About Us Advertise with us Be a Reporter E-Paper

Breaking Newsದೇಶಪ್ರಚಲಿತ

ಪ್ರಧಾನಿ ಮೋದಿ ಹತ್ಯೆಗೆ ಸಂಚು: ಐವರ ಗೃಹಬಂಧನ ಅವಧಿ ವಿಸ್ತರಿಸಿದ ಸುಪ್ರೀಂ

ದೆಹಲಿ: ಭೀಮಾ-ಕೋರೆಗಾಂವ್ ಹಿಂಸಾಚಾರ ಮತ್ತು ಪ್ರಧಾನಿ ಮೋದಿ ಹತ್ಯೆಗೆ ಸಂಚು ರೋಪಿಸಿದ ಆರೋಪಕ್ಕೆ
ಸಂಬಂಧಿಸಿದಂತೆ ಐವರು ಸಾಮಾಜಿಕ ಹೋರಾಟಗಾರರ ಗೃಹಬಂಧನದ ಅವಧಿ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 12ರವರೆಗೆ ವಿಸ್ತರಿಸಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ವಿಶೇಷ ಪೀಠ ಹಾಗೂ ತನಿಖಾಧಿಕಾರಿಗಳ ಮನವಿ ಮೇರೆಗೆ ಹೋರಾಟಗಾರರ ಗೃಹಬಂಧನ ಅವಧಿ ವಿಸ್ತರಣೆ ಮಾಡಿದೆ. ಈ ಬಗ್ಗೆ ಪುಣೆ ಪೊಲೀಸ್ ಉಪಾಯುಕ್ತರು ಸಲ್ಲಿಸಿದ ಅಫಿಡವಿಟ್ ಸ್ವೀಕರಿಸಿದ ಸುಪ್ರೀಂ ಕೋರ್ಟ್ ಗೃಹ ಬಂಧನ ಅವಧಿ ವಿಸ್ತಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ಮಹರಾಷ್ಟ್ರದ ಪೊಲೀಸರು ಸುದ್ದಿಗೋಷ್ಠಿ ನಡಿಸಿರುವು ಕಟುದನಿಯಗಳಲ್ಲಿ ಆಕ್ಷೇಪಿಸಿತ್ತು. ಪ್ರಕರಣ ಸಾಕ್ಷ್ಯ ವರ್ತಿಸಬೇಕು ಈ ಕುರಿತು ಸರಕಾರ ಅಗತ್ಯೆ ಸೂಚನೆ ನೀಡಬೇಕು ಎಂದು ಹೇಳಿತು. ಈ ಪ್ರಕರಣದ ವಿವರಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳುದಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕು ಎನ್ನುವ ಮನವಿಯನ್ನು ತಳ್ಳಿಹಾಕಿತು.

ಮಹಾರಾಷ್ಟ್ರ ಸರಕಾರ ಗೃಹ ಬಂಧನದಲ್ಲಿರುವ ಐವರು ಹೋರಾಟಗಾರಾದ ವರವರ ರಾವ್, ಭಾರದ್ವಾಜ್, ಗೌತಮ್ ನವ್‌ಲಖಾ, ಅರುಣ್ ಫೆರೇರಿಯಾ, ವರ್ನಾನ್ ಗೊನ್ಸಾಲ್ವೇಸ್  ಅವರು ನಿಷೇಧಿತ ನಕ್ಸಲ್ ಸಂಘಟನೆ ಸಿಪಿಐಎಂನೊಂದಿಗೆ ಸಂಪರ್ಕದಲ್ಲಿದ್ದರು. ಈ ಬಗ್ಗೆ ತಮಗೆ ಪ್ರಬಲ ಸಾಕ್ಷ್ಯಾಧಾರಗಳು ದೊರೆತಿದ್ದು, ಇದೇ ಕಾರಣಕ್ಕೆ ಅವರನ್ನು ಗೃಹ ಬಂಧನದಲ್ಲಿಡಲಾಗಿದೆಯೇ ಹೊರತು ಅವರ ವಿಚಾರವಾದಿ ತತ್ವಗಳಿಂದಾಗಿ ಅಲ್ಲ ಎಂದು ಸರಕಾರ ಸ್ಪಷ್ಟ ಪಡಿಸಿತ್ತು.

Tags

Related Articles

Leave a Reply

Your email address will not be published. Required fields are marked *

Language
Close