About Us Advertise with us Be a Reporter E-Paper

ಅಂಕಣಗಳು

ಅಡುಗೆ ಮನೆಯಿಂದ ಆರಂಭವಾದ ಬೃಹತ್ ಉದ್ಯಮ!

ಅಡುಗೆ ಮನೆಗೂ ಬೃಹತ್ ಉದ್ಯಮಕ್ಕೂ ಎಲ್ಲಿಗೆಲ್ಲಿಯ ಸಂಬಂಧ ಎನ್ನಬೇಡಿ. ಏಕೆಂದರೆ ಇಂದಿನ ಅನೇಕ ಸುವಿಖ್ಯಾತ ಉದ್ಯಮಗಳು ಅಡುಗೆ ಮನೆಯಿಂದಲೇ ಪ್ರಾರಂಭವಾದವು! ನಂಬಲರ್ಹವಾದ ನಿಜಜೀವನದ ಹಲವಾರು ಉದಾಹರಣೆಗಳು ಇಲ್ಲಿವೆ.

ಜಗತ್ತಿನಲ್ಲೇ ಅತ್ಯಂತ ಹೆಚ್ಚು ಮಾರಾಟವಾಗುವ ಬಟ್ಟೆ ಒಗೆಯುವ ಪೌಡರ್ ‘ನಿರ್ಮಾ’ದ ಪ್ರಾರಂಭ ಹೇಗಾಯಿತು ಗೊತ್ತೇ? 1969ರ ಸುಮಾರಿನಲ್ಲಿ ಬಟ್ಟೆ ಒಗೆಯುವ ಪೌರುಗಳು ಕಿಲೋಗ್ರಾಮ್ ಒಂದಕ್ಕೆ ಹದಿನೈದು-ಹದಿನಾರು ರೂಪಾಯಿಗಳ  ಬೆಲೆಯಲ್ಲಿ ಮಾರಾಟವಾಗುತ್ತಿದ್ದವು. ಸ್ವತಃ ರಾಸಾಯನಿಕ ತಜ್ಞರಾಗಿದ್ದ ಕರ್ಸನ್ ಭಾಯ್ ಪಟೇಲರು ಮನೆಯ ಬಳಕೆಗಾಗಿ ಬಟ್ಟೆ ಒಗೆಯುವ ಪೌಡರನ್ನು ತಮ್ಮ ಅಡುಗೆ ಮನೆಯಲ್ಲಿಯೇ ಮಿಶ್ರಣ ಮಾಡಿ ತಯಾರಿಸಿದರು. ಅದರಿಂದ ಒಗೆದ ಬಟ್ಟೆಗಳು ಉಜ್ವಲ ಬಿಳುಪನ್ನು ಹೊಂದಿದ್ದವು. ಅದರಿಂದ ಉತ್ತೇಜಿತರಾದ ಪಟೇಲರು ಪ್ರತಿದಿನ ಹತ್ತಾರು ಕೆಜಿಯಷ್ಟು ಪೌಡರ್ ತಯಾರಿಸಿ ಸಹೋದ್ಯೋಗಿಗಳಿಗೆ, ಗೆಳೆಯರಿಗೆ ಮಾರುತ್ತಿದ್ದರು. ಕಿಲೋಗ್ರಾಮೊಂದಕ್ಕೆ ಮೂರೂವರೆ ರೂಪಾಯಿ ಬೆಲೆಯಿದ್ದ ಪೌಡರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

