ್ತು ಅನಾಹತ (ಪ್ರಕಾಶ ಭಾಷೆ) ಧ್ವನಿಗಳನ್ನು ಒಂದುಗೂಡಿಸಬಲ್ಲದು. ಬಿಲ್ವಪತ್ರೆಯನ್ನು ಶಿವಲಿಂಗದ ಮೇಲೆ ಕೆಳಮುಖವಾಗಿಟ್ಟು ತೊಟ್ಟನ್ನು ನಮ್ಮ ಕಡೆಗೆ ಬರುವಂತೆ ಅರ್ಪಿಸುತ್ತಾರೆ. ಹೀಗೆ ಮಾಡುವುದರಿಂದ ಮೂರೂ ಎಲೆಗಳಿಂದ ಒಟ್ಟಿಗೆ ಬರುವ ಶಕ್ತಿಯು ನಮ್ಮ ಕಡೆಗೆ ಬರುತ್ತದೆ. ಈ ಪವಿತ್ರಕಗಳ ಒಟ್ಟು ಗೂಡಿದ ಶಕ್ತಿಯಿಂದ ತ್ರಿಗುಣಗಳು ಕಡಿಮೆಯಾಗಲು ಸಹಾಯವಾಗುತ್ತದೆ.

ಬಿಲ್ವಪತ್ರೆಯಲ್ಲಿ ಶೇ. 2 ರಷ್ಟು ಶಿವತತ್ತ್ವವಿರುತ್ತದೆ. ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಅರ್ಪಿಸಿದಾಗ ಬಿಲ್ವಪತ್ರೆಯ ತುಂಬಿ(ತೊಟ್ಟಿ)ನಲ್ಲಿ ಸಗುಣ ಶಿವತತ್ತ್ವವು ಜಾಗೃತವಾಗಿ ಅದರಿಂದ ಚೈತನ್ಯ ಮತ್ತು ಶಿವತತ್ತ್ವವು ಪ್ರಕ್ಷೇಪಿತವಾಗತೊಡಗುತ್ತದೆ. ಬಿಲ್ವವು ಶಿವಲಿಂಗದಲ್ಲಿರುವ ಶೇ. 5 (20) ರಷ್ಟು ಶಿವತತ್ತ್ವವನ್ನು ತನ್ನಲ್ಲಿ ಹೀರಿಕೊಳ್ಳುತ್ತದೆ. ನೀರಿನಲ್ಲಿ, ಧಾನ್ಯಗಳಲ್ಲಿ ಶಿವತತ್ತ್ವದಿಂದ ತುಂಬಿದ ಬಿಲ್ವಪತ್ರೆಗಳನ್ನು ಹಾಕಿಟ್ಟರೆ ಅದರಲ್ಲಿನ ಶಿವತತ್ತ್ವವು ಅವುಗಳಲ್ಲಿಯೂ ಸೇರುತ್ತದೆ.

ಬಿಲ್ವಾರ್ಚನೆ : ಓಂ ನಮಃ ಶಿವಾಯ’ ಮಂತ್ರವನ್ನು ಜಪಿಸುತ್ತಾ ಅಥವಾ ಭಗವಾನ ಶಂಕರನ ಒಂದು ಹೆಸರನ್ನು ಉಚ್ಚರಿಸುತ್ತಾ ಒಂದೊಂದೆ ಬಿಲ್ವಪತ್ರೆಯನ್ನು ಶಿವಲಿಂಗಕ್ಕೆ ಅರ್ಪಿಸುವುದನ್ನು ಬಿಲ್ವಾರ್ಚನೆ ಎನ್ನುತ್ತಾರೆ. ಬಿಲ್ವಪತ್ರೆಗಳನ್ನು ಇಡೀ ಶಿವಲಿಂಗವು ಪೂರ್ತಿಯಾಗಿ ಮುಚ್ಚುವಂತೆ ಅರ್ಪಿಸಬೇಕು. ಬಿಲ್ವಪತ್ರೆಗಳನ್ನು ಮೂರ್ತಿಯ ಚರಣಗಳಿಂದ (ಲಿಂಗದ ಕೆಳಭಾಗದಿಂದ) ಅರ್ಪಿಸಲು ಪ್ರಾರಂಭಿಸಿ ಮೇಲ್ಬದಿಗೆ ಹೋಗಬೇಕು. ಇದರಿಂದ ಬಿಲ್ವಾರ್ಚನೆಯನ್ನು ಚರಣಗಳಿಂದ ಪ್ರಾರಂಭಿಸಿದ ಲಾಭವಾಗುತ್ತದೆ. ಅಲ್ಲದೇ ಬಿಲ್ವಪತ್ರೆಗಳನ್ನು ಸರಿಯಾಗಿ ಅರ್ಪಿಸಿ ಇಡೀ ಮೂರ್ತಿಯನ್ನು ಮುಚ್ಚಲು ಸಾಧ್ಯವಾಗುತ್ತದೆ.  ಶಿವಪೂಜೆಯ ಕೆಲವು ವೈಶಿಷ್ಟ್ಯಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ

