About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಬಿಗ್ ಲಿಟ್ಲ್‌ ಬುಕ್ ಸಾಹಿತ್ಯ ಪ್ರಶಸ್ತಿ ಪಡೆದ ನಾಗೇಶ ಹೆಗಡೆ, ನಿನಾ ಸಬ್ನಾನಿ

ಬೆಂಗಳೂರು: ಮಕ್ಕಳ ಸಾಹಿತ್ಯದಲ್ಲಿ ಸೇವೆಗೆ ಸಲ್ಲಿಸಿದವರಿಗೆ ನೀಡುವ ಬಿಗ್ ಲಿಟ್ಲ್‌ ಬುಕ್ ಪ್ರಶಸ್ತಿ 2018ರ ಪುರಸ್ಕೃತರನ್ನು ಪ್ರಕಟಿಸಲಾಗಿದ್ದು, ಟಾಟಾ ಟ್ರಸ್ಟ್‌ ಪರಾಗ ಇನಿಷಿಯೇಟಿವ್ ಮುಖ್ಯಸ್ಥ ಸ್ವಹಾ ಸಾಹೂ, ಅವರು ನಾಗೇಶ ಹೆಗಡೆ ಮತ್ತು ನಿನಾ ಸಬ್ನಾನಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಮುಂಬೈ ಲಿಟರರಿ ಫೆಸ್ಟ್‌, ಟಾಟಾ ಲಿಟರೇಚರ್ ಲೈವ್ ಸಹಯೋಗದಲ್ಲಿ ಸ್ಥಾಪಿಸಿರುವ ಬಿಗ್ ಲಿಟ್ಲ್‌ ಬುಕ್ ಪ್ರಶಸ್ತಿ 2018ರ ಪುರಸ್ಕೃತರನ್ನು ಪ್ರಕಟಿಸಲಾಗಿದ್ದು, ಸ್ವಹಾ ಸಾಹೂ ನಾಗೇಶ ಹೆಗಡೆ (ಕನ್ನಡ) ಮತ್ತು ನಿನಾ ಸಬ್ನಾನಿ (ಚಿತ್ರಕಲೆ) ಅವರು ಆಯ್ಕೆಯಾಗಿದ್ದರು.

ಮಕ್ಕಳ ಸಾಹಿತ್ಯದಲ್ಲಿ ಸಲ್ಲಿಸಿದ ಸೇವೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಟಾಟಾ ಟ್ರಸ್ಟ್‌‌ನ ಪರಾಗ್ ಇನಿಷಿಯೇಟಿವ್ ಭಾಗವಾಗಿ ದೇಶದಲ್ಲೇ ಮೊದಲ ಬಾರಿಗೆ ನೀಡಲಾಗುತ್ತಿರುವ ಬಿಗ್ ಲಿಟ್ಲ್‌ ಬುಕ್ ಅವಾರ್ಡ್, ಮಕ್ಕಳ ಸಾಹಿತ್ಯ, ಚಿತ್ರಕಲೆ ಕ್ಷೇತ್ರದಲ್ಲಿ ಸಲ್ಲಿನ ಸಾಧನೆ ಗುರುತಿಸಿ ಪ್ರತಿವರ್ಷ ಒಂದೊಂದು ಭಾಷೆಯಲ್ಲಿ ಪ್ರಶಸ್ತಿ ನೀಡಲಾಗುತ್ತದೆ.

ಮೊದಲ ಎರಡು ಆವೃತ್ತಿಯಲ್ಲಿ ಮರಾಠಿ ಮತ್ತು ಬೆಂಗಾಳಿ ಭಾಷೆಯಲ್ಲಿ ಪ್ರಶಸ್ತಿ ನೀಡಲಾಗಿದ್ದು, ಮೂರನೇ ವರ್ಷ ಕನ್ನಡದಲ್ಲಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ಪ್ರಶಸ್ತಿಯ ಮೂಲಕ ಭಾರತೀಯ ಭಾಷೆಯಲ್ಲಿ ಮಕ್ಕಳ ಸಾಹಿತ್ಯವನ್ನು ಉತ್ತೇಜಿಸಲಾಗುತ್ತಿದೆ ಎಂದು ಟಾಟಾ ಟ್ರಸ್ಟ್‌‌ನ ಪರಾಗ್ ಇನಿಷಿಯೇಟಿವ್‌ನ ಸ್ವಹಾ ಸಾಹೂ ತಿಳಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close