ಪಟೇಲರು ಪೌಡರ್ ಉತ್ಪಾದನೆಯನ್ನು ಮನೆಯ ಹಿತ್ತಲಲ್ಲೇ ಮಾಡುತ್ತಿದ್ದರು.  ಸೈಕಲ್ಲಿನಲ್ಲಿ ಹೇರಿಕೊಂಡು ಮಾರಾಟ ಮಾಡುತ್ತಿದ್ದರು. ದಿನೇದಿನೇ ಬೆಳೆಯುತ್ತ ಹೋದ ಪಟೇಲರು ನಿರ್ಮಾ ಸಾಬೂನು ಪುಡಿಯ ಉತ್ಪಾದನೆಗೆ ದೊಡ್ಡ ಫ್ಯಾಕ್ಟರಿಯನ್ನೇ ಪ್ರಾರಂಭಿಸಿದರು. ಇಂದು ನಿರ್ಮಾ ವಾರ್ಷಿಕ ಎಂಟು ಲಕ್ಷ ಟನ್ನಿಗೂ ಅಧಿಕ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ನಾಲ್ಕೈದು ಸಾವಿರ ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿದೆ. ಅಂದಹಾಗೆ ಅವರು ಪೌಡರಿಗೆ ’ನಿರ್ಮಾ’ ಎಂಬ ಹೆಸರಿಟ್ಟ ಕಾರಣ ನಿರ್ಮಲ ಎಂಬುದು ಅವರ ಮುದ್ದಿನ ಮಗಳ ಹೆಸರು!

ಮತ್ತೊಬ್ಬ ಬಾಲಕ, ನಾಚಿಕೆಯ ಸ್ವಭಾವದವನು. ಯಾವಾಗಲೂ ತಾಯಿಯ  ತಿರುಗುತ್ತಿದ್ದ. ತಾಯಿ-ಮಗ ಬಡವರೇ, ಆದರೆ ತಾಯಿಗೆ ಬಟ್ಟೆಯ ಹುಚ್ಚು. ದೊಡ್ಡದೊಡ್ಡ ಅಂಗಡಿಗೆ ಹೋಗುತ್ತಿದ್ದರು. ಪ್ರದರ್ಶನಕ್ಕಿಟ್ಟಿರುವ ಬಟ್ಟೆಗಳನ್ನೆಲ್ಲ ನೋಡುತಿದ್ದರು, ಬೆಲೆ ಕೇಳುತ್ತಿದ್ದರು. ಡಿಸ್ಕೌಂಟ್ ಇದೆಯೇ ಎಂದು ವಿಚಾರಿಸುತ್ತಿದ್ದರು, ಇಲ್ಲವೆಂದರೆ ವಾಪಸ್ಸು ಬರುತ್ತಿದ್ದರು. ಆಕೆಗೆ ಅಂಗಡಿಯಲ್ಲಿನ ಬಟ್ಟೆಗಳನ್ನು ನೋಡುವುದರಲ್ಲಿ ಅವುಗಳನ್ನು ಕಲ್ಪಿಸಿಕೊಳ್ಳುವುದರಲ್ಲಿಯೇ ಆನಂದ ಸಿಗುತ್ತಿತ್ತು. ಬಾಲಕನ ಅಜ್ಜಿ ಮನೆಯಲ್ಲಿಯೇ ನೆರೆಹೊರೆಯವರ ಬಟ್ಟೆಗಳನ್ನು ಹೊಲಿದು ಕೊಡುತ್ತಿದರು. ಬಾಲಕ, ತಾಯಿ ಮತ್ತು ಅಜ್ಜಿಯನ್ನು ನೋಡುನೋಡುತ್ತ ಬಟ್ಟೆಗಳಲ್ಲಿ ಆಸಕ್ತಿಯನ್ನು ಬೆಳಸಿಕೊಂಡ. ಒಮ್ಮೆ ಹೇಗೋ ಮಾಡಿ ಒಂದು  ಬಟ್ಟೆ ಹೊಲಿಯುವ ಮಿಷನ್ನನ್ನು ಕೊಂಡುಕೊಂಡ. ಅದನ್ನು ಮನೆಯ ಅಡುಗೆಮನೆಯಲ್ಲಿಟ್ಟು ಬಟ್ಟೆಗಳನ್ನು ಹೊಲಿಯಲಾರಂಭಿಸಿದ. ಮುಂದೆ ಆತ ಬಹು ದೊಡ್ಡ ಸಿದ್ಧ ಉಡುಪುಗಳ (ರೆಡಿಮೇಡ್) ತಯಾರಕನಾದ. ಕ್ಯಾಲ್ವಿನ್ ಕ್ಲೈನ್ ಅವರ ಹೆಸರು. ಅವರ ಕಂಪೆನಿ ಕ್ಯಾಲ್ವಿನ್ ಕ್ಲೈನ್ (್ಚ್ಝಜ್ಞಿ ್ಝಛಿಜ್ಞಿ) ಇಂದು ಕೋಟ್ಯಾಂತರ ಡಾಲರುಗಳ ವ್ಯವಹಾರ ಮಾಡುತ್ತಿದೆ. ಜಗತ್ತಿನಾದ್ಯಂತ, ಎಲ್ಲ ದೇಶಗಳಲ್ಲೂ, ಹನ್ನೆರಡು ಸಾವಿರಕ್ಕೂ ಮೀರಿದ ಅಂಗಡಿಗಳಲ್ಲಿ, ಅದರ ಬಟ್ಟೆಗಳು ಮಾರಾಟವಾಗುತ್ತಿವೆ.