ಶಿವಪೂಜೆಯಲ್ಲಿ ಶಂಖದ ಪೂಜೆಯನ್ನು ಮಾಡುವುದಿಲ್ಲ ಮತ್ತು ಶಿವನಿಗೆ ಶಂಖದ ನೀರಿನಿಂದ ಅಭಿಷೇಕವನ್ನು ಮಾಡುವುದಿಲ್ಲ. ದೇವರ ಮೂರ್ತಿಯಲ್ಲಿ ಪಂಚಾಯತನದ ಸ್ಥಾಪನೆ ಇದ್ದರೆ, ಅದರಲ್ಲಿನ ಬಾಣಲಿಂಗದ ಮೇಲೆ ಶಂಖೋದಕ ವನ್ನು ಹಾಕಬಹುದು; ಆದರೆ ಮಹಾದೇವನ ಲಿಂಗವಿರುವ ಬಾಣಲಿಂಗಕ್ಕೆ ಶಂಖೋದಕದಿಂದ ಅಭಿಷೇಕ ಮಾಡಬಾರದು.’
ಶಾಸ್ತ್ರ : ಶಿವಲಿಂಗದಲ್ಲಿ ಪಾಣಿಪೀಠದ ರೂಪದಲ್ಲಿ ಸ್ತ್ರೀತತ್ತ್ವವು ಇರುವುದರಿಂದ ಸ್ತ್ರೀತತ್ತ್ವವಿರುವ ಶಂಖದಲ್ಲಿನ ನೀರನ್ನು ಮತ್ತೊಮ್ಮೆ ಹಾಕುವ ಅವಶ್ಯಕತೆಯಿರುವುದಿಲ್ಲ. ಬಾಣಲಿಂಗದ ಜತೆಗೆ ಪಾಣಿಪೀಠವು ಇಲ್ಲದಿರುವುದರಿಂದ ಅದಕ್ಕೆ ಶಂಖದ ನೀರಿನಿಂದ ಅಭಿಷೇಕವನ್ನು

* ದೇವಸ್ಥಾನದಲ್ಲಿ ಮಹಾದೇವನ ಪೂಜೆಯನ್ನು ಮಾಡುವಾಗ ಶಂಖಪೂಜೆ ಮಾಡುವುದು ಉಚಿತವಲ್ಲ; ಆದರೆ ಆರತಿಯ ಮೊದಲು ಮಾಡುವ ಶಂಖ ನಾದವು ಯೋಗ್ಯವಾಗಿದೆ ಮತ್ತು ಅದನ್ನು ಅವಶ್ಯವಾಗಿ ಮಾಡಬೇಕು.’
ಶಾಸ್ತ್ರ : ಶಂಖನಾದದಿಂದ ಪ್ರಾಣಾಯಾಮದ ಅಭ್ಯಾಸವಾಗುತ್ತದೆ; ಅಷ್ಟೇ ಅಲ್ಲದೇ ಶಂಖನಾದವು ಎಲ್ಲಿಯವರೆಗೆ ಕೇಳಿಸುತ್ತದೆಯೋ, ಅಲ್ಲಿಯವರೆಗೆ ಪರಿಸರದಲ್ಲಿ ಭೂತ, ಮಾಟ ಇತ್ಯಾದಿ ದುಷ್ಟಶಕ್ತಿಗಳ ತೊಂದರೆಯಾಗುವುದಿಲ್ಲ.
* ಶಿವನಿಗೆ ತುಳಸಿಯನ್ನು ಅರ್ಪಿಸುವುದಿಲ್ಲ; ಆದರೆ ಸಾಲಿಗ್ರಾಮಕ್ಕೆ ಅಥವಾ ವಿಷ್ಣು ವಿನ ಮೂರ್ತಿಗೆ ಅರ್ಪಿಸಿದ ತುಳಸಿಯನ್ನು ಶಿವನಿಗೆ ಶಾಸ್ತ್ರ : ಶಿವನು ಶ್ರೀ ವಿಷ್ಣುವನ್ನು ಗುರು ರೂಪ ದಲ್ಲಿ ನೋಡುತ್ತಾನೆ. ಶಿವನು ವಿಷ್ಣು ಭಕ್ತನಾಗಿದ್ದಾನೆ; ಆದುದರಿಂದ ವಿಷ್ಣುವಿಗೆ ಅರ್ಪಿಸಿರುವ ತುಳಸಿಯು ಶಿವನಿಗೆ ಪ್ರಿಯವಾಗಿರುತ್ತದೆ.

* ಜ್ಯೇಷ್ಠ ಕೃಷ್ಣ ಅಷ್ಟಮಿಯಂದು ಶಂಕರನ ಪೂಜೆಯನ್ನು ಮತ್ತು ಚತುರ್ದಶಿಯಂದು ರೇವತಿಯ ಪೂಜೆಯನ್ನು ನೀಲಿ ಹೂವುಗಳಿಂದ ಮಾಡಬೇಕು. ಶಿವನಿಗೆ ಕೇದಗೆಯ ತುರಾಯಿಯನ್ನು ಮಹಾಶಿವ ರಾತ್ರಿಯ ವ್ರತದ ಉದ್ಯಾಪನೆಯ ಸಮಯ ದಲ್ಲಿಯೇ ಅರ್ಪಿಸಬೇಕು.’
ಶಾಸ್ತ್ರ : ಕಾಲಕ್ಕನುಸಾರ ದೇವತೆಗಳ ಪೂಜೆಯ ಸಾಮಗ್ರಿಗಳಲ್ಲಿ ಬದಲಾವಣೆಯಾಗುತ್ತದೆ, ಉದಾ. ಕೃಷ್ಣ ಅಷ್ಟ ಮಿಯ ದಿನ ನೀಲಿ ಬಣ್ಣದಲ್ಲಿ ಹಸಿರು ಬಿಲ್ವ ಪತ್ರೆಯಂತೆ ಶಿವತತ್ತ್ವವನ್ನು ಗ್ರಹಿಸುವ ಕ್ಷಮತೆ ಬರುತ್ತದೆ. ಆದುದರಿಂದ ಆ ದಿನ ಶಿವನಿಗೆ ನೀಲಿ ಹೂವುಗಳನ್ನು ಅರ್ಪಿಸುತ್ತಾರೆ.