ಜರ್ಮನಿಯಲ್ಲೊಬ್ಬ ಗುಮಾಸ್ತರಿದ್ದರು. ಹೆಂಡತಿ ಮತ್ತಿಬ್ಬರು ಮಕ್ಕಳ ಪುಟ್ಟ ಕುಟುಂಬ.  ಫೋಟೋಗ್ರಫಿಯಲ್ಲಿ ಬಹಳ ಆಸಕ್ತಿ. ತಮ್ಮ ಬಿಡುವಿನ ಸಮಯದಲ್ಲಿ ಕ್ಯಾಮೆರಾದೊಂದಿಗೆ ಪ್ರಯೋಗಗಳನ್ನು ಮಾಡುತ್ತಿದ್ದರು. ಅದು ಆಗಷ್ಟೇ ಕ್ಯಾಮೆರಾಗಳು ಬಳಕೆಗೆ ಬಂದ ಕಾಲ. ಫೋಟೋ ಫಿಲ್ಮ್ ಟೆಕ್ನಾಲಜಿ ಇನ್ನು ಬಾಲ್ಯಾವಸ್ಥೆಯಲ್ಲಿತ್ತು. ಆತ ತನ್ನ ಹೆಂಡತಿ ಅನುಮತಿಯೊಂದಿಗೆ ಅಡುಗೆಮನೆಯಲ್ಲಿ ಪ್ರಯೋಗಾಲಯವನ್ನು ಸ್ಥಾಪಿಸಿದರು. ಪ್ರಯೋಗಗಳಲ್ಲಿ ಯಶಸ್ವಿಯೂ ಆದರು. ಮುಂದೆ ಅವರು ಕಂಡುಹಿಡಿದ ತಂತ್ರಜ್ಞಾನದಿಂದಾಗಿ ಬಹುದೊಡ್ಡ ಫೋಟೋ-ಫಿಲ್ಮ್ ಕಾರ್ಖಾನೆ ಮೊದಲಾಯಿತು. ಆ ಗುಮಾಸ್ತರ ಹೆಸರು ಜಾರ್ಜ್ ಈಸ್ಟ್ಮನ್! ಈಸ್ಟ್ಮನ್ ಕೊಡಾಕ್ ಅವರ ಕಂಪೆನಿಯ ಹೆಸರು!

ಬನ್ನಿ  ಬೃಹತ್ ಉದ್ಯಮವನ್ನು ಅರಂಭಿಸಲು ನಮ್ಮ ಅಡುಗೆ ಮನೆಯೂ ಸೂಕ್ತ ಸ್ಥಳವಾಗಬಹುದು. ಆದರೆ ಅದಕ್ಕೆ ಹೆಂಡತಿಯ ಅನುಮತಿ ಇರಬೇಕು! ಅದಕ್ಕಿಂತ ಹೆಚ್ಚಾಗಿ ಒಳ್ಳೆಯ ಐಡಿಯಾ ಇರಬೇಕಲ್ಲವೇ?

Tags

Related Articles

Leave a Reply

Your email address will not be published. Required fields are marked *

Language
Close