* ಶಿವಲಿಂಗಕ್ಕೆ ಅರ್ಪಿಸಿದ ಬಿಲ್ವಪತ್ರೆ, ಬಿಳಿ ಹೂವು ಮತ್ತು ನೈವೇದ್ಯವನ್ನು ಸ್ವೀಕರಿಸಬಾರದು.’
ಶಾಸ್ತ್ರ : ಶಿವನು ವೈರಾಗ್ಯದ ದೇವತೆಯಾಗಿದ್ದಾನೆ. ಸಾಮಾನ್ಯ ವ್ಯಕ್ತಿಯು ಶಿವನಿಗೆ ಅರ್ಪಿಸಿದ ವಸ್ತುಗಳನ್ನು ಸ್ವೀಕರಿಸಿದರೆ ಅವ ನಿಗೆ ವೈರಾಗ್ಯ ಬರುವ ಸಾಧ್ಯತೆಯಿರುತ್ತದೆ. ಸಾಮಾನ್ಯ ವ್ಯಕ್ತಿಗೆ ವೈರಾಗ್ಯ ಬೇಕಾಗಿರುವುದಿಲ್ಲ. ಶಿವಲಿಂಗಕ್ಕೆ ಅರ್ಪಿಸಿದ ವಸ್ತುಗಳನ್ನು ತೆಗೆದುಕೊಳ್ಳಬಾರದು ಎಂದು ಹೇಳಲಾಗಿದೆ. ಶೇ. 50 ಕ್ಕಿಂತ ಹೆಚ್ಚು ಮಟ್ಟವಿರುವ ವ್ಯಕ್ತಿಗೆ ಇದು ಅನ್ವಯಿಸುವುದಿಲ್ಲ, ಏಕೆಂದರೆ ಮಟ್ಟವು ಹೆಚ್ಚಿರುವುದರಿಂದ ವೈರಾಗ್ಯ ಲಹರಿಗಳ ಪರಿಣಾಮವು ಅವನ ಮೇಲಾಗುವುದಿಲ್ಲ. ಅವನಲ್ಲಿ ಮಾಯೆಯಿಂದ ದೂರ ಹೋಗುವ ವಿಚಾರ ಗಳು ಆಗಲೇ ಪ್ರಾರಂಭವಾಗಿರುತ್ತವೆ. ಅದರಂತೆ ಶೇ. 50 ಕ್ಕಿಂತ ಹೆಚ್ಚು ಮಟ್ಟ ವಿರುವ ವ್ಯಕ್ತಿಯು ಸ್ಥೂಲ ಕರ್ಮಕಾಂಡದ ಆಚೆಗೆ ಹೋಗಿರುವುದರಿಂದ ಅವನಲ್ಲಿ ಮಾನಸ-ಉಪಾಸನೆಯು ಪ್ರಾರಂಭವಾಗಿರುತ್ತದೆ. ಇಂತಹ ವ್ಯಕ್ತಿಯ ಮನಸ್ಸಿನಲ್ಲಿ ಶಿವನಿಗೆ ವಸ್ತುಗಳನ್ನು ತೆಗೆದು ಕೊಳ್ಳಬೇಕು’ ಎಂಬ ಕರ್ಮಕಾಂಡದ ವಿಚಾರ ಗಳು ಬರುವ ಸಾಧ್ಯತೆಗಳೇ ಕಡಿಮೆಯಿರುತ್ತವೆ.

* ಶೈವರು, ಕಾಪಾಲಿಕರು, ಗೋಸಾವಿ ಗಳು, ವೀರಶೈವ ಇತ್ಯಾದಿ ಸಂಪ್ರದಾಯದವರು ತಮ್ಮ-ತಮ್ಮ ಸಂಪ್ರದಾಯಕ್ಕನು ಸಾರ ಪಾರ್ಥಿವಲಿಂಗ, ಕಂಠಸ್ಥಲಿಂಗ (ಕೊರಳಿನಲ್ಲಿ ಧರಿಸಿರುವ ಬೆಳ್ಳಿಯ ಪೆಟ್ಟಿಗೆಯಲ್ಲಿನ ಲಿಂಗ), ಸ್ಫಟಿಕಲಿಂಗ, ಬಾಣಲಿಂಗ, ಪಂಚಸೂತ್ರಿಲಿಂಗ, ಪಾಷಾಣಲಿಂಗ ಇಂತಹ ವಿಧದ ಲಿಂಗಗಳನ್ನು ಶಿವಪೂಜೆಯಲ್ಲಿ ಉಪಯೋಗಿಸುತ್ತಾರೆ.’

Leave a Reply

Your email address will not be published. Required fields are marked *

11 − two =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top